ತುಮಕೂರು | ಬೆಂಗಳೂರಿನ (Bangalore) ರಾಮೇಶ್ವರಂ ಕೆಫೆ (Rameswaram Cafe) ಬಾಂಬ್ ಬ್ಲಾಸ್ಟ್ ಘಟನೆಗೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಅಪ್ಡೇಟ್ ಸಿಕ್ಕಿದ್ದು ಶಂಕಿತ ಆರೋಪಿ (suspect accused), ತುಮಕೂರಿನಲ್ಲಿ (Tumkur) ಓಡಾಡಿರುವ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ನಡೆಸಿದ ಆರೋಪಿ ತುಮಕೂರಿಗೆ ಬಂದಿರುವಂತಹ ಅಂಶಗಳು ಇದೀಗ ಬೆಳಕಿಗೆ ಬಂದಿವೆ. ಮಾರ್ಚ್ 1 ರಂದು ಶಂಕಿತ ಉಗ್ರ ತುಮಕೂರಿನಲ್ಲಿ ಓಡಾಡಿರುವ ಓಡಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಫುಲ್ ಅಲರ್ಟ್ ಆಗಿರುವ ತುಮಕೂರು ಜಿಲ್ಲಾ ಪೊಲೀಸರು ತುಮಕೂರಿನ ರೈಲ್ವೆ ನಿಲ್ದಾಣ, ಮಂಡಿಪೇಟೆ ಸೇರಿ ಹಲವೆಡೆ ಹುಡುಕಾಟ ನಡೆಸಿದ್ದಾರೆ. ಬೆಂಗಳೂರಿನ ಪೊಲೀಸರು ಸುಮಾರು 28 ವಾಹನಗಳಲ್ಲಿ ತುಮಕೂರಿಗೆ ಆಗಮಿಸಿದ್ದು ಎನ್ ಐ ಎ ಅಧಿಕಾರಿಗಳ ತಂಡದ ಜೊತೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.
ಇನ್ನು ಆರೋಪಿಯ ಪತ್ತೆಗೆ ಬೆಂಗಳೂರಿನ ಪೊಲೀಸರು ಮತ್ತು ಎನ್ ಐ ಎ ಅಧಿಕಾರಿಗಳ ತಂಡಕ್ಕೆ ತುಮಕೂರು ಎಸ್ಪಿ ಹಾಗೆ ಡಿ ವೈ ಎಸ್ ಪಿ ಸಾಥ್ ನೀಡಿದ್ದಾರೆ.