ತುಮಕೂರು | ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯ ದಾನಾ ಪ್ಯಾಲೇಸ್ ಹತ್ತಿರ ರೈಲ್ವೆ ಅಂಡರ್ಪಾಸ್ ಬಳಿ ರಿಂಗ್ ರಸ್ತೆಯು ಮಳೆಯಿಂದಾಗಿ ಕುಸಿದಿದ್ದು, ಸದರಿ ರಸ್ತೆಯನ್ನು ದುರಸ್ಥಿಪಡಿಸುವ ಸಲುವಾಗಿ 3 ವಾರಗಳ ಕಾಲ ರಿಂಗ್ ರಸ್ತೆಯನ್ನು ಮುಚ್ಚಲಾಗುವುದು ಎಂದು ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನಗಳು ಪರ್ಯಾಯವಾಗಿ ಬಿ.ಹೆಚ್. ರಸ್ತೆ ಮತ್ತು ಕುಣಿಗಲ್ ಮುಖ್ಯ ರಸ್ತೆಯನ್ನು ಬಳಸಲು ಬನಶಂಕರಿ ರಸ್ತೆ (ಲಕ್ಕಪ್ಪ ಸರ್ಕಲ್) ಹತ್ತಿರ ಮಾರ್ಗವನ್ನು ಉಪಯೋಗಿಸಲು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.