ತುಮಕೂರು | ಜಿಲ್ಲೆಯ ತಿಪಟೂರು (Tipatur) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ. ಷಡಕ್ಷರಿ (MLA K. Shadakshari) ವಿರುದ್ಧ ಕಾಂಗ್ರೆಸ್ ಮುಖಂಡ ಲೋಕೇಶ್ವರ್ (Lokeshwar) ಅಸಮಾಧಾನವನ್ನು ಹೊರ ಹಾಕಿದ್ದಾರೆ.
Pavagada Fire accident | ಕಟ್ಟಿಗೆ ಮಿಲ್ ನಲ್ಲಿ ಬೆಂಕಿಗೆ ಆಹುತಿಯಾದ ಮರದ ದಿಮ್ಮಿಗಳು..! – karnataka360.in
ಶಾಸಕರಾಗಿ ಆಯ್ಕೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಶಾಸಕ ಕೆ. ಷಡಕ್ಷರಿ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪ್ರತಿಯೊಂದರಲ್ಲೂ ಕೂಡ ನಮ್ಮನೆಲ್ಲ ಕಡೆಗಣಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಿಪಟೂರು ಸಮೀಪದ ಹತ್ಯಾಳ ಬೆಟ್ಟದ ಬಳಿ ಇರುವ ತಮ್ಮ ತೋಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ತಮ್ಮ ಬೆಂಬಲಿಗರ ಸಭೆ ನಡೆಸಿದ ಲೋಕೇಶ್ವರ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಬೇಕೆ, ಬೇಡವೇ ಎಂಬ ಬಗ್ಗೆ ಚರ್ಚೆ ನಡೆಸಿದರು.
ಮುದ್ದಹನುಮೇಗೌಡರ ಮೇಲೆ ನಮಗೆ ಅಪಾರವಾದ ಗೌರವ, ಪ್ರೀತಿ ಇದೆ. ಆದರೆ ಕೆಲಸ ಮಾಡಲು ಆಗುತ್ತಿಲ್ಲ. ಶಾಸಕ ಷಡಕ್ಷರಿ ಅವರ ನಡೆಯಿಂದ ಸುಮ್ಮನೆ ಇರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ದರೆ ನಾವು ತಟಸ್ಥರಾಗಿ ಇರುತ್ತೇವೆ ಎಂದು ಶಾಸಕ ಶಡಕ್ಷರಿ ವಿರುದ್ಧ ಕಾಂಗ್ರೆಸ್ ಮುಖಂಡ ಲೋಕೇಶ್ವರ್ ಅಸಮಾಧಾನವನ್ನು ಹೊರಹಾಕಿದ್ದಾರೆ.