ಚಿಕ್ಕಮಗಳೂರು | ಲಾರಿಯೊಂದಿಗೆ 335 ಚೀಲ ಅಡಿಕೆ ಕಳ್ಳತನ (Nut theft) ಮಾಡಿದ್ದ ಐವರು ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಕಳ್ಳತನಗೊಂಡ 1 ಕೋಟಿ ರೂ. ಮೌಲ್ಯದ ಅಡಿಕೆ, 12 ಚಕ್ರದ ಲಾರಿ ಹಾಗೂ ₹2.30 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಬಂಧಿತರು ಹಮ್ಜ, ಮೊಹಮ್ಮದ್ ಗೌಸ್ ಖಾನ್, ಮೊಹಮ್ಮದ್ ಸುಭಾನ್, ಮೊಹಮ್ಮದ್ ಫಯಾಜ್, ಮತ್ತು ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ.
ಅಡಿಕೆ ಕಳ್ಳತನ (Nut theft) ಪ್ರಕರಣದ ವಿವರ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ದುಲಾರಾಮ್ ಎಂಬುವರಿಗೆ ಸೇರಿದ 335 ಚೀಲ ಅಡಿಕೆ ಲಾರಿಯಲ್ಲಿ ಗುಜರಾತ್ ಗೆ ಸಾಗಿಸಲು ಉದ್ದೇಶಿಸಿತಾದರೂ, ಮಧ್ಯೆ ಲಾರಿ ಮತ್ತು ಚಾಲಕ ಎಸ್ಕೇಪ್ ಆಗಿದ್ದರು. ಒಟ್ಟಾರೆ 24,500 ಕೆ.ಜಿ. ಅಡಿಕೆಯನ್ನು ಕಳ್ಳರು (Nut theft) ಕಳವು ಮಾಡಿ, ಗುಜರಾತ್ ಬದಲು ಹೊಳಲ್ಕೆರೆಯಲ್ಲಿ ಇಳಿಸಿಕೊಂಡು ಪರಾರಿಯಾಗಿದ್ದರು.
ಪೊಲೀಸರ ಮಿಂಚಿನ ಕಾರ್ಯಾಚರಣೆ
ಬೀರೂರು ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಬೆಂಗಳೂರಿನಲ್ಲಿ ಲಾರಿ ಚಾಲಕ ಸೇರಿ ಐವರನ್ನು ಬಂಧಿಸಿದ್ದಾರೆ. ಕಳ್ಳರ (Nut theft) ಈ ತಂಡವು ಹಾಸನ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯನಗರ, ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದು, ಇದು ಅಂತರ್ ರಾಜ್ಯ ಮಟ್ಟದ ಕೃತ್ಯವಾಗಿತ್ತು.