ಬಾಗಲಕೋಟೆ | ಅಖಂಡ ಕರ್ನಾಟಕ ರಾಜ್ಯವಾಗಿ ವರ್ಷಗಳು ಉರುಳುತ್ತಿದೆ. ಆದರೆ ದಕ್ಷಿಣ ಕರ್ನಾಟಕ ಅಭಿವೃದ್ಧಿ ಆದಷ್ಟೂ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಯಾವಾಗಲೂ ಕೂಡ ಅಸಮಾಧಾನ ಉತ್ತರ ಕರ್ನಾಟಕ (North Karnataka) ಭಾಗದ ಜನರಲ್ಲಿ ಇದ್ದೆ ಇದೆ.
ದಕ್ಷಿಣ ಕರ್ನಾಟಕ ಭಾಗದಲ್ಲಿ ಇರುವಂತಹ ಕೈಗಾರಿಕೆಗಳಾಗಲಿ, ನೀರಾವರಿ ಯೋಜನೆಗಳಾಗಲಿ, ಮೂಲಭೂತ ಸೌಕರ್ಯಗಳಾಗಲಿ ಅಭಿವೃದ್ಧಿ ಆದಷ್ಟೂ ಉತ್ತರ ಕರ್ನಾಟಕ ಭಾಗದಲ್ಲಿ ಆಗಿಲ್ಲ. ಹೀಗಾಗಿ ಪದೇಪದೇ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಕೇಳಿ ಬರುತ್ತದೆ. ಇದೀಗ ಮತ್ತೆ ಅಂತಹದ್ದೇ ಒಂದು ಧ್ವನಿ ಪ್ರತಿಧ್ವನಿಸಿದೆ.
ತೆರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಇದೀಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಪರಧ್ವನಿ ಎತ್ತಿದ್ದಾರೆ. ಆಲಮಟ್ಟಿ ಹಿನ್ನಿರಿನಿಂದ ಬಾದಿತರಾಗಿರುವ ಸಂತ್ರತ್ತರಿಗೆ ನ್ಯಾಯ ಕೊಡದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆಲಮಟ್ಟಿ ಜಲಾಶಯದ ಕೃಷ್ಣ ಮೇಲ್ದಂಡೆ ಸಮಸ್ಯೆಗೆ ಪರಿಹಾರ ನೀಡಿ, ಇಲ್ಲವೇ ನಮಗೆ ಪ್ರತ್ಯೇಕ ರಾಜ್ಯ ಒಡೆದು ಕೊಡಿ ಎಂದು ಸಿದ್ದು ಸವದಿ ಆಗ್ರಹ ಮಾಡಿದ್ದಾರೆ. ಇದೀಗ ಇವರ ಈ ಹೇಳಿಕೆ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪರ ವಿರೋಧ ಚರ್ಚೆಗೆ ಕೂಡ ಗ್ರಾಸವಾಗಿದೆ.
ಒಟ್ಟಾರೆಯಾಗಿ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ ತೋರಲಾಗುತ್ತದೆ. ಅಲ್ಲಿನ ಜನರ ಬಗ್ಗೆ ನಿರ್ಲಕ್ಷ ತೊರಲಾಗುತ್ತದೆ ಎಂಬ ಆರೋಪ ಇದ್ದೆ ಇದೆ. ಆದರೆ ಇದೀಗ ಸಿದ್ದು ಸವದಿ ಆಲಮಟ್ಟಿ ಜಲಾಶಯದ ಕೃಷ್ಣ ಮೇಲ್ದಂಡೆ ಸಮಸ್ಯೆಯನ್ನು ಮುಂದೆ ಇಟ್ಟುಕೊಂಡು ಪ್ರತ್ಯೇಕ ಉತ್ತರ ಕರ್ನಾಟಕದ ಬೇಡಿಕೆ ಇಟ್ಟಿದ್ದಾರೆ.