ಧಾರವಾಡ | ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಪ್ರಾರಂಭವಾಗಿರುವ WINTECH Protein Recovery Plant LLP ಎಂಬ ಪ್ರಾಣಿಗಳ ಆಹಾರ ತಯಾರಿಸುವ ಕಂಪನಿ ಅಂಚಟಗೇರಿ ಗ್ರಾಮದ ಜನ ವಸತಿ ಪ್ರದೇಶದ ಪಕ್ಕದಲ್ಲೇ ಪ್ರಾರಂಭವಾಗಿದ್ದು, ಈ ಕಂಪನಿಯಲ್ಲಿ ಕೋಳಿ, ಕುರಿ, ದನ, ಹಂದಿ ಹಾಗೂ ಇತರ ಪ್ರಾಣಿಗಳ ಕೊಳಕು ಹಸಿ ಮಾಂಸ ಸಂಗ್ರಹಿಸಿ ಪ್ರಾಣಿಗಳ ಆಹಾರ ತಯಾರಿಸುತ್ತಿದ್ದು ಇದರಿಂದ ಕೆಟ್ಟ ವಾಸನೆ ಬರುತ್ತಿದೆ. ಹೀಗಾಗಿ ಇಲ್ಲಿಯವ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳ ಆರೋಗ್ಯಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕಂಪನಿಯಿಂದ ತುಂಬಾ ಕೊಳಕು ವಾಸನೆ ಬರುವುದರಿಂದ ಅಕ್ಕ ಪಕ್ಕದ ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಯಾರು ಕಾರ್ಮಿಕರು ಬರುತ್ತಿಲ್ಲ. ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಮಕ್ಕಳ ಊಟದ ಸಮಯದಲ್ಲಿ ದುರ್ವಾಸನೆಯಿಂದ ವಾಂತಿ ಬೇದಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತಿದೆ. ನಮ್ಮ ಅಂಚಟಗೇರಿ ಗ್ರಾಮದ ಜನರಿಗೆ ಮನೆಯಲ್ಲಿ ಕೆಟ್ಟ ವಾಸನೆಯಿಂದ ಮನೆಯಲ್ಲಿ ಊಟವನ್ನು ಸಹಿತ ಮಾಡಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಪ್ರಲ್ಲಾದ ಜೋಶಿ , ಕಾರ್ಮಿಕ ಸಚಿವ ಸಂತೋಷ ಎಸ್ ಲಾಡ್ ಹಾಗೂ ಕ್ಷೆತ್ರದ ಶಾಸಕ ಎಮ್ ಆರ್ ಪಾಟೀಲ, ಜಿಲ್ಲಾಧಿಕಾರಿಗಳಿಗೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ಮನವಿ ಸಲ್ಲಿಸಿದ್ದೆವೆ. ಆದರೂ ಈ ಕಂಪನಿಯ ಮೇಲೆ ಇಲ್ಲಿಯವರೆಗು ಯಾವುದೇ ಕ್ರಮ ತಗೆದುಕೊಂಡಿಲ್ಲ (WINTECH Protein Recovery Plant llp) ಇದರಿಂದ ಬೇಸತ್ತ ಊರಿನ ಗ್ರಾಮಸ್ಥರು ಹುಬ್ಬಳ್ಳಿ ಕಾರವಾರ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.