ದಕ್ಷಿಣ ಕನ್ನಡ | ಮಂಗಳೂರಿನ ಬಿಜೈಯಲ್ಲಿರುವ ಸೆಲೂನ್ನಲ್ಲಿ ನಡೆದ ದಾಂಧಲೆ (Saloon attack case) ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಚಾನೆಲ್ನ ಕ್ಯಾಮರಾಮ್ಯಾನ್ ಶರಣ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಮ ಸೇನಾ ಮುಖಂಡನ (Saloon attack case) ಬಂಧನದ ಬೆನ್ನಲ್ಲೆ ಶರಣ್ ವಶಕ್ಕೆ
ರಾಮ ಸೇನಾ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಬಂಧಿಸಿದ ನಂತರ, ಪೊಲೀಸರು ದಾಂಧಲೆ ಪ್ರಕರಣದ ತನಿಖೆ ತೀವ್ರಗೊಳಿಸಿದ್ದು, ಶರಣ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಾಂಧಲೆ ನಡೆಯುವ ಸಮಯದಲ್ಲಿ ಶರಣ್ ಸ್ಥಳದಲ್ಲಿದ್ದಂತೆ ಪ್ರಾಥಮಿಕ ಮಾಹಿತಿ ದೊರೆತಿದೆ.
ಪೊಲೀಸರಿಗೆ ಮಾಹಿತಿ ನೀಡದ ಆರೋಪ
ದಾಂಧಲೆಕೋರರು ಸೆಲೂನ್ಗೆ ನುಗ್ಗಿದಾಗ ಶರಣ್ ಕೂಡ ಸ್ಥಳದಲ್ಲಿದ್ದ ಎನ್ನಲಾಗಿದ್ದು, ದಾಳಿಯ ಬಗ್ಗೆ ಮಾಹಿತಿ ಇದ್ದರೂ ಪೊಲೀಸರಿಗೆ ಪೂರ್ವಭಾವಿ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶರಣ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
2009ರ ಪಬ್ ದಾಂಧಲೆ ಪ್ರಕರಣದ ನೆನಪು
ಈ ಪ್ರಕರಣವು 2009ರ ಮಂಗಳೂರು ಪಬ್ ದಾಂಧಲೆ ಪ್ರಕರಣವನ್ನು (Saloon attack case) ನೆನಪಿಸುತ್ತದೆ. ಆ ಸಮಯದಲ್ಲಿಯೂ ಶರಣ್ ದಾಂಧಲೆಕೋರರ ಜೊತೆ ಇದ್ದು, ಘಟನೆಯ ವೀಡಿಯೋ ಚಿತ್ರೀಕರಿಸಿದ್ದ ಎನ್ನಲಾಗಿದೆ. ಆ ಸಂದರ್ಭದಲ್ಲಿ ಕೂಡ ಶರಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿ ಪೊಲೀಸರು ಶರಣ್ನಿಂದ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.