Thursday, December 12, 2024
Homeರಾಷ್ಟ್ರೀಯತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ - ಕೆ ಚಂದ್ರಶೇಖರ್ ರಾವ್

ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ – ಕೆ ಚಂದ್ರಶೇಖರ್ ರಾವ್

ತೆಲಂಗಾಣ | ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ನಂತರ ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ವರಿಷ್ಠ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸೋಮವಾರ ಪ್ರತಿಪಾದಿಸಿದ್ದಾರೆ, ತಮ್ಮ ಅಡಿಯಲ್ಲಿ ರಾಜ್ಯದ ಬೆಳವಣಿಗೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ರಚನೆ ದಿನದ ದಶಮಾನೋತ್ಸವದ ಅಂಗವಾಗಿ ‘ಹರಿತೋತ್ಸವ’ (ಹಸಿರು ದಿನ)ದಂದು ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾವ್, ರಾಜ್ಯದಲ್ಲಿ ಬಿಆರ್‌ಎಸ್ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

“ತೆಲಂಗಾಣದಲ್ಲಿ ನಾವು ಈಗಾಗಲೇ 276 ಕೋಟಿ ಸಸಿಗಳನ್ನು ನೆಟ್ಟಿದ್ದೇವೆ. ಆದ್ದರಿಂದಲೇ ಎಲ್ಲಿ ನೋಡಿದರೂ ಹಸಿರು ಕಾಣುತ್ತಿದೆ. ನಾವು ಎಷ್ಟು ಮುಂದುವರಿದಿದ್ದೇವೆ ಎಂದರೆ ಪ್ರತಿ ಹಳ್ಳಿಯಲ್ಲಿ ನರ್ಸರಿ, ಪ್ರತಿ ಹಳ್ಳಿಯಲ್ಲಿ ‘ ಪ್ರಕೃತಿ ವನ’, ಮಕ್ಕಳಿಗಾಗಿ ತೆರೆದ ಜಿಮ್‌ಗಳು”  ಎಂದು ಅವರು ಹೇಳಿದರು.

ಹಸಿರು ಅಭಿಯಾನದ ಭಾಗವಾಗಿ ಈ ವರ್ಷದಿಂದ ಜನರಿಗೆ ಹಣ್ಣು-ಹಂಪಲು ಸಸಿಗಳನ್ನು ಉಚಿತವಾಗಿ ವಿತರಿಸಲು ರಾಜ್ಯ ಮುಖ್ಯ ಕಾರ್ಯದರ್ಶಿ (ಎ ಶಾಂತಿ ಕುಮಾರಿ) ಅವರನ್ನು ಕೋರಿರುವುದಾಗಿ ಕೆಸಿಆರ್ ಹೇಳಿದರು.

ಪಾಲಮೂರು ಏತ ನೀರಾವರಿ ಯೋಜನೆಗೆ ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್‌ನ ಮೊರೆಹೋಗಿ ತಡೆಯಾಜ್ಞೆ ತಂದಿದ್ದರಿಂದಲೇ ರಾಜ್ಯದ ಪಾಲಮೂರು ಏತ ನೀರಾವರಿ ಯೋಜನೆ ವಿಳಂಬವಾಗಿದೆ ಎಂದು ಆರೋಪಿಸಿ, ಇಬ್ರಾಹಿಂಪಟ್ಟಣ, ಮಹೇಶ್ವರಂ ಮತ್ತು ವಿಕಾರಾಬಾದ್ ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರವೇ ನೀರು ಹರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ತೆಲಂಗಾಣಕ್ಕೆ ಕೃಷಿ ಮಾಡುವುದು ಹೇಗೆಂದು ಗೊತ್ತಿಲ್ಲ ಎಂದು ಲೇವಡಿ ಮಾಡಿದವರು ಈಗ ಏಳನೇ ಸ್ಥಾನದಲ್ಲಿದ್ದರೆ, ತೆಲಂಗಾಣ ದೇಶದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ತಲಾವಾರು ವಿದ್ಯುತ್ ಬಳಕೆ, ತಲಾ ಆದಾಯ, ಭತ್ತ ಉತ್ಪಾದನೆ, 24×7 ವಿದ್ಯುತ್ ಪೂರೈಕೆ ಮತ್ತಿತರ ಸೂಚ್ಯಂಕಗಳಲ್ಲಿ ತೆಲಂಗಾಣ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಅವರು ಗಮನ ಸೆಳೆದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments