ಕೃಷಿ ಮಾಹಿತಿ | ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ 2023-24 ನೇ ಸಾಲಿಗೆ ಅಧಿಸೂಚನೆ ಹೊರಡಿಸಿರುವ ಬೆಳೆಗಳಿಗೆ ಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿ ವಿಮೆಗೆ ಒಳಪಡಿಸಿದ್ದು ಹಾಗೂ ಬೆಳೆಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿರುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ ಬೆಳೆಗಳಾದ ಅಡಿಕೆ, ದಾಳಿಂಬೆ, ಪರಂಗಿ ಹಾಗೂ ಮಾವು, ಬೆಳೆಗಳಿಗೆ ವಿಮೆ ಮಾಡಿಸುವ ರೈತರು ಕೂಡಲೇ ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಭೂಮಿ ಹೊಂದಿರುವ ದಾಖಲೆಗಳಾದ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿಗಳನ್ನು ಮತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಆಯಾ ತಾಲ್ಲೂಕಿನ ಯಾವುದಾದರು ರಾಷ್ಟ್ರೀಯ ಅಧಿಕೃತ ಬ್ಯಾಂಕುಗಳಲ್ಲಿ/ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಬಹುದಾಗಿರುತ್ತದೆ.
ಈ ಯೋಜನೆಯಲ್ಲಿ ಒಳಪಡಿಸಲಾಗುವ ಎಲ್ಲಾ ಬೆಳೆಗಳಿಗೆ ಬೆಳೆಸಾಲ ಪಡೆಯುವ/ಪಡೆದ ರೈತರನ್ನು ಕಡ್ಡಾಯವಾಗಿ ಬೆಳೆವಿಮೆಗೆ ಒಳಪಡಿಸುವುದು ಹಾಗೂ ಬೆಳೆಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿ ಬೆಳೆವಿಮೆಗೆ ಒಳಪಡಿಸಲಾಗುವುದು ಎಂದು ತಿಳಿಸಿದೆ. ಅಡಿಕೆ, ದಾಳಿಂಬೆ & ಪರಂಗಿ ಬೆಳೆಗಳಿಗೆ ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕವು 15/07/2023 ಮತ್ತು ಮಾವು ಬೆಳೆಗೆ 31/07/2023 ಕೊನೆಯ ದಿನಾಂಕವಾಗಿರುತ್ತದೆ.
ಬೆಳೆ ವಿಮೆಯಲ್ಲಿ ಒಳಪಟ್ಟ ಬೆಳೆಗಳ ವಿಮಾಕಂತಿನ ವಿವರ
ಅಡಿಕೆ ಬೆಳೆ ಪ್ರತಿ ಹೆಕ್ಟೇರಿಗೆ 128000 ರೂ. ವಿಮಾ ಮೊತ್ತ ಆಗಿದ್ದು, ಪ್ರತಿ ಹೆಕ್ಟೇರಿಗೆ ಶೇಕಡಾ 5 ರಂತೆ ರೈತರು 6400 ವಿಮಾ ಕಂತಿನ ದರವನ್ನು ಪಾವತಿಸಬೇಕಾಗಿದೆ. ದಾಳಿಂಬೆ ಬೆಳೆ ಪ್ರತಿ ಹೆಕ್ಟೇರಿಗೆ 127000 ರೂ. ವಿಮಾ ಮೊತ್ತ ಆಗಿದ್ದು, ಪ್ರತಿ ಹೆಕ್ಟೇರಿಗೆ ಶೇಕಡಾ 5ರಂತೆ ರೈತರು 6350 ವಿಮಾ ಕಂತಿನ ದರ ಪಾವತಿಸಬೇಕಾಗಿದೆ. ಪರಂಗಿ ಬೆಳೆ ಪ್ರತಿ ಹೆಕ್ಟೇರಿಗೆ 134000 ರೂ. ವಿಮಾ ಮೊತ್ತ ಆಗಿದ್ದು, ಪ್ರತಿ ಹೆಕ್ಟೇರಿಗೆ ಶೇಕಡಾ 5 ರಂತೆ ರೈತರು 6700 ವಿಮಾ ಕಂತಿನ ದರ ಪಾವತಿಸಬೇಕಾಗಿದೆ. ಮಾವು ಬೆಳೆ ಪ್ರತಿ ಹೆಕ್ಟೇರಿಗೆ 80,000 ರೂ. ವಿಮಾ ಮೊತ್ತ ಆಗಿದ್ದು, ಪ್ರತಿ ಹೆಕ್ಟೇರಿಗೆ ಶೇಕಡಾ 5 ರಂತೆ ರೈತರು 4000 ವಿಮಾ ಕಂತಿನ ದರ ಪಾವತಿಸಬೇಕಾಗಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳ ಮೊ.ಸಂ. ತುಮಕೂರು 9844042356, ಗುಬ್ಬಿ 9686056705, ಕುಣಿಗಲ್ ಮೊ.. 9342959690, ತಿಪಟೂರುಮೊ. 9845014293, ಚಿಕ್ಕನಾಯಕನಹಳ್ಳಿ. 9686056705, ಮಧುಗಿರಿ ಮೊ. 9448448970, ತುರುವೇಕೆರೆ 9448416334, ಕೊರಟಗೆರೆ 9480243429, ಪಾವಗಡ ಮೊ. 9482222090 ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು ತೋಟಗಾರಿಕೆ ಉಪನಿರ್ದೇಶಕರ ಮೊ . 9886736664, ಸಹಾಯಕ ತೋಟಗಾರಿಕೆ ಅಧಿಕಾರಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಮೊ. 9632898281ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.