ತುಮಕೂರು | ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿಜೆಪಿ ಮತ್ತು ಜೆಡಿಎಸ್ (BJP and JDS) ಮೈತ್ರಿ ಮೂಲಕವಾಗಿ ಚುನಾವಣೆಯನ್ನು ಎದುರಿಸುತ್ತಿವೆ. ರಾಜ್ಯದ ಎಲ್ಲಾ ಭಾಗಗಲ್ಲಿ ಮೈತ್ರಿ ಸಭೆಗಳನ್ನು ನಡೆಸಲಾಗುತ್ತಿದೆ. ಅದೆ ರೀತಿಯಾಗಿ ತುಮಕೂರು ಗ್ರಾಮಾಂತರ (Tumkur) ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಸಭೆಯನ್ನು ನಡೆಸಲಾಗಿದ್ದು ಈ ವೇಳೆ ಡಿಕೆ ಶಿವಕುಮಾರ್ (DK Sivakumar) ವಿರುದ್ಧವಾಗಿ ಗುಡುಗಿದ್ದಾರೆ ಶಾಸಕ ಸುರೇಶ್ ಗೌಡ (Suresh Gowda).
ಸಭೆಯಲ್ಲಿ ಮಾತನಾಡಿದ ಅವರು, ನೀವು ತುಮಕೂರು ಜನರ ನೀರಿನ ಜೊತೆ ಆಟ ಆಡಲು ಹೊರಟಿದ್ದೀರಿ. ಇದನ್ನು ಬಿಟ್ಟುಬಿಡಿ ಇಲ್ಲವಾದರೆ ಇಡೀ ಕಾಂಗ್ರೆಸ್ ಸುಟ್ಟು ಬೂದಿಯಾಗುತ್ತೆ. ನಾನು ಡಾ. ಜಿ ಪರಮೇಶ್ವರ್ ಮತ್ತು ರಾಜಣ್ಣನವರಿಗೆ ಹೇಳುತ್ತೇನೆ ನೀವು ನಮ್ಮ ಜಿಲ್ಲೆಯಿಂದ ಮಂತ್ರಿಯಾಗಿದ್ದೀರಿ, ಜಿಲ್ಲೆಯ ಜನರ ಹಿತ ಕಾಪಾಡಬೇಕು ನೀರಿನ ಸಮಸ್ಯೆಯನ್ನು ನಿವಾರಿಸಬೇಕು. ಮುಂದಿನ ದಿನಗಳಲ್ಲಿ ಈ ಅನ್ಯಾಯ ಸರಿಪಡಿಸದೆ ಇದ್ದರೆ ಚುನಾವಣೆ ಹೊತ್ತಿನಲ್ಲಿ ರಕ್ತಪಾತವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ನಿಮ್ಮ ಆಟ ತುಮಕೂರಿನಲ್ಲಿ ನಡೆಯುವುದಿಲ್ಲ. ನಿಮ್ಮದೇನಿದ್ದರೂ ರಾಮನಗರದಲ್ಲಿ ಮಾತ್ರ. ಅಲ್ಲಿ ಕೂಡ ಡಾ. ಮಂಜುನಾಥ್ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಭವಿಷ್ಯ ನಡೆದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಎಚ್ ಡಿ ದೇವೇಗೌಡರನ್ನು ತುಮಕೂರು ಜಿಲ್ಲೆಗೆ ಕರೆದುಕೊಂಡು ಬಂದು ಸೋಲಿಸಿದ್ದು ಕಾಂಗ್ರೆಸ್ ನವರು. ನಮ್ಮ ಕ್ಷೇತ್ರದಲ್ಲಿ ನಮ್ಮ ವಿರೋಧ ಇದ್ದದ್ದು ಮಾಜಿ ಶಾಸಕ ಗೌರಿಶಂಕರ್ ವಿರುದ್ಧವಾಗಿ ಮಾತ್ರ. ದೇವೇಗೌಡರ ಬಗ್ಗೆ ನಮಗೆ ಅಪಾರವಾದ ಗೌರವ ಇದೆ. ಈ ಚುನಾವಣೆಯಲ್ಲಿ ಭರವಸೆ ನೀಡುತ್ತೇನೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಬಿಜೆಪಿ ಕಾರ್ಯಕರ್ತರಿಗಿಂತ ಹೆಚ್ಚಿನ ಪ್ರೀತಿಯನ್ನು ಜೆಡಿಎಸ್ ಕಾರ್ಯಕರ್ತರಿಗೆ ನೀಡುತ್ತೇನೆ ಎಂದು ಹೇಳಿದರು.