Thursday, December 12, 2024
Homeಜಿಲ್ಲೆತುಮಕೂರುSri Kalleshwar Swami chariot | 800 ವರ್ಷದ ಪ್ರಾಚೀನ ಚೋಳರ ಕಾಲದ ದೇವಾಲಯದ ರಥಕ್ಕೆ...

Sri Kalleshwar Swami chariot | 800 ವರ್ಷದ ಪ್ರಾಚೀನ ಚೋಳರ ಕಾಲದ ದೇವಾಲಯದ ರಥಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು..!

ತುಮಕೂರು | ತುಮಕೂರು (Tumkur) ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರಿನ (Nittoor) ಪುರಲ್ಲಿ 800 ವರ್ಷದ ಪ್ರಾಚೀನ ಚೋಳರ ಕಾಲದ ಶ್ರೀ ಕಲ್ಲೇಶ್ವರ ಸ್ವಾಮಿ (Sri Kalleshwar Swami) ದೇವಾಲಯದ ರಥಕ್ಕೆ (chariot) ದುಷ್ಕರ್ಮಿಗಳು ಬೆಂಕಿ ಹಾಕಿ ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

Tumkur Hemavati water | ಹೇಮಾವತಿ ನಾಲೆ ಬದಿಯಲ್ಲಿನ ರೈತರಿಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಎಚ್ಚರಿಕೆ ಸಂದೇಶ..! – karnataka360.in

ಇದು ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಾಲಯವಾಗಿದ್ದು, ಇದರ ವಾರ್ಷಿಕ ಜಾತ್ರೆಯು ಮಾರ್ಚ್ 20 ರಿಂದ ಪ್ರಾರಂಭ ಆಗಲಿದ್ದು, ಊರಿನವರು ಜಾತ್ರೆಗೆ ತಯಾರಿ ನಡೆಸುವ ಮೊದಲೇ ಈ ಘಟನೆ ನಡೆದಿದೆ. ಈ ಘಟನೆಯ ಸಂಬಂಧ ಉತ್ತರ ಭಾರತದ ಓರ್ವ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ.

ಈ ಘಟನೆ ಅತ್ಯಂತ ಗಂಭೀರವಾಗಿದ್ದು, ಕೂಡಲೇ ಇದರ ಹಿಂದಿನ ಅಪರಾಧಿಗಳು ಯಾರು..? ಯಾವ ಉದ್ದೇಶಕ್ಕೆ ಈ ಕೃತ್ಯ ಎಸೆಗಲಾಗಿದೆ..? ಇದರ ಹಿಂದಿನ ಷಡ್ಯಂತ್ರ್ಯ ಏನು‌ ಎಂಬುದನ್ನು ಪತ್ತೆ ಹಚ್ಚಬೇಕು. ಕೂಡಲೇ ಅಪರಾಧಿಗಳನ್ನು ಬಂಧನ ಮಾಡಬೇಕು. ಸರಕಾರವು ಹಿಂದೂ ದೇವಸ್ಥಾನಗಳಿಂದ ತೆರಿಗೆ‌ ಸಂಗ್ರಹ ಮಾಡುತ್ತದೆ ಆದರೆ‌ ಅವುಗಳ ಸುರಕ್ಷತೆಯನ್ನು ಮಾಡುವುದಿಲ್ಲ. ಇದು ಅತ್ಯಂತ ಖಂಡನೀಯವಾಗಿದೆ. ದೇವಸ್ಥಾನದ ಜಾತ್ರೆಗೆ ಸುರಕ್ಷತೆ ನೀಡಬೇಕು ಎಂದು ದೇವಸ್ಥಾನಗಳ ಮಹಾಸಂಘವು ಆಗ್ರಹ ವ್ಯಕ್ತಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments