Wednesday, February 5, 2025
Homeಜಿಲ್ಲೆತುಮಕೂರುSiddaganga Mutt | ತ್ರಿವಿಧ ದಾಸೋಹಿಯ ಪುಣ್ಯ ಸಂಸ್ಮರಣೆಗೆ ಸಿದ್ದಗೊಂಡ ಸಿದ್ದಗಂಗಾ ಮಠ..!

Siddaganga Mutt | ತ್ರಿವಿಧ ದಾಸೋಹಿಯ ಪುಣ್ಯ ಸಂಸ್ಮರಣೆಗೆ ಸಿದ್ದಗೊಂಡ ಸಿದ್ದಗಂಗಾ ಮಠ..!

ತುಮಕೂರು | ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ, ಡಾ. ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳ 6ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ (Siddaganga Mutt) ಜನವರಿ 21 ಮಂಗಳವಾರ ಬೆಳಗ್ಗೆ 11 ಗಂಟೆಗೆ ಆಯೋಜನೆ ಮಾಡಲಾಗಿದೆ.

ನಾಡಿಗೆ ತ್ರಿವಿಧ ದಾಸೋಹದ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಿದ, ಗೊಳಿಸುತ್ತಿರುವ, ಸಿದ್ದಗಂಗಾ ಮಠವನ್ನು (Siddaganga Mutt) ಜನರಿಗೋಸ್ಕರವೇ ತೆರೆದ, ಮಹಾ ಶಕ್ತಿ ನಡೆದಾಡುವ ದೇವರು ನೆಲೆಸಿದ್ದ ಪುಣ್ಯಕ್ಷೇತ್ರವನ್ನು ನೆನಪು ಮಾಡಿಕೊಳ್ಳುವ ಮೂಲಕ 6ನೇ ವರ್ಷದ ಪುಣ್ಯ ಸಂಸ್ಮರಣೆಯನ್ನು ಆಯೋಜನೆ ಮಾಡಲಾಗುತ್ತಿದೆ.

6ನೇ ವರ್ಷದ ಪುಣ್ಯ ಸಂಸ್ಮರಣೆ (Siddaganga Mutt) ಕಾರ್ಯಕ್ರಮಕ್ಕೆ ಅತಿಥಿಗಳು

ಈ ಕಾರ್ಯಕ್ರಮಕ್ಕೆ ಶ್ರೀ ಸುತ್ತೂರು ವೀರ ಸಿಂಹಾಸನ ಮಹಾಸಂಸ್ಥಾನ ಮಠ ಮೈಸೂರಿನ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರವಣಬೆಳಗೊಳ ಜೈನಮಠದ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದು, ಉದ್ಘಾಟನೆಯನ್ನು ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್, ಅಧ್ಯಕ್ಷತೆಯನ್ನು ಮೇಘಾಲಯದ ರಾಜ್ಯಪಾಲರಾದ ಸಿ ಎಚ್ ವಿಜಯಶಂಕರ್ ವಹಿಸಿಕೊಳ್ಳಲಿದ್ದಾರೆ. ಜಾನಪದ ವಿದ್ವಾಂಸರು ನಾಡೋಜ ಡಾ. ಗೋ. ರು. ಚೆನ್ನಬಸಪ್ಪ ಅವರಿಗೆ ಸಿದ್ದಗಂಗಾ ಶ್ರೀ ಪ್ರಶಸ್ತಿ ಪ್ರಧಾನ  ನಡೆಸಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments