ತುಮಕೂರು | ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಡಿ ಗ್ರಾಮದ ಮನೆಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಗಲಾಗಿ ಅಪಾರ ನಷ್ಟವುಂಟಾದ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಹೋಬಳಿ ಬಾಡೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ಕಂಬಗಳಲ್ಲಿ ಲೈನ್ ಗಳು ಬಾಗಿರುವುದನ್ನು ದುರಸ್ಥಿ ಮಾಡದೆ, ಇರುವ ಕಾರಣ ಈ ರೀತಿಯ ಘಟನೆಗಳು ಸಂಭವಿಸಲು ಸಾಧ್ಯ. ಬೆಸ್ಕಾಂ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಲೈನ್ ಗಳು ಕೈಗೆ ಎಟಕುವ ರೀತಿ ಕಂಡರು ಒಂದೊಮ್ಮೆ ರೈತರು ಮಾಹಿತಿ ನೀಡಿದರೂ ಸಹ ಅದರ ಕಡೆ ಗಮನ ಕೊಡದೆ ಈ ರೀತಿಯ ದುರಂತಕ್ಕೆ ಕಾರಣವಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಫೋಟೋಗ್ರಾಫರ್ ಮನೆಯಲ್ಲಿಯೂ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮದುವೆ ಸಮಾರಂಭಕ್ಕೆ ಬಳಸುವ ಸಿಸ್ಟಂ, ಟಿವಿ, ಫ್ಯಾನ್, ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗೆ ಆಹುತಿಯಾಗಿ ಸುಮಾರು 40 ರಿಂದ 50 ಲಕ್ಷದಷ್ಟು ನಷ್ಟವಾಗಿದ್ದರೆ, ಗ್ರಾಮದ ಬಹುತೇಕ ಎಲ್ಲಾ ಮನೆಗಳಲ್ಲಿಯೂ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಗಲಾಗಿದ್ದು ಇಡಿ ಊರಿನ ರೈತರಿಗೆ ಆಗಿರುವ ನಷ್ಟವನ್ನು ಯಾರು ಪರಿಸುತ್ತಾರೋ ಕಾದು ನೋಡಬೇಕಿದೆ. ಈ ಘಟನೆಗೆ ಬೆಸ್ಕಾಂ ಇಲಾಖೆ ಕಾರಣವಾಗಿದ್ದು ಆಗಿರುವ ನಷ್ಟವನ್ನು ಭರಿಸಬೇಕಿದೆ. ಶಾಸಕ ಎಸ್ ಆರ್ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದು, ಅವರಿಗೆ ಆಗಿರುವ ನಷ್ಟವನ್ನು ಸರ್ಕಾರದ ಮಟ್ಟದಲ್ಲಿಯೇ ಕೊಡಿಸುವ ಮುಖೇನ ಮೊದಲಿನಂತೆ ಜೀವನ ನಡೆಸಲು ಅವಕಾಶ ಕಲ್ಪಿಸಿ ಕೊಡುತ್ತಾರೆಯೋ ಕಾದು ನೋಡಬೇಕಿದೆ.