Tuesday, February 4, 2025
Homeಜಿಲ್ಲೆತುಮಕೂರುShantinath Honda | ಡಾ. ಎಸ್ ಪರಮೇಶ್ ರವರಿಂದ ಹೊಸ ಹೋಂಡಾ ದ್ವಿಚಕ್ರ ವಾಹನಗಳ ಬಿಡುಗಡೆ..!

Shantinath Honda | ಡಾ. ಎಸ್ ಪರಮೇಶ್ ರವರಿಂದ ಹೊಸ ಹೋಂಡಾ ದ್ವಿಚಕ್ರ ವಾಹನಗಳ ಬಿಡುಗಡೆ..!

ತುಮಕೂರು | ಕಳೆದ ಹಲವು ವರ್ಷಗಳಿಂದ ತುಮಕೂರಿನ ಗ್ರಾಹಕರಿಗೆ ಹೋಂಡಾ ಕಂಪನಿಯ ವಾಹನಗಳನ್ನು ನೀಡುತ್ತಾ ಬರುತ್ತಿರುವ ಶಾಂತಿನಾಥ ಹೋಂಡಾ (Shantinath Honda) ಇದೀಗ ತನ್ನ ಶೋ ರೂಂನಲ್ಲಿ ನೂತನ ಬೈಕ್ ಗಳನ್ನು ಬಿಡುಗಡೆ ಮಾಡಿದೆ.

ಮುಖ್ಯ ಅತಿಥಿಗಳಾಗಿ ನೂತನ ವಾಹನಗಳಾದ ಹೋಂಡಾ ಯೂನಿಕಾರ್ನ್, ಹೋಂಡಾ ಆಕ್ಟಿವಾ ಮತ್ತು ಹೋಂಡಾ ಎಸ್ ಪಿ 125 ಬಿಡುಗಡೆಗೊಳಿಸಿ ಮಾತನಾಡಿದ ತುಮಕೂರಿನ ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎಸ್ ಪರಮೇಶ್ ಅವರು, ಶಾಂತಿನಾಥ ಹೋಂಡಾ (Shantinath Honda) ಹಲವು ವರ್ಷಗಳಿಂದ ಗ್ರಾಹಕರ ಸ್ನೇಹಿಯಾಗಿ ಹೋಂಡಾ ವಾಹನಗಳನ್ನು ನೀಡುತ್ತಾ ಬರುತ್ತಿದೆ. ಅದೇ ರೀತಿಯಾಗಿ ಇಂದು ಈ ಶೋರೂಮ್ ನಲ್ಲಿ 125 ಸಿಸಿ, 150 ಸಿಸಿ, 160 ಸಿಸಿ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದರು.

ಪ್ರತಿ ಮೂರು ತಿಂಗಳು ಅಥವಾ ಆರು ತಿಂಗಳಿಗೆ ಒಮ್ಮೆ ವಿಭಿನ್ನ ವಿಶೇಷ ಎನಿಸುವಂತಹ ಹೊಸ ಹೊಸ ವೆಹಿಕಲ್ ಗಳನ್ನು ಬಿಡುಗಡೆ ಮಾಡುತ್ತಾರೆ ಇದು ಗ್ರಾಹಕರಿಗೆ ಕೂಡ ಇಷ್ಟವಾಗುತ್ತೆ. ಇಂದು ಶಾಂತಿನಾಥ ಹೋಂಡಾ (Shantinath Honda) ಮೋಟರ್ಸ್ ನ ದಿನೇಶ್ ಜೈನ್ ಅವರ ಜೊತೆ ಹೊಸ ವಾಹನಗಳನ್ನು ಉದ್ಘಾಟನೆ ಮಾಡಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು, ಮಾತ್ರವಲ್ಲದೆ ಈ ವೆಹಿಕಲ್ ಗಳಲ್ಲಿ ಸೇಫ್ಟಿ ಹೆಚ್ಚಿನದಾಗಿದ್ದು ಎಲ್ಲರೂ ಬಳಸಿ ಎಂದು ಸಲಹೆ ನೀಡಿದರು ಮತ್ತು ಹೊಸ ಬೈಕ್ ಗಳನ್ನು ನೂತನ ಗ್ರಾಹಕರಿಗೆ ವಿತರಣೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments