Thursday, December 12, 2024
Homeಜಿಲ್ಲೆವಿಜಯನಗರTemple theft | ಖಾಕಿ ಪಡೆಯ ಬಲೆಗೆ ಬಿದ್ದ ದೇವಾಲಯಕ್ಕೆ ಕನ್ನ ಹಾಕಿದ್ದ ಕಳ್ಳರು  

Temple theft | ಖಾಕಿ ಪಡೆಯ ಬಲೆಗೆ ಬಿದ್ದ ದೇವಾಲಯಕ್ಕೆ ಕನ್ನ ಹಾಕಿದ್ದ ಕಳ್ಳರು  

ವಿಜಯನಗರ  : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಈಚಲಬೊಮ್ಮನಹಳ್ಳಿ ಹೊರವಲಯದಲ್ಲಿರುವ ಶ್ರೀ ಉಡುಸಲಮ್ಮ ದೇವಿ ದೇವಸ್ಥಾನ ಕಳ್ಳತನ (Temple theft) ಪ್ರಕರಣವನ್ನು ಕೂಡ್ಲಿಗಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು  ಬಂಧಿತರು ಕಳ್ಳತನ ಮಾಡಿದ್ದ, ಒಟ್ಟು 1,95,839 ರೂ ಬೆಲೆಯ ಸಾಮಾಗ್ರಿಗಳನ್ನು ಜಪ್ತಿ ಮಾಡಿದ್ದಾರೆ.

ಕಳ್ಳತನ ಮಾಡಿದ್ದ ಹೂವಿಹಡಗಲಿ ತಾಲೂಕಿನ ಕೆಂಚಮಲ್ಲನಹಳ್ಳಿಯ ಹಡಪದ ವೀರೇಶ. ಕೂಡ್ಲಿಗಿ ತಾಲೂಕಿನ ಪಾಲಯ್ಯನಕೋಟೆಯ ಹನುಮಂತಪ್ಪ ಎಂದು ಗುರುತಿಸಲಾಗಿದೆ. ಕಳ್ಳತನ ಪ್ರಕರಣ ನ. 23 ರಂದು ರಾತ್ರಿ ನಡೆದಿದ್ದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಬಿ.ಎಲ್. ಹರಿಬಾಬು, ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾದಿಕಾರಿ ಸಲೀಂ ಪಾಷ ರವರ ಸೂಚನೆಯ ಮೇರೆಗೆ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ವಿ ಮಲ್ಲಾಪುರವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಹೆಚ್ ತಳವಾರ ರವರ ನೇತೃತ್ವದಲ್ಲಿ ಕೂಡ್ಲಿಗಿ ಪಿಎಸ್ಐ ಸಿ.ಪ್ರಕಾಶರವರು. ಅಪರಾಧ ನಿಗ್ರಹ ಹಾಗೂ ಅಪರಾಧಿಗಳ ಪತ್ತೆ ದಳ ಸಿಬ್ಬಂದಿಯವರು ಕಳ್ಳರ ಪತ್ತೆ ಕಾರ್ಯಚರಣೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments