ಕೃಷಿ ಮಾಹಿತಿ | ರಾಜ್ಯದಲ್ಲಿ ವಿನಾಶದ ಅಂಚಿನಲ್ಲಿರುವ ದೇಶಿಯ ಕುರಿ ತಳಿಗಳನ್ನು (Sheep Breed) ಸಂರಕ್ಷಿಸಲು ತಳಿ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಬೆಳಗಾವಿ ಸದನದಲ್ಲಿ ಹೇಳಿದ್ದಾರೆ.
2019ನೇ ಜಾನುವಾರು ಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 110.51 ಲಕ್ಷ ಕುರಿಗಳು ಮತ್ತು 61.69 ಲಕ್ಷ ಮೇಕೆಗಳಿರುತ್ತವೆ. ಕರ್ನಾಟಕದಲ್ಲಿ ಮಂಡ್ಯ, ಹಾಸನ, ಕೆಂಗುರಿ, ಬಳ್ಳಾರಿ, ಡೆಕನಿ, ಯಳಗ ಕುರಿ ತಳಿಗಳು ಮತ್ತು ನಂದಿ ದುರ್ಗ, ಬಿದರಿ ಮೇಕೆ ತಳಿಗಳು ರಾಜ್ಯದಲ್ಲಿವೆ.
ವಿನಾಶದ ಅಂಚಿನಲ್ಲಿರುವ ದೇಶಿಯ ಕುರಿ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ರಾಜ್ಯದಲ್ಲಿ 5 ಕುರಿ/ಮೇಕೆ ತಳಿ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಕುರಿ/ಮೇಕೆ ಮರಿಗಳನ್ನು ತಳಿ ಉನ್ನತಿಗಾಗಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.