ಶಿವಮೊಗ್ಗ | ಇಡೀ ರಾಜ್ಯದಲ್ಲಿ ಬಿಜೆಪಿ (BJP) ಪಕ್ಷಕ್ಕೆ ಬಂಡಾಯದ ಬಿಸಿ ಕಂಡು, ರಾಜ್ಯದ ಜನರ ದೃಷ್ಟಿ ನೆಟ್ಟಿರುವ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರ (Shivamogga Lok Sabha Constituency). ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕರಲ್ಲಿ ಒಬ್ಬರಾದ ಬಿ ಎಸ್ ಯಡಿಯೂರಪ್ಪ (BS Yeddyurappa) ವಿರುದ್ಧ ಕೆಎಸ್ ಈಶ್ವರಪ್ಪ (KS Eshwarappa) ತೋಡೆ ತಟ್ಟಿ ನಿಂತಿರುವ ಕ್ಷೇತ್ರ.
Siddaramaiah | ದೇಶದ ಮುಂದೆ ಮೋದಿ ಹೀರೋ, ಸಿದ್ದರಾಮಯ್ಯ ವಿಲನ್ – ಕೆ ಎಸ್ ಈಶ್ವರಪ್ಪ – karnataka360.in
ಹೌದು,, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ರಾಘವೇಂದ್ರ ಅವರ ಎದುರು ಸ್ಪರ್ಧೆ ಮಾಡುತ್ತಿದ್ದಾರೆ. ಬಿ ಎಸ್ ಯಡಿಯೂರಪ್ಪನವರ ಕುಟುಂಬ ರಾಜಕಾರಣವನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸುವ ಈಶ್ವರಪ್ಪನವರು ಬಿ ಎಸ್ ವೈ ಕುಟುಂಬಕ್ಕೆ ದೂರವಾಗಿದ್ದಾರೆ. ಇದೀಗ ಕಾರ್ಯಕ್ರಮದಲ್ಲಿ ಈಶ್ವರಪ್ಪ ಮತ್ತು ರಾಘವೇಂದ್ರ ಮುಖಾಮುಖಿಯಾಗಿದ್ದಾರೆ.
ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಪರಸ್ಪರ ಮುಖಾಮುಖಿಯಾಗಿದ್ದಾರೆ. ನಗರದ ಆದಿಚುಂಚನಗಿರಿ ಶಾಲಾ ಅವರಣದಲ್ಲಿ ಆರ್‌ಎಸ್ ಎಸ್ ಮುಖಂಡರು ಏರ್ಪಡಿಸಿದ್ದ ಯುಗಾದಿ ಹಬ್ಬದ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗಿಯಾಗಿದ್ದರು. ರಾಘವೇಂದ್ರ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರೆ ಈಶ್ವರಪ್ಪ ಹಿಂಭಾಗದ ಸಾಲಿನಲ್ಲಿ ಆಸೀನರಾಗಿದ್ದರು. ಆದರೆ, ಈ ವೇಳೆ ಇಬ್ಬರು ಪರಸ್ಪರ ಮಾತನಾಡಲಿಲ್ಲ. ಹಬ್ಬದ ಶುಭಾಶಯವನ್ನು ಕೋರಲಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ.