ತುಮಕೂರು | ಪಾವಗಡ (Pavagada) ತಾಲ್ಲೂಕಿನ ವಿವಿಧ ಸೋಲಾರ್ (Solar Plant) ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕೇಬಲ್ ಕಳ್ಳತನ ನಡೆಸುತ್ತಿದ್ದ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ (Cable Thieves Arrested). ಇವರಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Solar Plant
2025ರ ಜನವರಿ 20ರಂದು ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯ ವಳ್ಳೂರು ಗ್ರಾಮದ ಬಳಿ ಇರುವ ಅವಾದ ಸೋಲಾರ್ ಘಟಕದಲ್ಲಿ ಸುಮಾರು ₹1.30 ಲಕ್ಷ ಮೌಲ್ಯದ 2,500 ಮೀಟರ್ ಉದ್ದದ ವಿದ್ಯುತ್ ಕೇಬಲ್ ಕಳ್ಳತನವಾಗಿತ್ತು. ಈ ಕುರಿತು ದಾಖಲಾಗಿದ್ದ ದೂರಿನ ಆಧಾರವಾಗಿ ತನಿಖೆ ಆರಂಭಿಸಲಾಯಿತು.

ಮಧುಗಿರಿ ಡಿವೈಎಸ್‌ಪಿ ಮಂಜುನಾಥ್ ಜಿ. ಅವರ ಮಾರ್ಗದರ್ಶನದಲ್ಲಿ, ಸಿಪಿಐ ಬಿ.ಸಿ. ಗಿರೀಶ್ ನೇತೃತ್ವದ ತಂಡ ಪಾವಗಡ ಪಟ್ಟಣದ ನಿವಾಸಿಗಳಾದ ಮಲ್ಲೇಶ (28), ಬಾಬು (33), ಮತ್ತು ಮಂಜ (28) ಎಂಬವರನ್ನು ಬಂಧಿಸಲಾಗಿದೆ. ಇವರಿಂದ 1,900 ಮೀಟರ್ ಉದ್ದದ ಕೇಬಲ್, ಎರಡು ಟಿವಿಎಸ್ ಎಕ್ಸೆಲ್ ಬೈಕುಗಳು ಮತ್ತು ಒಂದು ಕೇಬಲ್ ಕತ್ತರಿಸುವ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ನಾಗರಾಜು ಅಲಿಯಾಸ್ ನಾಗ ಪರಾರಿಯಾಗಿದ್ದು, ಅವನ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಇದನ್ನೂ ಓದಿ : Operation Kamala | ಬಿಜೆಪಿಯ ಸುಳ್ಳಿನ ರಾಶಿಗೆ ನಾವು ಹೆದರಲ್ಲ – ಸಿದ್ದರಾಮಯ್ಯ
Follow Us : Facebook