ದಕ್ಷಿಣ ಕನ್ನಡ | ಆಹಾರಕ್ಕಾಗಿ ಪರ್ಸಿಯನ್ ಕ್ಯಾಟ್ (Persian Cat) ಒಂದನ್ನು ತಿಂದಿದ್ದ ಹೆಬ್ಬಾವು (Python) ಆಹಾರ ನುಂಗಲಾರದೆ ಸಂಕಷ್ಟಕ್ಕೆ ಸಿಲುಕಿದೆ. ಇದನ್ನ ಗಮನಿಸಿದ ಸ್ಥಳಿಯರು ಉರಗ ರಕ್ಷಕರ (Reptile protector) ಮೂಲಕ ಹಾವನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಹಾವಿನ ವೈದ್ಯಕೀಯ ಪರೀಕ್ಷೆ ವೇಳೆ ಹಾವಿನ ದೇಹದಲ್ಲಿ 11 ಬುಲ್ಲೆಟ್‌ಗಳು (Bullets found) ಪತ್ತೆಯಾಗಿದೆ.
Annamalai Road Show | ರಾಜ್ಯದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲಿದ್ದಾರೆ ಅಣ್ಣಾಮಲೈ..? – karnataka360.in
ಬಿಜೈ ಆನೆಗುಂಡಿಯಲ್ಲಿ ಈ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವು ಪರ್ಷಿಯನ್ ಕ್ಯಾಟ್ ಅನ್ನು ನುಂಗಿ ಒದ್ದಾಡುತ್ತಿತ್ತು. ಪರಿಶೀಲನೆ ಮಾಡಿದಾಗ ಹೆಬ್ಬಾವಿನ ಕತ್ತಿನ ಕೆಳಭಾಗದಲ್ಲಿ ಬಲೆ ಸಿಲುಕಿ ಆಹಾರ ನುಂಗಲು ತೊಂದರೆಯಾಗುತ್ತಿತ್ತು. ತಕ್ಷಣ ಉರಗರಕ್ಷಕ ಭುವನ್ ದೇವಾಡಿಗ ಅವರಿಗೆ ಕರೆ ಮಾಡಲಾಗಿದ್ದು, ಅವರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಬಂದ ಭುವನ್ ದೇವಾಡಿಗ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಅರಣ್ಯ ಅಧಿಕಾರಿಗಳ ಸಹಕಾರದಿಂದ ಬಲೆಯನ್ನು ಕತ್ತರಿಸಿ ಹೆಬ್ಬಾವನ್ನು ರಕ್ಷಿಸಿದ್ದಾರೆ.
ಸುಮಾರು 8.50 ಫೀಟ್ ಉದ್ದದ, 8ಕೆಜಿ ತೂಕವುಳ್ಳ ಈ ಹೆಬ್ಬಾವನ್ನು ವೈದ್ಯಕೀಯ ತಪಾಸಣೆಗೆ ಮರೋಳಿಯ ಪಶುವೈದ್ಯ ಡಾ.ಯಶಸ್ವಿಯವರಲ್ಲಿಗೆ ಕೊಂಡೊಯ್ಯಲಾಯಿತು. ಅವರು ಪರೀಕ್ಷೆ ನಡೆಸಿದಾಗ ಬೆನ್ನಿನ ಭಾಗದಲ್ಲಿ ಗಟ್ಟಿಯಾದ ವಸ್ತು ಸಿಕ್ಕಿದಂತಾಗಿದೆ. ಆದ್ದರಿಂದ ಎಕ್ಸರೇ ಮಾಡಿದಾಗ ಹೆಬ್ಬಾವಿನ ದೇಹದೊಳಗೆ ಹನ್ನೊಂದು ಏರ್ ಬುಲೆಟ್ ಪತ್ತೆಯಾಗಿದೆ. ಇದರಲ್ಲಿ ಎರಡು ಬುಲೆಟ್ ಅನ್ನು ಮಾತ್ರ ಹೆಬ್ಬಾವು ದೇಹದಿಂದ ಹೊರತೆಗೆಯಲು ಸಾಧ್ಯವಾಗಿದೆ. ಈ ಹಿಂದೆ ಯಾರೋ ಏರ್ ಗನ್ ನಿಂದ ಶೂಟ್ ಮಾಡಿದ್ದರಿಂದ ಅದರ ದೇಹದೊಳಗೆ ಏರ್ ಬುಲೆಟ್ ಸೇರಕೊಂಡಿರಬಹುದು. ಸದ್ಯ ಈ ಹೆಬ್ಬಾವನ್ನು ಪರಿವೀಕ್ಷಣೆ ಮಾಡಲಾಗುತ್ತಿದೆ ಎಂದು ಉರಗ ರಕ್ಷಕ ಭುವನ್ ದೇವಾಡಿಗ ಹೇಳಿದ್ದಾರೆ.