Saudi Arabia | 73 ವರ್ಷಗಳ ತನ್ನ ನಿಯಮ ಬದಲಿಸಿಕೊಂಡ ಸೌದಿ ಅರೇಬಿಯಾ..!

ಸೌದಿ ಅರೇಬಿಯಾ | ಇಸ್ಲಾಮಿಕ್ ಕಾನೂನುಗಳು ಮತ್ತು ಸಂಸ್ಕೃತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಸೌದಿ ಅರೇಬಿಯಾದಲ್ಲಿ (Saudi Arabia), ಇದೀಗ ಭಾರಿ ಬದಲಾವಣೆ ಪ್ರಕಟವಾಗಿದೆ. ಕಳೆದ 73 ವರ್ಷಗಳಿಂದ ಹೇರಲಾಗಿದ್ದ ಮದ್ಯ ನಿಷೇಧ ನಿಯಮದಲ್ಲಿ (Alcohol Prohibition Law) ಈಗ ಸೌದಿ ಸರಕಾರ ಸಡಿಲಿಕೆ ಘೋಷಿಸಿದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಕೈಗೊಂಡ ಮಹತ್ವದ ಹೆಜ್ಜೆಯಾಗಿದ್ದು, ‘ವಿಷನ್ 2030’ (Vision 2030) ಯೋಜನೆಯ ಭಾಗವಾಗಿದೆ.

ಮದ್ಯ ಮಾರಾಟ (Saudi Arabia) ಸೀಮಿತ ಸ್ಥಳಗಳಿಗೆ ಮಾತ್ರ

2026ರೊಳಗೆ 600 ಕ್ಕೂ ಹೆಚ್ಚು ಪ್ರವಾಸಿ ತಾಣಗಳಲ್ಲಿ ಮದ್ಯ ಲಭ್ಯವಿರಲಿದೆ. ಐಷಾರಾಮಿ ಹೋಟೆಲ್‌ಗಳು, ರೆಸಾರ್ಟ್‌ಗಳು, ರಾಜತಾಂತ್ರಿಕ ವಲಯ ಹಾಗೂ ಪ್ರವಾಸಿಗರಿಗೆ ವಿಶೇಷವಾಗಿ ಅಭಿವೃದ್ಧಿ ಪಡಿಸಲಾದ ಪ್ರದೇಶಗಳಲ್ಲಿ ಮಾತ್ರ ಮದ್ಯ ಮಾರಾಟ (Alcohol Prohibition Law) ಅನುಮತಿಸಲಾಗುತ್ತದೆ. ಈ ಅನುಮತಿ ಮಾತ್ರ ಅಂತರರಾಷ್ಟ್ರೀಯ ಪ್ರವಾಸಿಗರು ಹಾಗೂ ವಲಸಿಗರಿಗೆ ಸೀಮಿತವಾಗಿದೆ. ಬಿಯರ್, ವೈನ್ ಹಾಗೂ ಸೈಡರ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ತೀವ್ರ ಆಲ್ಕೋಹಾಲ್ ಇರುವ ಪಾನೀಯಗಳ ಮಾರಾಟ ನಿಷೇಧವಾಗಿರುತ್ತದೆ. ಮನೆಗಳು, ಅಂಗಡಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಹಾಗೂ ಬಳಕೆ ಇನ್ನೂ ನಿಷೇಧವಾಗಿದೆ.

ಇದನ್ನು ಓದಿ : Covid 19 Increase | ಕೋವಿಡ್ ಹೆಚ್ಚಳ : ದೊಡ್ಡ ಘೋಷಣೆ ಮಾಡಿದ ದಿನೇಶ್ ಗುಂಡೂರಾವ್

ಸೌದಿ ಅರೇಬಿಯಾ 2034ರ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದ್ದು, ಅಂತರರಾಷ್ಟ್ರೀಯ ತಾತ್ವಿಕತೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸಾಂಪ್ರದಾಯಿಕ ಇಸ್ಲಾಮಿಕ್ ರಾಷ್ಟ್ರವಾದರೂ, ಆರ್ಥಿಕತೆಯನ್ನು ಪೂರಕವಾಗಿಸಲು ಮತ್ತು ಜಾಗತಿಕ ಪ್ರವಾಸಿಗರಿಗೆ ಅನುಕೂಲವಾಗಿಸಲು ಸೌದಿ ಅರೇಬಿಯಾ ತಮ್ಮ ನಿಲುವಿನಲ್ಲಿ ನವನವೀನತೆ ತರುತ್ತಿದೆ. ಮದ್ಯ ನಿಷೇಧದ ನಿಯಮದಲ್ಲಿ ಸಡಿಲಿಕೆ ಈ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

Leave a Reply

Your email address will not be published. Required fields are marked *