ಮನರಂಜನೆ | ಬಾಲಿವುಡ್ (Bollywood) ಮೆಗಾಸ್ಟಾರ್ ಶಾರುಖ್ ಖಾನ್ (Shah Rukh Khan) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಅಹಮದಾಬಾದ್‌ನ (Ahmedabad) ಕೆಡಿ ಆಸ್ಪತ್ರೆಗೆ ದಾಖಲಾಗಿದ್ದರು. ನಿರ್ಜಲೀಕರಣ ಮತ್ತು ಕೆಮ್ಮಿನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಲಾಗುತ್ತಿದ್ದು, ಶಾರುಖ್ ಖಾನ್ ಅವರನ್ನು ನಿಗಾ ಘಟಕದಲ್ಲಿ ಇರಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
Actress Vidya murder | ಪತಿಯಿಂದಲೇ ಅಮಾನುಷವಾಗಿ ಹತ್ಯೆಗೀಡಾದ ನಟಿ ವಿದ್ಯಾ..! – karnataka360.in
ಇಂದು (ಬುಧವಾರ) ಶಾರುಖ್ ಖಾನ್ ಅವರನ್ನು ಸಂಜೆ 4 ಗಂಟೆಯ ನಂತರ ಆಸ್ಪತ್ರೆಗೆ ಕರೆತರಲಾಯಿತು. ಐಪಿಎಲ್ 2024 ಕ್ವಾಲಿಫೈಯರ್ 1 ರಲ್ಲಿ ತನ್ನ ತಂಡ ಕೆಕೆಆರ್ ಅನ್ನು ಬೆಂಬಲಿಸಲು ಬಾಲಿವುಡ್ ನಟ ಶಾರುಖ್ ಅಹಮದಾಬಾದ್‌ನಲ್ಲಿದ್ದರು. ಈ ವೇಳೆ ಅವರು ಅಹಮದಾಬಾದ್‌ನ ಐಟಿಸಿ ನರ್ಮದಾ ಹೋಟೆಲ್‌ನಲ್ಲಿ ತಂಗಿದ್ದರು. ಸದ್ಯ ಅವರ ಆರೋಗ್ಯ ಚೆನ್ನಾಗಿದೆ ಎಂದು ಆಸ್ಪತ್ರೆಯಿಂದ ತಿಳಿದುಬಂದಿದೆ.
ಮಂಗಳವಾರ ನಡೆದ ಐಪಿಎಲ್‌ನ ಕ್ವಾಲಿಫಯರ್ 1ರಲ್ಲಿ ಶಾರುಖ್ ಖಾನ್ ತಂಡ ಕೆಕೆಆರ್ ಸ್ಥಾನ ಪಡೆದಿದೆ. ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹೀನಾಯ ಸೋಲು ಕಂಡಿತ್ತು. ಶಾರುಖ್ ಖಾನ್ ತಮ್ಮ ತಂಡದ ಗೆಲುವನ್ನು ಸಂಭ್ರಮಿಸುತ್ತಿದ್ದರು. ವಿಜಯದ ನಂತರ ಶಾರುಖ್ ಖಾನ್ ತಮ್ಮ ತಂಡದ ಆಟಗಾರರನ್ನು ಅಭಿನಂದಿಸಲು ಮೈದಾನಕ್ಕೆ ಬಂದಿದ್ದರು.
ನಿರ್ಜಲೀಕರಣದ ಕಾರಣ ಆಸ್ಪತ್ರೆಗೆ ದಾಖಲು
ಶಾರುಖ್ ಖಾನ್ ನಿರ್ಜಲೀಕರಣದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ವೈದ್ಯರು ಅವರನ್ನು ಸ್ವಲ್ಪ ಸಮಯದವರೆಗೆ ತಮ್ಮ ನಿಗಾದಲ್ಲಿ ಇರಿಸಿದರು. ಇದಾದ ಬಳಿಕ ಅವರ ಸ್ಥಿತಿ ಸುಧಾರಿಸಿದ್ದು, ವೈದ್ಯರು ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಇದೀಗ ಶಾರುಖ್ ಖಾನ್ ಆಸ್ಪತ್ರೆಯಿಂದ ವಾಪಸಾಗಿದ್ದಾರೆ.