ಬೆಂಗಳೂರು | ಸರ್ಕಾರ ರಚನೆಗೂ ಮುನ್ನ ಭಾರತ್ ಜೋಡೊ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಬಿಜೆಪಿ ನಾಯಕರು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರಲ್ಲ ಹಿಂಬಾಗಿಲಿನಿಂದ ಅಧಿಕಾರ ಹಿಡಿದವರು. ಅತಂತ್ರ ಫಲಿತಾಂಶದ ದಿನಗಳಲ್ಲಿ ಸುಭದ್ರ ಸರ್ಕಾರ ಕೊಡುವುದಕ್ಕೆ ಸಾದ್ಯವಾಗುವುದಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸುಭದ್ರ ಸರ್ಕಾರ ಮಾಡುವುದಕ್ಕೆ ತೊಡಕು ಉಂಟಾಗುತ್ತದೆ ಎಂದು ಹೇಳಿದರು.
ಬದಲಾವಣೆ ಬಯಸಿ ಕಾಂಗ್ರೆಸ್ ಗೆ ಕರ್ನಾಟಕದ ಜನ ಅಧಿಕಾರ ನೀಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸಬೇಕು. ಕೊಟ್ಟ ಮಾತನ್ನು ನಾವು ಉಳಿಸಕೊಳ್ಳಬೇಕು. ಕರ್ನಾಟಕಕ್ಕೆ ಬಿಜೆಪಿ ಕಳಂಕ ತಂದಿದೆ. ಬಿಜೆಪಿ ಆಡಳಿತದಿಂದ ಜನ ರೋಸಿ ಹೋಗಿದ್ದರು ಎಂದರು.
ಮಂಡ್ಯ ಜಿಲ್ಲೆಯಲ್ಲಿ 7 ಕ್ಕೆ 6 ಕ್ಷೇತ್ರಗಳ ಗೆಲುವು ಸಾಧಿಸಿದ್ದೇವೆ. ಎಲ್ಲಾ ಜಾತಿ, ಧರ್ಮಗಳ ಜನರು ಮತ ನೀಡಿದ್ದಾರೆ. 5 ವರ್ಷ ಜನಪರವಾದ ಆಡಳಿತ ನೀಡಬೇಕು ಎಂದ ಅವರು, ಜನ ಅಧಿಕಾರ ನೀಡಿರುವುದು ಮಜಾ ಮಾಡುವುದಕ್ಕೆ ಅಲ್ಲ. 5 ಗ್ಯಾರಂಟಿ ಜಾರಿಗೆ ಮೊದಲ ಕ್ಯಾಬಿನೆಟ್ ನಲ್ಲಿ ಆದೇಶ ಮಾಡಲಾಗುವುದು ಎಂದು ಹೇಳಿದರು. ಜೊತೆಗೆ ಕಾಂಗ್ರೆಸ್ ದೇಶವನ್ನು ಸಾಲಗಾರರನ್ನಾಗಿ ಮಾಡಿದೆ ಎಂಬ ಆರೋಪಕ್ಕೆ ಟಾಂಗ್ ಕೊಟ್ಟಿದ್ದು ದೇಶವನ್ನ ಸಾಲಗಾರರನ್ನಾಗಿ ಮಾಡಿರೋದು ನರೇಂದ್ರ ಮೋದಿ ಎಂದು ಕಿಡಿ ಕಾರಿದರು.