Thursday, December 12, 2024
Homeಜಿಲ್ಲೆತುಮಕೂರುನಾಲ್ಕು ವಿಷಪೂರಿತ ನಾಗರಹಾವುಗಳ ಸಂರಕ್ಷಣೆ ಮಾಡಿದ ಉರಗ ಪ್ರೇಮಿಗಳು..!

ನಾಲ್ಕು ವಿಷಪೂರಿತ ನಾಗರಹಾವುಗಳ ಸಂರಕ್ಷಣೆ ಮಾಡಿದ ಉರಗ ಪ್ರೇಮಿಗಳು..!

ತುಮಕೂರು | ಮಧುಗಿರಿ ಪಟ್ಟಣದ 7 ನೇ ವಾರ್ಡ್ ನ ಕಾರ್ಯಪ್ಪ ಬಡಾವಣೆಯಲ್ಲಿ ಸಿ. ಸಿ. ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ರಸ್ತೆ ನಿರ್ಮಾಣ ಮಾಡುವಾಗ ಮೊದಲು ಮೂರು ನಾಗರಹಾವುಗಳು ಕಂಡು ಬಂದಿವೆ. ನಂತರ ವಾರ್ಡಿನ ಕೆಲ ಹುಡುಗರು ಕ್ರಿಕೆಟ್ ಆಡುವಾಗ ಹುಡಗನೊಬ್ಬ ಹೊಡೆದ ಚೆಂಡನ್ನು ತರಲು ಹೋಗಿದ್ದು ಹಳೆಯ ಮಡಕೆಯೊಂದರಲ್ಲಿ ಮತ್ತೊಂದು ಬೃಹತ್ ಗಾತ್ರದ ನಾಗರಹಾವು ಕಂಡು ಬಂದಿದೆ.

ಉರುಗ ಪ್ರೇಮಿ ಹಾಗೂ ಸ್ಥಳೀಯವಾಸಿ ಕಿಪಾಯತ್ ಎನ್ನುವವರಿಗೆ ಮುಖಂಡ ಆನಂದ್ ಹಾವುಗಳ ಬಗ್ಗೆ ಮಾಹಿತಿ ನೀಡಿದ್ದು ಒಂದೇ ವಾರ್ಡಿನಲ್ಲಿ ಕಂಡು ಬಂದಿರುವ ನಾಲ್ಕು ನಾಗರಹಾವುಗಳನ್ನು ಸಂರಕ್ಷಿಸಿ ಸಮೀಪದ ಅರಣ್ಯಧಾಮಕ್ಕೆ ಸಂಜೆ ಬಿಟ್ಟು ಬರಲಾಗಿದೆ.

ಕಾಂಗ್ರೆಸ್ ಮುಖಂಡ ಆನಂದ್ ಮಾತನಾಡಿ, ಬೇಸಿಗೆಯ ಕಾವು ಹೆಚ್ಚಾಗಿರುವುದರಿಂದ ಹಾಗೂ ವಾರ್ಡ್ ನ ಸಮೀಪ ಜಮೀನುಗಳಿರುವುದರಿಂದ ಹಾವುಗಳು ಅಲ್ಲಲ್ಲಿ ಕಂಡು ಬರುತ್ತಿವೆ ನಾಗರೀಕರು ಜಾಗರೂಕರಾಗಿರಬೇಕಾಗಿದೆ. ಉರುಗ ಪ್ರೇಮಿ ಕಿಪಾಯತ್ ನಾಲ್ಕು ನಾಗರಹಾವುಗಳನ್ನು ಜಾಗೃತೆಯಿಂದ ಸಂರಕ್ಷಿಸಿದ್ದಾರೆ ಪಟ್ಟಣದಲ್ಲಿ ಎಲ್ಲಿಯಾದರೂ ಹಾವುಗಳು ಕಂಡು ಬಂದರೆ ಲಿಂಗೇನಹಳ್ಳಿಯ ವಾಸಿ ಕಿಪಾಯತ್ 7090101153 ರವರಿಗೆ ದೂರವಾಣಿ ಕರೆ ಮಾಡಬಹುದಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments