ತುಮಕೂರು | ತುಮಕೂರು ನಗರದ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ಇಂದು ಅಧಿಕೃತವಾಗಿ ನಗರದ ಆರ್‌ಟಿಓ ಕಚೇರಿ ಹತ್ತಿರದಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.
ಇಷ್ಟು ದಿನ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರಲ್ಲಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ಇಂದು ಅಪಾರ ಅಭಿಮಾನಿಗಳು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ವಿವಿಧ ಘಟಕಗಳ ಪದಾಧಿಕಾರಿಗಳು ಗೋವಿಂದರಾಜು ಅವರಿಗೆ ಸಹಕಾರ ನೀಡಿ ಪ್ರಚಾರಕ್ಕೆ ಹೆಜ್ಜೆ ಇಟ್ಟಿದ್ದರು.
ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಬಿ ಹೆಚ್ ರಸ್ತೆ ಮಾರ್ಗವಾಗಿ ಅಶೋಕನಗರ, ಎಸ್ಐಟಿ, ಸೋಮೇಶ್ವರ ಮುಂಭಾಗದ ವಿವಿಧ ರಸ್ತೆಗಳಲ್ಲಿ ಬೃಹತ್ ಸಂಖ್ಯೆಯ ಕಾರ್ಯಕರ್ತರೊಂದಿಗೆ ಗೋವಿಂದರಾಜು ಮತಯಾಚನೆ ಮಾಡಿದರು.