Operation Sindoor | ಕೊತ್ತೂರು ಮಂಜುನಾಥ್ ವಿರುದ್ಧ ದಾಖಲಾಯ್ತು ದೂರು..!

Operation Sindoor

ಬೆಂಗಳೂರು | ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kottur Manjunath) ವಿರುದ್ಧ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ (Banashankari Police Station) ದೂರು ದಾಖಲಾಗಿದೆ. ಈ ದೂರನ್ನು ನಾಗರಿಕ ಹಕ್ಕು ಹೋರಾಟ ಸಮಿತಿಯ ಉಪಾಧ್ಯಕ್ಷ ಗಣೇಶ್ ಸಿಂಗ್ ಸಲ್ಲಿಸಿದ್ದು, ಶಾಸಕರು ಭಾರತೀಯ ಸೇನೆಯ ಆಪರೇಷನ್ ಸಿಂದೂರ್ (Operation Sindoor) ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Operation Sindoor

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಆದರೆ, ಈ ಕುರಿತು ಕೊತ್ತೂರು ಮಂಜುನಾಥ್ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ. ಭಾರತ ನಾಲ್ಕು ಫ್ಲೈಟ್ ಕಳಿಸಿದ್ದನ್ನು ಬಿಟ್ಟರೆ ಏನೂ ಮಾಡಿಲ್ಲ. 26 ಮಹಿಳೆಯರ ಅರಶಿನ ಕುಂಕುಮಕ್ಕೆ ಇಷ್ಟೇನಾ ಬೆಲೆ..? ಯುದ್ಧ ಸಾಮಾನ್ಯ ಪ್ರಜೆಗಳ ವಿರುದ್ಧ ಆಗಬಾರದು. ಆದರೆ ನಮ್ಮ ದೇಶದೊಳಗೆ ಬಂದು ಪತಿಯನ್ನು ಹೆಣ್ಣುಮಕ್ಕಳ ಮುಂದೆಯೇ ಹೊಡೆದರೆ, ಅದನ್ನು ಹೇಗೆ ಸಹಿಸಬಹುದು? ಎಂದು ಅವರು ಪ್ರಶ್ನಿಸಿದ್ದರು.

ಇದನ್ನೂ ಓದಿ : Orange Alert | ರಾಜ್ಯಾದ್ಯಂತ ಭಾರೀ ಮಳೆಯ ಮುನ್ಸೂಚನೆ:  ಆರೆಂಜ್ ಅಲರ್ಟ್ ಘೋಷಣೆ

ಶಾಸಕರ ಈ ಹೇಳಿಕೆಗೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ನಾಯಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದು, ಪಾಕಿಸ್ತಾನ ಮಾಧ್ಯಮಗಳಲ್ಲಿ ಸ್ಟಾರ್ ಆಗುವ ಉತ್ಸಾಹದಲ್ಲಿದ್ದಾರೆ ಕಾಂಗ್ರೆಸ್ ನಾಯಕರು ಎಂದರು. ಜೆಡಿಎಸ್ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಯೋಧರ ಶೌರ್ಯವನ್ನು ಪುನಃ ಪುನಃ ಪ್ರಶ್ನಿಸುವುದು ಕಾಂಗ್ರೆಸ್ಸಿಗರ ನೀಚ ಮನೋಭಾವನೆ ಎಂದು ಹೇಳಿದರು.

ವಿವಾದಗಳು ತೀವ್ರಗೊಂಡ ನಂತರ ಕೊತ್ತೂರು ಮಂಜುನಾಥ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ಆಪರೇಷನ್ ಸಿಂದೂರ್ನಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಕಾರ್ಯಾಚರಣೆ ಸಮಾಧಾನ ತಂದುಕೊಡಲಿಲ್ಲ ಎಂದಷ್ಟೆ ಹೇಳಿದ್ದೇನೆ ಎಂದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಕೊತ್ತೂರು ಮಂಜುನಾಥ್ ವಿರುದ್ಧ ಬನಶಂಕರಿ ಠಾಣೆಯಲ್ಲಿ ಕಾನೂನು ಬಾಹಿರ ಹೇಳಿಕೆ ನೀಡಿದ ಬಗ್ಗೆ ಅಧಿಕೃತ ದೂರು ದಾಖಲಾಗಿದೆ.

Follow Us on Facebook : https://www.facebook.com/profile.php?id=61556509312968

Leave a Reply

Your email address will not be published. Required fields are marked *