Thursday, December 12, 2024
Homeಜಿಲ್ಲೆತುಮಕೂರುಕೋಮು ದ್ವೇಷ ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ಅಗತ್ಯ..!

ಕೋಮು ದ್ವೇಷ ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ಅಗತ್ಯ..!

ತುಮಕೂರು | ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ಅಥವಾ ಕೋಮು ದ್ವೇಷವನ್ನು ಪ್ರಚೋದಿಸುವ ಕೆಟ್ಟ ಅಂಶಗಳ ವಿರುದ್ಧ ಚುರುಕಿನ ಕಾರ್ಯಾಚರಣೆ ನಡೆಸುವ ಜೊತೆಗೆ ಅನಾವಧೇಯ ಸುದ್ದಿಗಳ ವೈರಲ್‌ಗಳ ವಿರುದ್ಧ ಇನ್ನೂ ಹೆಚ್ಚಿನ ಕಠಿಣಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳಲಿ ಎಂದು ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ (ಆರಿಫ್) ಮನವಿ ಮಾಡಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾತಿ ಮತ್ತು  ಕೋಮು ದ್ವೇಷದ ನಿದರ್ಶನಗಳು ಹೆಚ್ಚಾಗುತ್ತಿವೆ. ಓರ್ವ ಮತಿಗೇಡಿ ಮಾಡುವ ಪ್ರಮಾದವನ್ನು ಒಂದು ಧರ್ಮದ ಹೆಸರಿಗೆ ಹಚ್ಚಿ, ಆ ಧರ್ಮದ ವಿರುದ್ಧ ಮುಗ್ಧ ಜನರನ್ನು ಪ್ರಚೋದಿಸುವ ಕೃತ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬೆಳಗಾವಿ ಜಿಲ್ಲೆ ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮ ಕುಮಾರ ನಂದಿ ಮಹಾರಾಜರು ಹತ್ಯೆಯಾದ ಘಟನೆಗೆ ಇಡೀ ರಾಜ್ಯವೇ ಮರುಗುತ್ತಿದೆ. ಇಂಥಾ ಭೀಬತ್ಸ ಕೃತ್ಯ ಎಸಗಿದವರು ಯಾರೇ ಆಗಿರಲಿ ಅಂಥಾ ದುರಾತ್ಮರಿಗೆ ಗಲ್ಲು ಶಿಕ್ಷೆ ಕೊಟ್ಟರೂ ಕಡಿಮೆಯೇ. ಎಂದು ಹೇಳಿರುವ ಅವರು, ಕೊಲೆಗಾರರಲ್ಲಿ ಓರ್ವ ಮುಸ್ಲಿಮನಿದ್ದಾನೆಂಬ ಕಾರಣಕ್ಕೆ ಇಡೀ ಇಸ್ಲಾಂ ಧರ್ಮದ ಸಮುದಾಯದವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೀಯಾಳಿಸಲಾಗುತ್ತಿದೆ.

ಇಂತಹ ಕೆಟ್ಟ ಅಂಶಗಳು ಮುಗ್ಧ ಜನರ ಮೇಲೆ ಪರಿಣಾಮ ಬೀರುವ ಸಾಮಾಜಿಕ ಸಾಮರಸ್ಯವನ್ನು ಕದಡಬಹುದು. ಅಂಥವರ ಮೇಲೆ ಕ್ರಮ ಕೈಗೊಳ್ಳಲೆಂದು ಹಾಗೂ ಸೈಬರ್ ಅಪರಾಧಗಳ ತ್ವರಿತಗತಿಯಲ್ಲಿ ಪತ್ತೆ ಮಾಡಲು ರಾಜ್ಯದ ಎಲ್ಲಾ ಠಾಣೆಗಳಲ್ಲೂ ಪ್ರತ್ಯೇಕ ಸೈಬರ್ ವಿಂಗ್ ರಚಿಸಲು ಸರ್ಕಾರ ಮುಂದಾಗಿದ್ದು, ಅದನ್ನು ಶೀಘ್ರಗತಿಯಲ್ಲಿ ಜಾರಿಗೆ ತರಬೇಕು ಎಂದು ನಿಸಾರ್ ಅಹಮದ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಂದಿಪರ್ವತ ಆಶ್ರಮದ ಕಾಮ ಕುಮಾರ ನಂದಿ ಮಹಾರಾಜರ ಹತ್ಯೆಯ ಘಟನೆ, ಇಡೀ ರಾಜ್ಯದ  ನಾವೆಲ್ಲರೂ ತಲೆ ತಗ್ಗಿಸುವಂತದ್ದು. ನಾಡಿನ ಇಡೀ ಮುಸ್ಲಿಂ ಸಮುದಾಯ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಜೈನರು ವಿಶ್ವಕ್ಕೆ ಶಾಂತಿ ಕೋರುವ ಅಹಿಂಸೆ ಪ್ರತಿಪಾದನೆ ಮಾಡುವವರು. ವಿಶ್ವಶಾಂತಿ, ಅಹಿಂಸೆ, ಸಮಾನತೆಗಳನ್ನು ಸಾರಿದ್ದು ಜೈನಧರ್ಮ. ಶ್ರೀಗಳ ಹತ್ಯೆ ಧಾರ್ಮಿಕ ಅಥವಾ ರಾಜಕಾರಣ ಪ್ರೇರಿತ ಘಟನೆ ಅಲ್ಲ, ಇದನ್ನ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಖಂಡಿಸಬೇಕು. ಆರೋಪಿಗಳಿಗೆ ಶಿಕ್ಷೆಯಾಗುವವರೆಗೆ ಎಲ್ಲರೂ ಕೈಜೋಡಿಸಿ ನ್ಯಾಯಸಮ್ಮತ ಹೋರಾಟ ಮಾಡಬೇಕಾಗಿದೆ ಎಂದು ಅವರು  ನಿಸಾರ್ ಅಹಮದ್ ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments