ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರ ನಗರದ ಒಂದನೆ ವಾರ್ಡ ವಾಪಸಂದ್ರದಲ್ಲಿ ಲೋಕಸಭಾ ಮಾಜಿ ಸದಸ್ಯ ವೀರಪ್ಪ ಮೊಯಿಲಿ ಗೃಹ ಕಚೇರಿ ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಚುನಾವಣೆ ವೇಳೆ ತಾರಾತುರಿಯಲ್ಲಿ ಕ್ಷೇತ್ರದ ಜನರಿಗೆ ಹಕ್ಕುಪತ್ರಗಳ ವಿತರಣೆ ಮಾಡಿದ ಮಾಜಿ ಶಾಸಕ ಡಾ.ಕೆ.ಸುಧಾಕರ್ ಅಕ್ರಮ ಎಸಗಿರುವ ಬಗ್ಗೆ ಪರಿಶಿಲನೆ ನಡೆಸಿ ಕ್ರಮ ಜರಿಸುವಂತೆ ವಸತಿ ಸಚಿವ ಜಮೀರ್ ಅಹಮದ್ ಸೂಚಿಸುರುವುದು ಸರಿಯಾಗಿದೆ. ಅವರ ಉದ್ದಟತನದಿಂದಲೆ ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ ಅಂತ ಅವರ ಪಕ್ಷದೊಳಗೆ ಚರ್ಚೆ ಆಗಿರೋದು ಬಹಿರಂಗ ಆಗಿದೆ ಎಂದು ವೀರಪ್ಪ ಮೊಯಿಲಿ ಅಭಿಪ್ರಾಯ ಪಟ್ಟರು.
ಕಾಂಗ್ರೇಸ್ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡೋದೆ ವಿರೋಧ ಪಕ್ಷಗಳ ಕೆಲಸ, ಪಕ್ಷ ಚುನಾವಣೆ ವೇಳೆ ನೀಡಿರುವ ಎಲ್ಲ ಭರವಸೆಗಳನ್ನ ಈಡೇರಿಸುತ್ತೆ ಅಂದ್ರು ನಾನು ಲೋಕಸಭೆ ಸದಸ್ಯನಾದಾಗಿನಿಂದಲೂ ಮಾಜಿ ಆದ ಮೇಲೂ ಚಿಕ್ಕಬಳ್ಳಾಪುರದಲ್ಲಿ ಮನೆ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಮುಂದಿನ ಬಾರಿಗೆ ನೀವೆ ಅಭ್ಯರ್ಥಿ ಆಗ್ತೀರಾ ಅಂದಿದ್ದಕ್ಕೆ ಪಕ್ಷ ತೀರ್ಮಾನ ಮಾಡುತ್ತೆ. ಆದ್ರೆ ಜನರಿಗಾಗಿ ನನ್ನ ಸೇವೆ ಮುಂದುವರೆಯಲಿದೆ ಅಂದ್ರು.