Home Blog Page 3

Tumkur drain | ಚರಂಡಿ ಇಲ್ಲದೆ ರಸ್ತೆ ಮೇಲೆ ಹರಿಯುತ್ತಿದೆ ಮಳೆ ನೀರು ; ಕೆಲವೇ ದಿನಗಳಲ್ಲಿ ಕಿತ್ತು ಹೋಗಲಿದೆ ಡಾಂಬರು..!

ತುಮಕೂರು | ತುಮಕೂರಿನ (Tumkur) ರಿಂಗ್ ರಸ್ತೆಯಿಂದ ಗಂಗಸಂದ್ರ ಗ್ರಾಮದವರೆಗೆ (Gangasandra village) ಇತ್ತೀಚೆಗೆ ಹೊಸದಾಗಿ ಡಾಂಬರಿಕರಣ ರಸ್ತೆ ಮಾಡಲಾಗಿದೆ. ಆದರೆ ಈ ಹಿಂದೆ ಬಾಕ್ಸ್ ಚರಂಡಿ (drain) ಮಾಡುವ ಸಂದರ್ಭದಲ್ಲಿ ಈ ರಸ್ತೆಯ ಅಕ್ಕ ಪಕ್ಕದ ಜಮೀನ್ದಾರರಿಗೆ ಪರಿಹಾರ ನೀಡದ ಹಿನ್ನಲೆ ಚರಂಡಿ ಮಾಡಲು ಜಾಗ ಬಿಟ್ಟಿರುವುದಿಲ್ಲ ಹೀಗಾಗಿ ಸಮಸ್ಯೆಯೊಂದು ತಲೆದೋರಿದೆ.

ಹೌದು,, ಈ ರಸ್ತೆಯಲ್ಲಿ  ತುಮಕೂರಿನ ಪಿ.ಡಬ್ಲ್ಯೂ. ಡಿ. ವಿಭಾಗವು   ಹೊಸದಾಗಿ ಡಾಂಬರ್ ರಸ್ತೆಯನ್ನು ಮಾಡಿದ್ದು, ಈ ರಸ್ತೆಯ ಅಲ್ಲಲ್ಲಿ ಮಳೆ ನೀರು ಸರಾಗವಾಗಿ ಚರಂಡಿಗೆ ಹೋಗದೆ ಡಾಂಬರ್ ರಸ್ತೆಯ ಮೇಲೆ ನಿಲ್ಲುತ್ತದೆ. ಈ ಕಾರಣದಿಂದ ರಸ್ತೆಯು ಅತಿ ಶೀಘ್ರದಲ್ಲಿ ಹಾಳಾಗುವ ಸಂಭವ ಇರುತ್ತದೆ.

ಸಂಬಂಧಿಸಿದ ಇಲಾಖೆಯು ಸ್ಥಳ ಪರಿಶೀಲಿಸಿ, ನೀರು ಸರಗಾಗಿ  ಚರಂಡಿಗೆ ಹೋಗುವಂತೆ ಮಾಡಿ,  ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಹಾಗೂ ಡಾಂಬರ್ ರಸ್ತೆ ಹಾಳಾಗದಂತೆ ಕ್ರಮವಹಿಸಲು ಕಲ್ಪತರು ಬಡಾವಣೆಯ ನಾಗರಿಕರು ಈ ಮೂಲಕ  ಆಗ್ರಹಿಸಿದ್ದಾರೆ.

Tumkur Ettinhola Project | ಎತ್ತಿನಹೊಳೆ ಯೋಜನೆ ಮೂಲಕ ಶಿರಾ ತಾಲೂಕಿನ 200 ಕೆರೆಗಳಿಗೆ ನೀರು – ಟಿ ಬಿ ಜಯಚಂದ್ರ

ಬೆಂಗಳೂರು | ಎತ್ತಿನಹೊಳೆ ಯೋಜನೆಯಿಂದ (Ettinhola Project) ತುಮಕೂರು (Tumkur) ಜಿಲ್ಲೆಯ ಶಿರಾ ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ ಯೋಜನೆಯನ್ನು ಮಾರ್ಪಡಿಸಿ ಕೆರೆಗಳಿಗೆ ನೀರು (Water to lakes) ತುಂಬಿಸುವ ಯೋಜನೆಯಾಗಿ ರೂಪಿಸಲು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಸಮನ್ವಯ ಸಮತಿಗೆ ಮನವಿ ಮಾಡಲು ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ (TB Jayachandra) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಎತ್ತಿನಹೊಳೆ ಯೋಜನೆ ಮೂಲಕ ಶಿರಾ ತಾಲೂಕಿನ 200 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಬಿ ಜಯಚಂದ್ರ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು‌.

ಉಪಮುಖ್ಯಮಂತ್ರಿಗಳಾದ ಡಿ‌.ಕೆ ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರರಾದ ಕೆ. ಜಯಪ್ರಕಾಶ್ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಮಂಡಳಿ  ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣ ಚಿತ್ತಯ್ಯ ಮುಖ್ಯ ಇಂಜಿನಿಯರ್ ವರದಯ್ಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಆನಂದ್ ಕುಮಾರ್  ಹಾಗೂ  ಸಹಾಯಕ ಅಭಿಯಂತರರಾದ ಯೋಗೇಶ್ ಹಾಗೂ ಟಿ.ಬಿ ಜಯಚಂದ್ರ ಅವರ ನೀರಾವರಿ ಸಲಹೆಗಾರರ ಈಶ್ವರಯ್ಯ ಅವರು ಸಭೆಯಲ್ಲಿ ಹಾಜರಿದ್ದರು.

ಎತ್ತಿನಹೊಳೆ ಯೋಜನೆ ಮೂಲಕ ಶಿರಾ ನಗರದ 200 ಕೆರೆಗಳಿಗೆ ಕುಡಿಯುವ ನೀರಿಗಾಗಿ 0.514  ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ ಇದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ ಹಾಗಾಗಿ ಈ ಯೋಜನೆಯನ್ನು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿ ಮಾರ್ಪಡಿಸಬೇಕು ಎಂದು ಟಿ‌.ಬಿ ಜಯಚಂದ್ರ ಅವರು ಅಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಅಧಿಕಾರಿಗಳು ಈ ವಿಷಯವನ್ನು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಸಮನ್ವಯ ಸಮಿತಿ ಸಭೆಯಲ್ಲಿ ಮಂಡಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜೊತೆ ಸಹ ಮುಂದಿನ ತಿಂಗಳಲ್ಲಿ ಒಂದು ಸಭೆ ಮಾಡುವುದಾಗಿ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಸಮಗ್ರ ಎತ್ತಿನಹೊಳೆ ಯೋಜನೆಯ ಕಾರ್ಯ ಪ್ರಗತಿಯನ್ನು ಹಾಗೂ ಭೂಸ್ವಾಧೀನ ಮತ್ತು   ಈ ಯೋಜನೆ ಹಣ ಬಿಡುಗಡೆಗೊಳಿಸಿರುವ ಮಾಹಿತಿಯನ್ನು  ಟಿ. ಬಿ ಜಯಚಂದ್ರ ಅವರು ಇದೇ ವೇಳೆ ಪಡೆದರು. ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಇದೆ ವೇಳೆ ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿಯ ವಿವರಗಳನ್ನು ಸಹ ಟಿ.ಬಿ ಜಯಚಂದ್ರ ಅವರು ಪಡೆದರು.

Dr. G. Parameshwar | ಹತ್ಯೆ ನಡೆದು ವಾರ ಕಳೆದ ನಂತರ ಅಂಜಲಿ ಮನೆಗೆ ಗೃಹ ಸಚಿವ ಪರಮೇಶ್ವರ್ ಭೇಟಿ..!

ಹುಬ್ಬಳ್ಳಿ-ಧಾರವಾಡ | ಅವಳಿನಗರದಲ್ಲಿ ಕಾನೂನು (Law) ಸುವ್ಯವಸ್ಥೆ ಹದಗೆಟ್ಟಿದ್ದು, ಒಂದೇ ತಿಂಗಳಲ್ಲಿ ಇಬ್ಬರು ಯುವತಿಯರ ಕೊಲೆಯಾಗಿರುವ (Young woman murdered) ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಗೆ (Hubli) ಗೃಹ ಸಚಿವ ಡಾ. ಜಿ. ಪರಮೇಶ್ವರ (Dr. G. Parameshwar) ಭೇಟಿ ನೀಡಿದ್ದಾರೆ.

ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಈಗ ಕೊಲೆಯಾದ ಅಂಜಲಿ ಅಂಬಿಗೇರ ಮನೆಗೆ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿ ಕುಟುಂಬಸ್ಥರ ಜೊತೆಗೆ ಸಮಾಲೋಚನೆ ನಡೆಸಿದರು.

ಇನ್ನೂ ಗೃಹ ಸಚಿವರು ಆಗಮಿಸುತ್ತಿದ್ದಂತೆಯೇ ಅಂಜಲಿಯ ಅಜ್ಜಿ ಕಣ್ಣೀರು ಹಾಕಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೇ ಗೃಹ ಸಚಿವರು ಅಂಜಲಿ ಕುಟುಂಬಸ್ಥರ ಜೊತೆಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

Antarsanahalli Industrial Area | ಅಂತರಸಹಳ್ಳಿ ಕ್ಯೆಗಾರಿಕಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಧಿಡೀರ್ ಭೇಟಿ..!

ತುಮಕೂರು | ನಗರದ ಹೊರವಲಯದ ಅಂತರಸನಹಳ್ಳಿ (Antarsanahalli) ಕೈಗಾರಿಕಾ ವಸಾಹತು ಕಾರ್ಖಾನೆಯೊಂದರಿಂದ (Industrial factory) ಕಲುಷಿತ ನೀರನ್ನು (Polluted water) ರಾಜ ಕಾಲುವೆಗೆ ಹೊರಬೀಡುತ್ತಿರುವ ಬಗ್ಗೆ  ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ (District Collector Shubkalyan) ರವರು ಸೋಮವಾರ ಮಧ್ಯಾಹ್ನ ನಗರದ ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೈಗಾರಿಕೆಗಳು ಮಾಲಿನಯುಕ್ತ ತ್ಯಾಜ್ಯಗಳನ್ನು ಕಾಲುವೆಗಳಿಗೆ ಬೀಡಬಾರದು, ಈ ಬಗ್ಗೆ  ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸದರಿ ಪ್ರದೇಶವನ್ನು  ಸಮಗ್ರವಾಗಿ ಪರಿಶೀಲಿಸಿ, ತ್ವರಿತ ವರದಿ ಸಲ್ಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅಂತರಸಹಳ್ಳಿ ಕ್ಯೆಗಾರಿಕಾ ವಸಾಹತು ಪ್ರದೇಶದ ವ್ಯಾಪ್ತಿಯು ರಾಜ್ಯ ಸಣ್ಣ ಕ್ಯೆಗಾರಿಕಾ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಸೇರಿರುವುದರಿಂದ, ರಾಜ್ಯ ಸಣ್ಣ ಕ್ಯೆಗಾರಿಕಾ ಅಭಿವೃದ್ದಿ ನಿಗಮದ ಸಹಾಯಕ ವ್ಯವಸ್ಥಾಪಕರಿಗೆ ಸ್ಥಳದಲೇ ದೂರವಾಣಿ ಮುಖೇನ ಮಾತನಾಡಿ, ಅಂತರಸಹಳ್ಳಿ ಕ್ಯೆಗಾರಿಕಾ ಪ್ರದೇಶದ ಕಾಲುವೆಗಳಲ್ಲಿ ಇರುವಂತಹ ತ್ಯಾಜ್ಯಗಳ ಪರಿಶೀಲನೆ ಮತ್ತು ವಿಲೇವಾರಿಗೆ ಶೀಘ್ರ ಕ್ರಮಕ್ಯೆಗೊಳ್ಳುವಂತೆ  ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕ್ಯೆಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಡಿ.ಕೆ.ಲಿಂಗರಾಜು, ಕೆಐಎಡಿಬಿ ಅಧಿಕಾರಿಗಳು ಸೇರಿದ್ದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Drought relief | ತುಮಕೂರು ಜಿಲ್ಲೆ ರೈತರಿಗೆ ಬರ ಪರಿಹಾರವಾಗಿ ಬಿಡುಗಡೆಯಾಗಿರುವ ಹಣ ಎಷ್ಟು ಕೋಟಿ ಗೊತ್ತಾ..?

ತುಮಕೂರು | ಜಿಲ್ಲೆಯ 1,32,332 ರೈತರ (Farmers) ಖಾತೆಗೆ 74 ಕೋಟಿ ರೂ.ಗಳ ಬರ ಪರಿಹಾರ (Drought relief) ಹಣವನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ (District Collector Shub Kalyan) ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ತಾಲೂಕು ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು  ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ 15,975 ರೈತರಿಗೆ 9,28,23,283 ರೂ., ಗುಬ್ಬಿಯ 8234 ರೈತರಿಗೆ 4,10,29,295 ರೂ., ಕೊರಟಗೆರೆ-12,144 ರೈತರಿಗೆ 7,28,13,925 ರೂ., ಕುಣಿಗಲ್-19,022 ರೈತರಿಗೆ 9,64,53,201 ರೂ., ಮಧುಗಿರಿ-15,548 ರೈತರಿಗೆ 8,97,83,195 ರೂ., ಪಾವಗಡ-5641 ರೈತರಿಗೆ 4,25,83,561 ರೂ., ಶಿರಾ-17,013 ರೈತರಿಗೆ 11,19,28,237 ರೂ., ತಿಪಟೂರು-14955 ರೈತರಿಗೆ 7,78,65,493 ರೂ., ತುಮಕೂರು-11,004 ರೈತರಿಗೆ 5,20,55,965 ರೂ. ಹಾಗೂ ತುರುವೇಕೆರೆ ತಾಲೂಕಿನ 12,796 ರೈತರಿಗೆ 6,48,09,796 ರೂ. ಸೇರಿದಂತೆ 1,32,332 ರೈತರಿಗೆ 74,21,45,951 ರೂ.ಗಳ ಬರ  ಪರಿಹಾರವನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಬರ ಪರಿಹಾರ ಹಣವನ್ನು ಖಾತೆಗೆ ಜಮೆ ಮಾಡಿದ ರೈತರ ಪಟ್ಟಿಯ ವಿವರವನ್ನು ಜಿಲ್ಲಾಧಿಕಾರಿಗಳ ಕಚೇರಿ ಜಾಲತಾಣ, ಎಲ್ಲ ತಾಲೂಕು ಕಚೇರಿ, ಗ್ರಾಮ ಪಂಚಾಯತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚುರಪಡಿಸಬೇಕೆಂದು ಸೂಚನೆ ನೀಡಿದರು.   ಖಾತೆಗೆ ಬರ ಪರಿಹಾರದ ಹಣ ಜಮೆಯಾಗದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಫ್ರೂಟ್ ಐಡಿ ಹಾಗೂ ಆಧಾರ್ ಸಂಖ್ಯೆಯೊAದಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.

ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಸಮಸ್ಯೆಯ ಅಹವಾಲು ಸಲ್ಲಿಸಲು ಜಿಲ್ಲೆಯಲ್ಲಿ ಸ್ಥಾಪಿಸಿರುವ 18 ಮೇವು ಬ್ಯಾಂಕುಗಳಲ್ಲಿಯೂ ಸಹಾಯವಾಣಿ ಕೇಂದ್ರವನ್ನು ತೆರೆಯಬೇಕು.  ಸ್ವೀಕರಿಸಿದ ಅಹವಾಲುಗಳಿಗೆ ಅಧಿಕಾರಿಗಳು ಆದ್ಯತೆ ಮೇಲೆ ಸ್ಪಂದಿಸಿ ಪರಿಹರಿಸಲು ಕ್ರಮವಹಿಸಬೇಕೆಂದರಲ್ಲದೆ ಮೇವು ಬ್ಯಾಂಕಿಗೆ ಖರೀದಿಸಿದ ಮೇವಿನ ಬಿಲ್ ಮೊತ್ತವನ್ನು ಸರಬರಾಜುದಾರರಿಗೆ ಆದಷ್ಟು ಬೇಗ ಪಾವತಿಸಬೇಕೆಂದು ಸೂಚಿಸಿದರು.

ಆಶ್ರಯ ವಸತಿ ಯೋಜನೆ ಪ್ರಗತಿ ಪರಿಶೀಲಿಸಿದ ಅವರು ಜಿಲ್ಲೆಯಲ್ಲಿ ಆಶ್ರಯ ವಸತಿ ಯೋಜನೆಯಡಿ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಈಗಾಗಲೇ ಜಿಲ್ಲೆಯಲ್ಲಿ 1728-19 ಎಕರೆ ಜಮೀನನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಂಜೂರಾತಿ ಆದೇಶ ನೀಡಲಾಗಿದ್ದು, 1199.19 ಎಕರೆ ಪ್ರದೇಶವನ್ನು ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರಿಸಲಾಗಿದೆ. ಹಸ್ತಾಂತರವಾದ ಜಮೀನನ್ನು  ಬಡಾವಣೆಗಳನ್ನಾಗಿ ನಿರ್ಮಿಸಲು ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು  ನಗರ ಯೋಜನಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.

ಆಧಾರ್ ಲಿಂಕಿಂಗ್/ಸೀಡಿಂಗ್, ಜನನ ಮತ್ತು ಮರಣ ಪ್ರಮಾಣ ಪತ್ರ, ಸಕಾಲ, ಭಗರ್ ಹುಕುಂ, 3 ಮತ್ತು 9 ತಿದ್ದುಪಡಿ, ಭೂಮಿ ಪೆಂಡೆನ್ಸಿ, ಭೂ ಪರಿವರ್ತನೆ, ಸಿ.ಎಂ. ಹಾಗೂ ಜಿಲ್ಲಾಧಿಕಾರಿಗಳ ಜನತಾದರ್ಶನ, ಅಭಿಲೇಖಾಲಯ ಡಿಜಿಟಲೀಕರಣ, ಲ್ಯಾಂಡ್ ಬೀಟ್, ಕಂದಾಯ ಗ್ರಾಮಗಳ ಪ್ರಗತಿ ಸಂಬಂಧಿಸಿದಂತೆ ಬಾಕಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಕಂದಾಯ ಪ್ರಗತಿಯಲ್ಲಿ ಜಿಲ್ಲೆಯನ್ನು ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ತರಬೇಕು ಎಂದು ನಿರ್ದೇಶಿಸಿದರು.

Tumkur voting machine Security room | ತುಮಕೂರಿನ ಮತಯಂತ್ರಗಳ ಭದ್ರತಾ ಕೊಠಡಿಗೆ ಮುಖ್ಯ ಚುನಾವಣಾಧಿಕಾರಿಗಳ ಭೇಟಿ..!

ತುಮಕೂರು | ಜಿಲ್ಲೆಯ (Tumkur) ಲೋಕಸಭಾ ಕ್ಷೇತ್ರ ಚುನಾವಣೆಗೆ (Lok Sabha Elections) ಸಂಬಂಧಿಸಿದಂತೆ ವಿದ್ಯುನ್ಮಾನ ಮತಯಂತ್ರಗಳನ್ನು (Electronic voting machine) 24 x 7 ಸಿಎಪಿಎಫ್ ಹಾಗೂ ಪೊಲೀಸ್ ಬಿಗಿ ಭದ್ರತೆಯಲ್ಲಿ ನಗರದ   ವಿಶ್ವವಿದ್ಯಾನಿಲಯದ ವಿಜ್ಞಾನ  ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇರಿಸಿರುವ ಭದ್ರತಾ ಕೊಠಡಿಗಳಿಗೆ (Security room) ಇಂದು ಬೆಳಿಗ್ಗೆ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರು ಭೇಟಿ ನೀಡಿ ಪರಿಶೀಲಿಸಿದರು.

ಲೋಕಸಭಾ ಚುನಾವಣೆಯ ಮತ ಎಣಿಕೆಯು   ವಿಶ್ವವಿದ್ಯಾನಿಲಯದ ವಿಜ್ಞಾನ  ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೂನ್ 4ರಂದು ನಡೆಯಲಿದ್ದು, ಮತ ಎಣಿಕೆಗೆ ಕೈಗೊಂಡಿರುವ ಪೂರ್ವ ಸಿದ್ಧತೆ, ಎಣಿಕಾ ಕೊಠಡಿಗಳ ಯೋಜನಾ ನಕ್ಷೆಯನ್ನು ಪರಿಶೀಲಿಸಿದರು.

ಭದ್ರತಾ ಕೊಠಡಿಗೆ ನಿರಂತರ ವಿದ್ಯುತ್ ಪೂರೈಕೆ, ತಡೆರಹಿತ ವಿದ್ಯುತ್ ಪೂರೈಕೆಗಾಗಿ ಪರ್ಯಾಯ ವ್ಯವಸ್ಥೆ, ಸ್ಟಾçಂಗ್ ರೂಮ್‌ಗಳಿಗೆ ಡಬಲ್ ಲಾಕ್ ವ್ಯವಸ್ಥೆ ಹೊಂದಿರುವ, 2 ಸುತ್ತಿನ ಭದ್ರತಾ ವ್ಯವಸ್ಥೆ ಹಾಗು 1 ಪ್ಲಟೂನ್ ವ್ಯವಸ್ಥೆ ಕಲ್ಪಿಸಿರುವ, ಸಿಸಿ ಟಿವಿ ಅಳವಡಿಕೆ, 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸ್ಟಾçಂಗ್ ರೂಂ ನಿಯಂತ್ರಣಾ ಕೊಠಡಿ, ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ವಾಹನ ನಿಯೋಜನೆ, ಪೊಲೀಸ್ ಸಿಬ್ಬಂದಿ, ಸಿಎಪಿಎಫ್ ಹಾಗೂ ಸ್ಟಾçಂಗ್ ರೂಮಿಗೆ ಭೇಟಿ ನೀಡುವವರ ಲಾಗ್ ಪುಸ್ತಕ, ಸಿಸಿ ಟಿವಿಯನ್ನು ಪರಿಶೀಲಿಸಿ ಮಾತನಾಡಿದ ಅವರು ಎಣಿಕಾ ಕಾರ್ಯವನ್ನು ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಜಿಲ್ಲಾಧಿಕಾರಿ ಶುಭ ಕಲ್ಯಾಣ್   ಮಾತನಾಡಿ,   ಎಣಿಕಾ ಕಾರ್ಯಕ್ಕಾಗಿ ನಿಯೋಜಿಸಿರುವ ಅಧಿಕಾರಿ/ಸಿಬ್ಬಂದಿಗಳ ವಿವರ, ಎಣಿಕಾ ಕೊಠಡಿಗಳು ಹಾಗೂ ಎಣಿಕಾ ಟೇಬಲ್ ವ್ಯವಸ್ಥೆ, ವ್ಯವಸ್ಥಿತ ಎಣಿಕಾ ಕಾರ್ಯಕ್ಕೆ ಕೈಗೊಂಡಿರುವ ಸಕಲ ಸಿದ್ಧತೆಗಳ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಅಶೋಕ್   ಭದ್ರತಾ ಕೊಠಡಿಗೆ ಒದಗಿಸಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿ, ಎಣಿಕಾ ದಿನದಂದು ಕೈಗೊಳ್ಳಲಾಗುವ ಪೊಲೀಸ್ ಬಂದೋಬಸ್ತ್ ಕುರಿತು ವಿವರಿಸಿದರು.

Tumkur Malaria disease | ತುಮಕೂರು ಜಿಲ್ಲೆಯಲ್ಲಿನ ನಕಲಿ ವೈದ್ಯರ ವಿರುದ್ಧ ಸೂಕ್ತ ಕ್ರಮ – ಡಾ. ಮಂಜುನಾಥ್

ಆರೋಗ್ಯ | ರಾಜ್ಯದಲ್ಲಿ ಮಲೇರಿಯ (Malaria) ರೋಗವನ್ನು 2025ಕ್ಕೆ ಸಂಪೂರ್ಣ ನಿವಾರಣೆ ಮಾಡುವ ಗುರಿಯನ್ನು ಹೊಂದಿದ್ದು, ಮಲೇರಿಯಾ (Malaria)  ರೋಗ ನಿರ್ಮೂಲನೆ ಮಾಡಲು ಸಮುದಾಯ ಹಂತದಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ (health) ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮಂಜುನಾಥ್ (Dr. Manjunath) ತಿಳಿಸಿದರು.

ತುಮಕೂರು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಂಣದಲ್ಲಿಂದು ಮಲೇರಿಯ ರೋಗ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಮಲೇರಿಯ ರೋಗದ ಬಗ್ಗೆ ಅರಿವು ಮೂಡಿಸಲು  ವಿಶ್ವದಾದ್ಯಂತ 2008 ರಿಂದ ಪ್ರತಿ ವರ್ಷ ಏಪ್ರಿಲ್ 25 ರಂದು   ವಿಶ್ವ ಮಲೇರಿಯ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 2024ರಲ್ಲಿ ಯಾವುದೇ ಮಲೇರಿಯ ಪ್ರಕರಣಗಳು ಕಂಡು ಬಂದಿಲ್ಲ.  ಹೊರ ರಾಜ್ಯದಿಂದ  ಜಿಲ್ಲೆಗೆ ವಲಸೆ ಬಂದವರಲ್ಲಿ 14 ಪ್ಲಾಸ್ಮೊಡಿಯಂ ವೈವ್ಯಾಕ್ಸ್ ಮಲೇರಿಯ ಪ್ರಕರಣಗಳು ದಾಖಲಾಗಿದ್ದು, 123 ಡೆಂಗ್ಯೂ ಹಾಗೂ 30 ಚಿಕನ್‌ಗುನ್ಯ ಪ್ರಕರಣಗಳು ದಾಖಲಾಗಿವೆ  ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಮಲೇರಿಯ ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಮನೆಗಳಲ್ಲಿ ಸೊಳ್ಳೆ ಪರದೆ, ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಿಕೊಂಡು ಮನೆ ಸುತ್ತ ಮುತ್ತಲಿನ ಪ್ರದೇಶಗಳನ್ನು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲೆಯಲ್ಲಿರುವ ನಕಲಿ ವೈದ್ಯರು, ಅಂಬ್ಯುಲೆನ್ಸ್ ಸಮಸ್ಯೆ ಮತ್ತು ಪಾವಗಡ ತಾಲ್ಲೂಕು ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿಗೆ ಸಂಭವಿಸಿದಂತೆ  ಮಾಧ್ಯಮವರೊಂದಿಗೆ ಚರ್ಚಿಸಿದ ಅವರು  ನಕಲಿ ವೈದ್ಯರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರಲ್ಲದೆ ರೋಗಿಗಳ ನೆರವಿಗಾಗಿ ಜಿಲ್ಲೆಯಲ್ಲಿ 42 ಅಂಬ್ಯುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

Dark chocolate | ಒಂದು ಸಣ್ಣ ತುಂಡು ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ಆರೋಗ್ಯ ಸಲಹೆ | ಡಾರ್ಕ್ ಚಾಕೊಲೇಟ್ ನಲ್ಲಿ (Dark chocolate) ಪೋಷಕಾಂಶಗಳು (nutrient) ಸಮೃದ್ಧವಾಗಿವೆ ಇದು ನಿಮ್ಮ ಆರೋಗ್ಯಕ್ಕೆ (health) ತುಂಬಾ ಪ್ರಯೋಜನಕಾರಿ. ಇದರಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿವೆ. ಡಾರ್ಕ್ ಚಾಕೊಲೇಟ್ (Dark chocolate) ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಡಾರ್ಕ್ ಚಾಕೊಲೇಟ್‌ನಲ್ಲಿ 11 ಗ್ರಾಂ ಫೈಬರ್, 66 ಪ್ರತಿಶತ ಕಬ್ಬಿಣ, 57 ಪ್ರತಿಶತ ಮೆಗ್ನೀಸಿಯಮ್, 196 ಪ್ರತಿಶತ ತಾಮ್ರ ಮತ್ತು 85 ಪ್ರತಿಶತ ಮ್ಯಾಂಗನೀಸ್‌ನಂತಹ ಅನೇಕ ಪೋಷಕಾಂಶಗಳು ಇದ್ದು ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ಇದನ್ನು ಓದಿ : Sweet and sour | ಸಿಹಿ ತಿನಿಸು ತಿಂದ ತಕ್ಷಣ ಹುಳಿ ಪದಾರ್ಥ ಸೇವಿಸಬಾರದು ಯಾಕೆ ಗೊತ್ತಾ..? – karnataka360.in

ಡಾರ್ಕ್ ಚಾಕೊಲೇಟ್ ಇತರ ಚಾಕೊಲೇಟ್‌ಗಳಿಗಿಂತ ಹೆಚ್ಚು ಕೋಕೋ ಮತ್ತು ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ಹಾಲು ಚಾಕೊಲೇಟ್‌ಗಿಂತ ಹೆಚ್ಚು ಪ್ರಯೋಜನಕಾರಿ ಮತ್ತು ಕಡಿಮೆ ಸಿಹಿಯಾಗಿರುತ್ತದೆ.

ಡಾರ್ಕ್ ಚಾಕೊಲೇಟ್‌ನ ಪ್ರಯೋಜನಗಳು

ಡಾರ್ಕ್ ಚಾಕೊಲೇಟ್ ಸೇವನೆಯು ಹೃದ್ರೋಗದ ಅನೇಕ ಪ್ರಮುಖ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ಒಂದು ಅಧಿಕ ಕೊಲೆಸ್ಟ್ರಾಲ್. ಫ್ಲಾವನಾಲ್ ಲೈಕೋಪೀನ್‌ನಲ್ಲಿ ಸಮೃದ್ಧವಾಗಿರುವ ಡಾರ್ಕ್ ಚಾಕೊಲೇಟ್ ಒಟ್ಟು ಕೊಲೆಸ್ಟ್ರಾಲ್, ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಸಂಯುಕ್ತಗಳು ಎಲ್‌ಡಿಎಲ್‌ನಿಂದ ರಕ್ಷಣೆ ನೀಡುತ್ತದೆ, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಚರ್ಮಕ್ಕೆ ಅದ್ಭುತವಾಗಿದೆ

ಡಾರ್ಕ್ ಚಾಕೊಲೇಟ್‌ನಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಫ್ಲಾವನಾಲ್ಗಳು ಸೂರ್ಯನ ಹಾನಿಯಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. ತ್ವಚೆಯಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಚರ್ಮವನ್ನು ಬಿಗಿಯಾಗಿ ಮತ್ತು ಹೈಡ್ರೀಕರಿಸುತ್ತದೆ.

ಒತ್ತಡವನ್ನು ಕಡಿಮೆ ಮಾಡಲು ಸಹಾಯಕ

ಒತ್ತಡವನ್ನು ಕಡಿಮೆ ಮಾಡಲು ಡಾರ್ಕ್ ಚಾಕೊಲೇಟ್ ಪರಿಣಾಮಕಾರಿಯಾಗಿದೆ. ಇದನ್ನು ತಿನ್ನುವುದರಿಂದ ನಿಮ್ಮ ಮನಸ್ಥಿತಿ ಸುಧಾರಿಸುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಅಂಶಗಳು ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನ್ ಅನ್ನು ನಿಯಂತ್ರಿಸುತ್ತದೆ.

ಮಧುಮೇಹದಲ್ಲಿ ಪ್ರಯೋಜನಕಾರಿ

ಮಧುಮೇಹದಲ್ಲಿ ಚಾಕೊಲೇಟ್ ಸೇವಿಸುವುದು ವಿಚಿತ್ರವೆನಿಸಬಹುದು ಆದರೆ ಹಲವಾರು ಅಧ್ಯಯನಗಳು ವೈದ್ಯರ ನಿರ್ದೇಶನದಂತೆ ಆರೋಗ್ಯಕರ ಪ್ರಮಾಣದ ಕೋಕೋ-ಭರಿತ ಡಾರ್ಕ್ ಚಾಕೊಲೇಟ್ ಈ ಕಾಯಿಲೆಗೆ ಪ್ರಯೋಜನಕಾರಿಯಾಗಿದೆ ಎಂದು ತೋರಿಸಿದೆ ಏಕೆಂದರೆ ಅದರಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಗ್ಲೂಕೋಸ್ ಅನ್ನು ಚಯಾಪಚಯಗೊಳಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್‌ಗೆ ನಿಮ್ಮ ದೇಹದ ಸೂಕ್ಷ್ಮತೆಯನ್ನು ಸುಧಾರಿಸುವ ಮೂಲಕ, ಇನ್ಸುಲಿನ್ ಪ್ರತಿರೋಧವು ಕಡಿಮೆಯಾಗುತ್ತದೆ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.

Arrest warrant against Netanyahu | ‘ಗಾಜಾದಲ್ಲಿ ನರಮೇಧ ನಡೆಯುತ್ತಿಲ್ಲ’ ಇಸ್ರೇಲ್ ಬೆಂಬಲಕ್ಕೆ ನಿಂತ ಅಮೇರಿಕಾ..!

ಅಮೇರಿಕಾ | ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden) ಸೋಮವಾರ ಇಸ್ರೇಲ್ (Israel) ಅನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಗಾಜಾದಲ್ಲಿ (Gaza) ಏನಾಗುತ್ತಿದೆಯೋ ಅದು ನರಮೇಧವಲ್ಲ, “ಗಾಜಾದಲ್ಲಿ ಹಮಾಸ್ ಭಯೋತ್ಪಾದಕರ (Hamas terrorists) ವಿರುದ್ಧ ಮಿಲಿಟರಿ ಕಾರ್ಯಾಚರಣೆಯಲ್ಲಿ ಇಸ್ರೇಲಿ ಸೇನೆಯು ನರಮೇಧವನ್ನು ಮಾಡುತ್ತಿಲ್ಲ” ಎಂದು ಅವರು ಹೇಳಿದ್ದಾರೆ. ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರಂಟ್ (Arrest warrant against Netanyahu) ಹೊರಡಿಸುವಂತೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಬೇಡಿಕೆಯನ್ನು ಅಧ್ಯಕ್ಷ ಬಿಡೆನ್ ಖಂಡಿಸಿದ್ದಾರೆ.

ಇದನ್ನು ಓದಿ : Immigration rule change | ವಲಸೆ ನಿಯಮಗಳಲ್ಲಿ ಬದಲಾವಣೆ ; ಕೆನಡಾದಲ್ಲಿ ಬೀದಿಗಿಳಿದ ಭಾರತೀಯರು..! – karnataka360.in

ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಇಸ್ರೇಲಿ ನಾಯಕರ ವಿರುದ್ಧ ಬಂಧನ ವಾರಂಟ್‌ಗಳನ್ನು ಹೊರಡಿಸಲು ಐಸಿಸಿ ಪ್ರಾಸಿಕ್ಯೂಟರ್‌ನ ಕೋರಿಕೆಯನ್ನು ಜೋ ಬಿಡೆನ್ ‘ಅತಿರೇಕ’ ಎಂದು ಬಣ್ಣಿಸಿದ್ದಾರೆ. ಅಸ್ಸಿಸಿಯ ಈ ವಿನಂತಿಯನ್ನು ಸ್ವತಃ ಇಸ್ರೇಲ್ ಪ್ರಧಾನಿ ಖಂಡಿಸಿದ್ದಾರೆ ಮತ್ತು ಇದನ್ನು ‘ಅವಮಾನ’ ಮತ್ತು ‘ಇಡೀ ಇಸ್ರೇಲ್ ಮೇಲಿನ ದಾಳಿ’ ಎಂದು ಬಣ್ಣಿಸಿದ್ದಾರೆ.

ಇಡೀ ವಿಷಯ ಏನು..?

ಐಸಿಸಿ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರು ಇಸ್ರೇಲ್ (ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್) ವಿರುದ್ಧ ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಮತ್ತು ನಂತರದ ಇಸ್ರೇಲ್ ಕ್ರಮಗಳಿಗಾಗಿ ಇಸ್ರೇಲ್ ವಿರುದ್ಧ ಆರೋಪ ಹೊರಿಸಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ. ಹಮಾಸ್ ನಾಯಕರ (ಯಾಹ್ಯಾ ಸಿನ್ವಾರ್, ಇಸ್ಮಾಯಿಲ್ ಹನಿಯೆಹ್ ಮತ್ತು ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ) ವಿರುದ್ಧ ಬಂಧನ ವಾರಂಟ್‌ಗಳನ್ನು ನೀಡುವುದಕ್ಕಾಗಿ ಸಲ್ಲಿಸಲಾಗಿದೆ.

ಐಸಿಸಿ ವಿನಂತಿಯನ್ನು ತಿರಸ್ಕರಿಸಿದ ಹಮಾಸ್

ಇಸ್ರೇಲ್ ಮತ್ತು ಹಮಾಸ್ ಎರಡೂ ಐಸಿಸಿ ಪ್ರಾಸಿಕ್ಯೂಟರ್ ಕೋರಿಕೆಯನ್ನು ತಿರಸ್ಕರಿಸಿವೆ. ಹಮಾಸ್ ICC ಪ್ರಾಸಿಕ್ಯೂಟರ್ ಅನ್ನು ಖಂಡಿಸಿತು ಮತ್ತು “ಬಲಿಪಶುವನ್ನು ಮರಣದಂಡನೆಗೆ ಸಮೀಕರಿಸಲು” ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇಸ್ರೇಲ್ ಕೂಡ ಐಸಿಸಿಯ ಘೋಷಣೆಯನ್ನು ಖಂಡಿಸಿದೆ

ಬಂಧನ ವಾರಂಟ್‌ಗಾಗಿ ಐಸಿಸಿ ಪ್ರಾಸಿಕ್ಯೂಟರ್‌ನ ಮನವಿಗೆ ಇಸ್ರೇಲ್ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿತು. ಇಸ್ರೇಲ್‌ನ ವಿದೇಶಾಂಗ ಸಚಿವರು ICC ಪ್ರಾಸಿಕ್ಯೂಟರ್‌ನ ಪ್ರಕಟಣೆಯನ್ನು ‘ಖಂಡನೀಯ’ ಎಂದು ಬಣ್ಣಿಸಿದರು ಮತ್ತು ಇದು ‘ಅಕ್ಟೋಬರ್ 7 ರ ಸಂತ್ರಸ್ತರ ಮೇಲೆ ದಾಳಿ ಮಾಡುವಂತಿದೆ’ ಎಂದು ಹೇಳಿದರು.

ಐಸಿಸಿಯ ಕ್ರಮವನ್ನು ಪ್ರತಿಭಟಿಸಲು “ವಿಶೇಷ ಯುದ್ಧ ಕೊಠಡಿ” ತೆರೆಯಲಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವರು ಹೇಳಿದ್ದಾರೆ. “ಭೂಮಿಯ ಮೇಲೆ ಯಾವುದೇ ಶಕ್ತಿಯು ನಮ್ಮ ಒತ್ತೆಯಾಳುಗಳನ್ನು ಚೇತರಿಸಿಕೊಳ್ಳುವುದನ್ನು ಮತ್ತು ಹಮಾಸ್ ಅನ್ನು ಉರುಳಿಸುವುದನ್ನು ತಡೆಯುವುದಿಲ್ಲ” ಎಂದು ಅವರು ಹೇಳಿದರು. ಆದಾಗ್ಯೂ, ಬಂಧನ ವಾರಂಟ್‌ಗೆ ಸಂಬಂಧಿಸಿದ ಅರ್ಜಿಯ ಕುರಿತು ಐಸಿಸಿಯ ಪ್ರಕಟಣೆಯನ್ನು ದಕ್ಷಿಣ ಆಫ್ರಿಕಾ ಸ್ವಾಗತಿಸಿದೆ.

Porsche car accident | ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ : ಆರೋಪಿಯ ತಂದೆಯನ್ನು ಬಂಧಿಸಿದ ಪೊಲೀಸರು

ಮಹಾರಾಷ್ಟ್ರ | ಪುಣೆಯಲ್ಲಿ (Pune) ನಡೆದ ಪೋರ್ಷೆ ಕಾರು ಅಪಘಾತದಲ್ಲಿ (Porsche car accident) ಮಹಾರಾಷ್ಟ್ರ ಪೊಲೀಸರು (Maharashtra Police) ಕಾರ್ಯಾಚರಣೆಗೆ ಇಳಿದಿದ್ದು, ಆರೋಪಿ ಅಪ್ರಾಪ್ತ ಬಾಲಕನ ರಿಯಲ್ ಎಸ್ಟೇಟ್ ಡೆವಲಪರ್ ತಂದೆ ವಿಶಾಲ್ ಅಗರ್ವಾಲ್ (Vishal Aggarwal) ಅವರನ್ನು ಔರಂಗಾಬಾದ್ ಜಿಲ್ಲೆಯಿಂದ ಮಂಗಳವಾರ ಬಂಧಿಸಿದ್ದಾರೆ. ಮೊನ್ನೆ ಸೋಮವಾರ ಪೊಲೀಸರು ಆರೋಪಿಯನ್ನು ಅಪ್ರಾಪ್ತ ಆರೋಪಿ ಎಂದು ಪರಿಗಣಿಸಿ ವಿಚಾರಣೆ ನಡೆಸಲು ಹೈಕೋರ್ಟ್‌ಗೆ ಅನುಮತಿ ಕೋರಿದ್ದರು. ಆರೋಪಿಯ ತಂದೆ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೆಳ ನ್ಯಾಯಾಲಯವು ಪೊಲೀಸರ ಮನವಿಯನ್ನು ತಿರಸ್ಕರಿಸಿತ್ತು.

Ram Mandir | ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮಮಂದಿರದ ಮೇಲೆ ಬುಲ್ಡೋಜರ್ – ನರೇಂದ್ರ ಮೋದಿ – karnataka360.in

ಮೇ 19ರ ಮುಂಜಾನೆ ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ 17 ವರ್ಷದ ಮಗ ತನ್ನ ಸ್ಪೋರ್ಟ್ಸ್ ಕಾರ್ ಪೋರ್ಷೆಯಲ್ಲಿ ಬೈಕ್ ನಲ್ಲಿ ಚಲಾಯಿಸುತ್ತಿದ್ದ ಹುಡುಗ ಮತ್ತು ಹುಡುಗಿಯ ಮೇಲೆ ಹರಿದು ಇಬ್ಬರ ಸಾವಿಗೆ ಕಾರಣನಾಗಿದ್ದ. ಘಟನೆಯ 14 ಗಂಟೆಗಳ ನಂತರ, ಆರೋಪಿ ಅಪ್ರಾಪ್ತನಿಗೆ ಕೆಲವು ಷರತ್ತುಗಳೊಂದಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿತು. ಆರೋಪಿ ಯುವಕ ಮದ್ಯದ ಅಮಲಿನಲ್ಲಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಮೃತರನ್ನು ಅನೀಶ್ ಅವಧಿಯಾ ಮತ್ತು ಆತನ ಸಂಗಾತಿ ಅಶ್ವಿನಿ ಕೋಷ್ಟ ಎಂದು ಗುರುತಿಸಲಾಗಿದೆ. ಇಬ್ಬರೂ 24 ವರ್ಷ ವಯಸ್ಸಿನವರಾಗಿದ್ದು, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.

ಕೆಲವು ಷರತ್ತುಗಳ ಮೇಲೆ ಆರೋಪಿಯ ಬಿಡುಗಡೆ

ಬಾಲನ್ಯಾಯ ಮಂಡಳಿಯ ಕೆಳ ನ್ಯಾಯಾಲಯವು 14 ಗಂಟೆಗಳೊಳಗೆ ಜಾಮೀನು ನೀಡಿತು, ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಹೇಳಿದೆ. ಟ್ರಾಫಿಕ್ ಪೊಲೀಸರೊಂದಿಗೆ 15 ದಿನಗಳ ಕಾಲ ಕೆಲಸ ಮಾಡುವುದು ಮತ್ತು ರಸ್ತೆ ಅಪಘಾತಗಳ ಪರಿಣಾಮ ಮತ್ತು ಅವುಗಳ ಪರಿಹಾರಗಳ ಕುರಿತು 300 ಪದಗಳ ಪ್ರಬಂಧವನ್ನು ಬರೆಯುವುದು ಸೇರಿದಂತೆ ಅವರ ಬಿಡುಗಡೆಗೆ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿದೆ.

ವಯಸ್ಕರಂತೆ ಪ್ರಯತ್ನಿಸಬೇಕು

ಈ ಪ್ರಕರಣದಲ್ಲಿ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಮಾತನಾಡಿ, ಆರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸಬೇಕು. ಇದಕ್ಕಾಗಿ ಪೊಲೀಸರು ಹೈಕೋರ್ಟ್‌ನ ಅನುಮತಿ ಕೋರಿದ್ದಾರೆ. ಆರೋಪಿ ಅಪ್ರಾಪ್ತನಿಗೆ ಜಾಮೀನು ನೀಡಿದ ಕೋಪದ ನಡುವೆಯೇ ಪೊಲೀಸ್ ಆಯುಕ್ತರ ಈ ಹೇಳಿಕೆ ಬಂದಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಪಿ ಅಮಿತೇಶ್ ಕುಮಾರ್ ತಿಳಿಸಿದ್ದಾರೆ. ಆರೋಪಿಯನ್ನು ವಯಸ್ಕನಂತೆ ಪರಿಗಣಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ಹೇಳಿದ್ದಾರೆ.