ತುಮಕೂರು : ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಜನತೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಾ ಬರುತ್ತಿರುವ ಸಿದ್ದಗಂಗಾ ವೈದ್ಯಕೀಯ (Siddaganga Hospital) ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಇದೇ ವೇಳೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿದ್ದಗಂಗಾ ವೈದ್ಯಕೀಯ (Siddaganga Hospital) ಮಹಾವಿದ್ಯಾಲಯದ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್ ಪರಮೇಶ್ ಅವರು, ಇಂದು ಭಾರತ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ತನ್ನ ಸಾಧನೆಯನ್ನ ಪರಿಚಯ ಮಾಡುತ್ತಿದೆ. ಇದಕ್ಕೆ ಕಾರಣ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ. ಇಂದು 76ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಈ 76 ವರ್ಷಗಳಲ್ಲಿ ಅನೇಕ ಮಹತ್ತರ ಬದಲಾವಣೆಗಳು ಆಗಿವೆ. ಪ್ರಗತಿ ಕೂಡ ಆಗಿದೆ. ಇದರಲ್ಲಿ ಅನೇಕ ಮಹನೀಯರ ಪಾತ್ರ ಬಹಳಷ್ಟು ಇದೆ ಎಂದು ಹೇಳಿದರು.
ದೇಶವನ್ನು ಕಟ್ಟಿದ ಮಹನೀಯರು ನಮಗೆ ಉತ್ತಮ ನೆಲೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ದೇಶವನ್ನು ಕಟ್ಟಿದ್ದಾರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವಂತಹ ಜವಾಬ್ದಾರಿ ನಮ್ಮದು. ಸಂವಿಧಾನ ಕೊಟ್ಟಿರುವ ಸಮಾನತೆ ಎಲ್ಲೆಡೆಯಲ್ಲೂ ಕೂಡ ಹರಡಬೇಕಿದೆ. ಪ್ರಗತಿಯನ್ನು ಸಾಧಿಸಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿದ್ದಗಂಗಾ ವೈದ್ಯಕೀಯ (Siddaganga Hospital) ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಪ್ರಾಚಾರ್ಯರಾದ ಡಾ. ಶಾಲಿನಿ ಎಂ, ನಿರಂಜನ ಮೂರ್ತಿ ಸೇರಿದಂತೆ ಆಸ್ಪತ್ರೆ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ಉಪಸ್ಥಿತರಿದ್ದರು.