Thursday, December 12, 2024
Homeಜಿಲ್ಲೆತುಮಕೂರುSSLC Result  | ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸಲು ಪಾವಗಡ ಶಾಸಕರು ಮಾಡುತ್ತಿರುವುದೇನು ಗೊತ್ತಾ..? 

SSLC Result  | ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸಲು ಪಾವಗಡ ಶಾಸಕರು ಮಾಡುತ್ತಿರುವುದೇನು ಗೊತ್ತಾ..? 

ತುಮಕೂರು | ಎಸ್‌ಎಸ್‌ಎಲ್‌ಸಿ (SSLC Result) ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮಪಡಿಸಲು ಪಾವಗಡ ತಾಲ್ಲೂಕಿನಲ್ಲಿ 10 ಕಲಿಕಾಸರೆ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್ ಹೇಳಿದ್ದಾರೆ.  

ಪಾವಗಡದಲ್ಲಿ ಕಲಿಕಾಸರೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲಿಕಾಸರೆ ಕೇಂದ್ರದ ಸದುಪಯೋಗ ಪಡೆದುಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.

ಕಲಿಕಾಸರೆ ಕೇಂದ್ರಗಳಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರದಂದು ಸರ್ಕಾರಿ/ಅನುದಾನಿತ ಪ್ರೌಢಶಾಲೆಗಳ ಮಕ್ಕಳಿಗೆ ಓದುವ ಮತ್ತು ಬರವಣಿಗೆಯ ಕೌಶಲ್ಯಗಳನ್ನು ಬೋಧಿಸಲಾಗುವುದು. ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಬೇಕೆಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಕಲಿಕಾಸರೆ ಕೇಂದ್ರಗಳಲ್ಲಿ ಅನುಭವಾತ್ಮಕ ಕಲಿಕೆಯ ಮೂಲಕ ಮಕ್ಕಳಿಗೆ ಶಿಕ್ಷಣದ ಜೊತೆ-ಜೊತೆಗೆ ಮಾಹಿತಿ ಮತ್ತು ತಂತ್ರಜ್ಞಾನದ ವೇಗದ ಬದಲಾವಣೆಗಳ ಬಗ್ಗೆ ತಿಳಿಸಲಾಗುವುದು.  ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಸಲುವಾಗಿ ಪಾಸಿಂಗ್ ಪ್ಯಾಕೇಜ್, ರಸಪ್ರಶ್ನೆ ಕೋಠಿಯನ್ನು ರೂಪಿಸಲಾಗಿದೆಯಲ್ಲದೆ 6 ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಒದಗಿಸಲಾಗುವುದು ಎಂದು ತಿಳಿಸಿದರು.

ರಾಮಕೃಷ್ಣಾಶ್ರಮದ ಜಪಾನಂದಜೀ ಮಾತನಾಡಿ, ವಿದ್ಯಾರ್ಥಿಗಳು ಬದ್ಧತೆಯಿಂದ ಅಧ್ಯಯನಶೀಲರಾಗಬೇಕು. ಪಠ್ಯ ವಿಷಯಗಳನ್ನು ಪುನರ್-ಮನನ ಮಾಡುವುದರಿಂದ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಧುಗಿರಿ ಡಯಟ್ ವತಿಯಿಂದ ಸಿದ್ಧಪಡಿಸಲಾದ ಕ್ಷಮತೆ, ಅನುಭವಾತ್ಮಕ ಕಲಿಕೆ, 6-8ನೇ ತರಗತಿ ಬೋಧಿಸುತ್ತಿರುವ ವಿಷಯ ಸಂಪದೀಕರಣ ತರಬೇತಿ ಸಾಹಿತ್ಯ, ತೀವ್ರ ಜ್ಞಾನ ಸಂವರ್ಧನಾ ಕಲಿಕೆ ಅನುಷ್ಟಾನದ ವರದಿ, ದಸರಾಸಿರಿ, ಜ್ಞಾನ ಭಾರತಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments