ತುಮಕೂರು | ಇತ್ತೀಚೆಗಷ್ಟೆ ತುಮಕೂರು ನಗರದಲ್ಲಿ ಅದ್ದೂರಿಯಾಗಿ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಸಲಾಗಿದ್ದು ಈ ವೇಳೆ ಮೇರವಣಿಗೆ ಬಂದೋಬಸ್ತ್ ನಲ್ಲಿದ್ದ ಮಹಿಳಾ ಪಿಎಸ್ಐ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಗಣಪತಿ ವಿಸರ್ಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರ ಎಂಜಿ ರಸ್ತೆಯಲ್ಲಿ ಸಾಗುತ್ತಿದ್ದ ಡಿಜೆ ಮೇರವಣಿಗೆ ವೇಳೆ ಪೊಲೀಸ್ ಬಂದೋಬಸ್ತ್ ನಲ್ಲಿದ್ದ ಮಹಿಳಾ ಪಿಎಸ್ಐ ಮೇಲೆ ಸಾರ್ವಜನಿಕರ ಎದುರೇ ಎದೆಗೆ ಕೈ ಹಾಕಿ ಎಳೆದಿದ್ದಾನೆ ದರ್ಶನ್ (26) ಎಂಬ ಯುವಕ.
ಕೂಡಲೇ ಆ ಯುವಕನನ್ನು ಹಿಡಿದು ವಶಕ್ಕೆ ಪಡೆದಿರುವ ಪೊಲೀಸರು. ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ಯುವಕನನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.