ವಿಶೇಷ ಮಾಹಿತಿ | ಯುಗಾದಿ (Ugadi) ಹಬ್ಬಕ್ಕೂ ಮೊದಲು ಈ ವರ್ಷದ ಮೊದಲ ಸೂರ್ಯಗ್ರಹಣ (solar eclipse) ಏಪ್ರಿಲ್ 8 ರಂದು ಸಂಭವಿಸಲಿದ್ದು, ಈ ದಿನವೂ ಸೋಮಾವತಿ ಅಮವಾಸ್ಯೆಯಾಗಿದೆ. ಈ ಗ್ರಹಣ ಭಾರತದಲ್ಲಿ (India) ಗೋಚರಿಸದಿದ್ದರೂ, ವೃಷಭ, ಮಿಥುನ ಸೇರಿದಂತೆ ಈ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.
ಯುಗಾದಿ ಹಬ್ಬಕ್ಕೂ ಮೊದಲು ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ಸಂಭವಿಸಲಿದ್ದು, ಸೋಮಾವತಿ ಅಮವಾಸ್ಯೆಯಾಗಿದೆ. ಈ ಸೂರ್ಯಗ್ರಹಣದ ಸಂಪೂರ್ಣ ಅವಧಿಯು 4 ಗಂಟೆ 25 ನಿಮಿಷಗಳು. ಅಮೆರಿಕ, ಮೆಕ್ಸಿಕೋ, ಕೆನಡಾ, ಐರ್ಲೆಂಡ್, ಇಂಗ್ಲೆಂಡ್ ದೇಶಗಳಲ್ಲಿ ಮಧ್ಯಾಹ್ನ 2:15ಕ್ಕೆ ಈ ಸೂರ್ಯಗ್ರಹಣ ಆರಂಭವಾಗಲಿದೆ.
ಭಾರತೀಯ ಕಾಲಮಾನದ ಪ್ರಕಾರ ಏಪ್ರಿಲ್ 8ರ ರಾತ್ರಿ 9:12ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ರಾತ್ರಿಯ ಕಾರಣ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ.
ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ಆತ್ಮದ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯನಿಗೆ ಸಂಬಂಧಿಸಿದ ಯಾವುದೇ ಘಟನೆ ಸಂಭವಿಸಿದರೆ, ಅದು ಖಂಡಿತವಾಗಿಯೂ ದೇಶ ಮತ್ತು ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.
ಆದರೂ ಪ್ರತಿ ರಾಶಿಚಕ್ರದ ಜನರ ಜೀವನದ ಮೇಲೆ ಕೆಲವು ರೀತಿಯಲ್ಲಿ ಪರಿಣಾಮ ಬೀರಬಹುದು. ಚೈತ್ರ ನವರಾತ್ರಿಯ ಮೊದಲು ಬೀಳುವ ಈ ಸೂರ್ಯಗ್ರಹಣದ ಪರಿಣಾಮವು ವೃಷಭ ರಾಶಿ, ಮಿಥುನ ರಾಶಿ, ಕಟಕ ರಾಶಿ, ಸಿಂಹ ರಾಶಿ, ತುಲಾ ರಾಶಿ, ಧನು ರಾಶಿ ರಾಶಿಗಳ ಜನರ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರಲಿದೆ.
ಸೋಮಾವತಿ ಅಮಾವಾಸ್ಯೆಯು ಈ ರಾಶಿಯವರಿಗೆ ಲಾಭದಾಯಕವಾಗಿರಲಿದ್ದು, ಈ ಜನರು ಒಳ್ಳೆಯ ಸುದ್ದಿ ಪಡೆಯಲಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ವೃತ್ತಿಪರರಿಗೆ ಉತ್ತಮ ಹಣ ಗಳಿಸುವ ಅವಕಾಶ ದೊರೆಯಲಿದ್ದು, ಅವರ ವ್ಯವಹಾರದ ವಿಶ್ವಾಸಾರ್ಹತೆ ಎರಡು ಪಟ್ಟು ಹೆಚ್ಚಾಗುತ್ತದೆ.