ಬೆಂಗಳೂರು | ರಾಜ್ಯಗಳಿಗೆ (State) ಕೇಂದ್ರ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸುವ ಭರದಲ್ಲಿ ಇದೀಗ ವಿವಾದಾತ್ಮಕ (Controversy) ಹೇಳಿಕೆಯನ್ನು ನೀಡಿದ್ದಾರೆ ಬೆಂಗಳೂರು (Bengalore) ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ ಕೆ ಸುರೇಶ್ (D K Suresh).
ಹೌದು,, ಡಿ ಕೆ ಸುರೇಶ್ ಹೇಳಿಕೆಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿತ್ತು. ಕೆಲವರು ಸುರೇಶ್ ಅವರನ್ನು ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಹಿಂದೂಪರ ಸಂಘಟನೆಗಳು ಮತ್ತು ದೇಶಾಭಿಮಾನಿಗಳು ಡಿ ಕೆ ಸುರೇಶ್ ವಿರುದ್ಧ ಕಿಡಿಕಾರಿದ್ದಾರೆ.
ಅಷ್ಟಕ್ಕೂ ಡಿ ಕೆ ಸುರೇಶ್ ಹೇಳಿದ್ದೇನು, “ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಆದರೆ ಮುಂದೆ ದಕ್ಷಿಣ ಭಾರತದ ಸಂಸದರು ಪ್ರತ್ಯೇಕ ರಾಷ್ಟ್ರದ ಕೂಗನ್ನು ಎತ್ತಬೇಕಾಗುತ್ತದೆ” ಎಂದು ಡಿ ಕೆ ಸುರೇಶ್ ಹೇಳಿದ್ದಾರೆ.
ಇದರ ಜೊತೆಗೆ ನಾವು ಕಳುಹಿಸಿದ ಜಿಎಸ್‌ಟಿ ಹಣ ನಮಗೆ ಸರಿಯಾಗಿ ವಾಪಸ್ ಬರುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರ ಸರಿಯಾದ ನ್ಯಾಯವನ್ನು ಒದಗಿಸುತ್ತಿಲ್ಲ ಇದೇ ರೀತಿ ಆದರೆ ರಾಜ್ಯದ ಪ್ರಗತಿ ಸಾಧ್ಯವಾಗುವುದಿಲ್ಲ ಹೀಗಾಗಿ ಪ್ರತ್ಯೇಕ ದೇಶದ ಕೂಗು ಕೇಳಿ ಬಂದರು ಅಚ್ಚರಿ ಇಲ್ಲ ಎಂದಿದ್ದಾರೆ.