ತುಮಕೂರು | 2024ರ ಲೋಕಸಭೆ ಚುನಾವಣೆ (2024 Lok Sabha Elections) ಹಿನ್ನೆಲೆಯಲ್ಲಿ ಪೊಲೀಸರು (Police) ಮತ್ತು ಚುನಾವಣಾಧಿಕಾರಿಗಳು (Returning Officer) ಜಿಲ್ಲೆಯ ಮತ್ತು ನಗರ ಪ್ರದೇಶಗಳ ಗಡಿ ಭಾಗದಲ್ಲಿ ಈಗಾಗಲೇ ಬಿಗಿ ಭದ್ರತೆಯ ಚೆಕ್ ಪೋಸ್ಟ್ ಗಳನ್ನು (Check post) ಹಾಕಿದ್ದು, ಯಾರೇ ಬಂದರು ಮುಲಾಜಿಲ್ಲದೆ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಚೆಕ್ ಪೋಸ್ಟ್ ಗಳಲ್ಲಿ ಯಾವುದೇ ದಾಖಲೆ ಇಲ್ಲದ ಹಣ ಮತ್ತು ಇತರೆ ವಸ್ತುಗಳ ಸಾಗಾಟ ನಿಷೇಧ ಮಾಡಲಾಗಿದ್ದು, ಒಂದು ವೇಳೆ ಅದು ಕಂಡು ಬಂದರೆ ವಶಕ್ಕೆ ಪಡೆಯುವ ಮೂಲಕ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿದ್ದಾರೆ.
ಇನ್ನೂ ತುಮಕೂರು ನಗರದ ಬಟವಾಡಿ ಚೆಕ್ ಪೋಸ್ಟ್ (Batawadi Check Post) ಬಳಿ ತುಮಕೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣನವರ (BJP candidate V. Somanna) ಕಾರು ಬಂದಿದ್ದು ಆ ಕಾರನ್ನು ತಡೆದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ತಪಾಸಣೆ ಮಾಡಿದ್ದಾರೆ.
ಈ ವೇಳೆ ಬಿಜೆಪಿ ಅಭ್ಯರ್ಥಿ ಸೋಮಣ್ಣ ಪೊಲೀಸರು ಮತ್ತು ಚುನಾವಣಾಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಯಾವುದೇ ಅಡ್ಡಿಯಿಲ್ಲ. ಇದು ಪಕ್ಷಾತೀತವಾಗಿ ಆಗಬೇಕು ಸಚಿವರು ಮತ್ತು ಆಡಳಿತ ಪಕ್ಷದವರು ಎಂದು ಹಾಗೆ ಬಿಡುವಂತಿಲ್ಲ ಎಂದು ಪರೋಕ್ಷವಾಗಿ ಗೃಹ ಸಚಿವ ಪರಮೇಶ್ವರ ಮತ್ತು ಸಹಕಾರ ಸಚಿವ ರಾಜಣ್ಣ ಹಾಗೂ ಕಾಂಗ್ರೆಸ್ ಸರ್ಕಾರದ ನಾಯಕರ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ಇನ್ನು ಸೋಮಣ್ಣನವರ ಕಾರ್ಯದಲ್ಲಿ ಹಾರ, ಶಾಲು ಸೇರಿದಂತೆ ಹಣ್ಣಿನ ಬುಟ್ಟಿಗಳು, ಮೊಮೆಂಟೊಗಳು ಮಾತ್ರ ಕಂಡು ಬಂದಿವೆ. ಇನ್ನು ಇದೇ ಸಂದರ್ಭದಲ್ಲಿ ಈ ಕಾರಿನಲ್ಲಿ ಶಾಸಕ ಜ್ಯೋತಿಗಣೇಶ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಗ ಹಾಜರಿದ್ದರು. ಕಳೆದ ಎರಡು ದಿನದ ಹಿಂದೆ ಈ ಚೆಕ್ ಪೋಸ್ಟ್ ನಲ್ಲಿ 8 ಲಕ್ಷ ದಾಖಲೆ ಇಲ್ಲದ ಹಣ ಪತ್ತೆಯಾಗಿತ್ತು ಎನ್ನುವುದನ್ನು ಗಮನಿಸಬೇಕಾದ ವಿಷಯ.