Wednesday, February 5, 2025
Homeಜಿಲ್ಲೆಬೆಂಗಳೂರು ನಗರNew Year 2025 | ಹೊಸ ವರ್ಷಕ್ಕೆ ಹೊಸ ರೂಲ್ಸ್ ; ಹೆಗಿದೆ ಸಿಲಿಕಾನ್ ಸಿಟಿಯಲ್ಲಿ...

New Year 2025 | ಹೊಸ ವರ್ಷಕ್ಕೆ ಹೊಸ ರೂಲ್ಸ್ ; ಹೆಗಿದೆ ಸಿಲಿಕಾನ್ ಸಿಟಿಯಲ್ಲಿ ಟೈಟ್ ಸೆಕ್ಯೂರಿಟಿ..?

ಬೆಂಗಳೂರು | 2025ನೇ ವರ್ಷವನ್ನು (New Year 2025) ಸ್ವಾಗತಿಸಲು ಸಿಲಿಕಾನ್‌ ಸಿಟಿ ಜನರು ತುದಿಗಾಲಲ್ಲಿ ನಿಂತಿದ್ದಾರೆ. ನೂತನ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಇದಕ್ಕಾಗಿ ರಾಜಧಾನಿಯ ಪ್ರತಿಷ್ಠಿತ ತಾಣಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್‌, ಮಾರತ್ತಹಳ್ಳಿ ರಸ್ತೆಗಳು ವಿದ್ಯುತ್ ಅಲಂಕಾರದಿಂದ ಜಗಮಗಿಸುತ್ತಿವೆ. ಹೋಟೆಲ್‌, ಪಬ್‌, ಹೋಂ ಸ್ಟೇ ಜೊತೆಗೆ ಕಾರ್ಪೊರೇಟ್‌ ಕಂಪನಿ ಪಾರ್ಟಿಗಳ ಜೊತೆಗೆ ಮನೆಗಳಲ್ಲೂ ಪಾರ್ಟಿಯನ್ನು ಆಯೋಜನೆ ಮಾಡಿಕೊಳ್ಳಲಾಗಿದೆ.

ಈಗಾಗಲೇ ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್‌ಗಳಲ್ಲಿ ಕಟ್ಟಡ, ಮರಗಳನ್ನು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕೃತಗೊಳಿಸಲಾಗಿದೆ. ಪಾರ್ಟಿಗಳಿಗೆ ಅನುಕೂಲವಾಗುವಂತ ಸೆಟ್‌ಗಳನ್ನು ಹೋಟೆಲ್‌ಗಳಲ್ಲಿ ಅಳವಡಿಸಲಾಗಿದೆ. ಬೃಹತ್‌ ಸ್ಕ್ರೀನ್ ಗಳನ್ನು ಅಳವಡಿಸಿ ಪಾರ್ಟಿಯ ಮತ್ತು ಏರಿಸಲು ಬೇಕಾದಂತ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಪಬ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿ ಆಯೋಜನೆ ಬಗ್ಗೆ ವಿಚಾರಿಸುವುದು, ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳುತ್ತಿದ್ದಾರೆ.

ಪೊಲೀಸ್ ಇಲಾಖೆಯ ತಯಾರಿ

ರಾತ್ರಿ 1 ರಿಂದ 2 ಗಂಟೆಯೊಳಗೆ ನ್ಯೂ ಇಯರ್​ ಸೆಲೆಬ್ರೇಷನ್​ ಮುಗಿಸಬೇಕು. ರಾತ್ರಿ 9 ಗಂಟೆ ನಂತರ ನಗರದ ಪ್ರಮುಖ ಫ್ಲೈಓವರ್​ಗಳು​ ಬಂದ್ ಆಗಲಿವೆ. ಸಂಜೆ 7 ಗಂಟೆ ಬಳಿಕ ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್ ವಾಹನ ಸಂಚಾರ ಬಂದ್ ಆಗಲಿದ್ದು, ಲೌಡ್ ಸ್ಪೀಕರ್, ಪಟಾಕಿ ಸಿಡಿಸೋಕೆ ನಿರ್ಬಂಧ ಹೇರಲಾಗಿದೆ. ಡ್ರಿಂಕ್ ಆಂಡ್ ಡ್ರೈವ್, ವೀಲಿಂಗ್ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತವಾಗಿ ವರ್ತನೆ ಮಾಡಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಸೆಲೆಬ್ರೇಷನ್ಸ್​​ಗೆ ಬರೋ ಜನರ ಮೇಲೆ ನಿಗಾ ಇಡೋದಕ್ಕೆ ದೊಡ್ಡ ದೊಡ್ಡ ಸ್ಕ್ರೀನ್​ಗಳ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಹಿ ಘಟನೆ ನಡೆಯದಂತೆ ಖಾಕಿಪಡೆ ಕಣ್ಣಿಡೋಕೆ ಸಜ್ಜಾಗಿದೆ. ಅದರಂತೆ ನಿನ್ನೆ ಖುದ್ದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್​ ಅವರು ಭದ್ರತಾ ಪರಿಶೀಲನೆ ನಡೆಸಿದ್ದಾರೆ.

ಇತ್ತ ಪ್ರತಿವರ್ಷದಂತೆ ಈ ಬಾರೀ ಹೊಸ ವರ್ಷಕ್ಕೆ ಪಾಲಿಕೆ ಕೂಡ ಪೊಲೀಸರೊಂದಿಗೆ ಕೈ ಜೋಡಿಸಿದೆ. ಕಸದ ನಿರ್ವಹಣೆ, ಸಿಸಿಟಿವಿ ಕ್ಯಾಮರಾ ನಿರ್ವಹಣೆ ಸೇರಿ ಇನ್ನಿತರ ಕೆಲಸಗಳಲ್ಲಿ ಪೊಲೀಸ್ ಇಲಾಖೆ ಜೊತೆ ಕೈಜೋಡಿಸೋಕೆ ಸಜ್ಜಾಗಿದೆ. ಅಲ್ಲದೇ ಹೆಚ್ಚು ಜನ ಸೇರುವ ಕಡೆ ಪ್ರಾಥಮಿಕ ಚಿಕಿತ್ಸೆಗೆ ಪಾಲಿಕೆ ವೈದ್ಯರನ್ನ ನೇಮಿಸಿ ಮೇಲ್ವಿಚಾರಣೆ ನಡೆಸುವುದು ಪಾಲಿಕೆ ರೆಡಿಯಾಗಿದೆ.

ಮೆಟ್ರೋ/ಸಾರಿಗೆ ವ್ಯವಸ್ಥೆ

ಬಿಎಂಟಿಸಿಯು ಡಿಸೆಂಬರ್ 31ರಂದು ಎಂಜಿ ರಸ್ತೆಯಿಂದ ನಗರದ ನಾನಾ ಪ್ರದೇಶಗಳಿಗೆ ರಾತ್ರಿ 11 ರಿಂದ ತಡರಾತ್ರಿ 2 ಗಂಟೆಯವರೆಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ನಮ್ಮ ಮೆಟ್ರೋ ಡಿಸೆಂಬರ್ 31 ರ ತಡರಾತ್ರಿ ತನ್ನ ಸೇವಾ ಅವಧಿ ವಿಸ್ತರಿಸಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜನವರಿ 1 ರಂದು 2 ಗಂಟೆಗೆ ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಎಲ್ಲಾ ನಾಲ್ಕು ದಿಕ್ಕುಗಳಿಗೆ ಬೆಳಗಿನ ಜಾವ 2.40ಕ್ಕೆ ಹೊರಡಲಿದೆ. ರಾತ್ರಿ 11 ಗಂಟೆಯಿಂದ 2.40 ವರೆಗೂ ಪ್ರತಿ 10 ನಿಮಿಷಕ್ಕೊಂದು ರೈಲು ಲಭ್ಯವಿರಲಿವೆ. ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್‌ ಹಿನ್ನೆಲೆ ಪ್ರಯಾಣಿಕರು ಟ್ರಿನಿಟಿ, ಕಬ್ಬನ್‌ ಪಾರ್ಕ್‌ ಮೂಲಕ ಸಂಚಾರ ನಡೆಸಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments