ವಿಶೇಷ ಮಾಹಿತಿ | ನವರಾತ್ರಿಯಲ್ಲಿ ಪೂಜೆಯಷ್ಟೆ ವಿಶೇಷವಾಗಿರುವುದು ಬಣ್ಣಗಳು. ಪ್ರತಿವರ್ಷ ನವರಾತ್ರಿಯಲ್ಲಿ ಪ್ರತಿದಿನ ಒಂದೊಂದು ಬಣ್ಣವಿದೆ, ಆದರೆ ಈ ಬಣ್ಣ ಎಲ್ಲಾ ವರ್ಷ ಒಂದೇ ರೀತಿ ಇರುವುದಿಲ್ಲ, ಪ್ರತಿ ವರ್ಷ ಈ ಬಣ್ಣ ಬದಲಾಗುತ್ತಲೇ ಇರುತ್ತದೆ. ನವರಾತ್ರಿ ವಾರದಲ್ಲಿ ಯಾವ ದಿನ ಪ್ರಾರಂಭವಾಗುವುದೋ ಅದರಂತೆ ಬಣ್ಣ ನಿರ್ಧರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 15ಕ್ಕೆ ನವರಾತ್ರಿ ಶುರುವಾಗಿದ್ದು. ನವರಾತ್ರಿ ಭಾನುವಾರದಂದು ಆರಂಭವಾಗಿದೆ.
ಈ ವರ್ಷ ಯಾವ ದಿನ ಯಾವ ಬಣ್ಣ..?
ಅಕ್ಟೋಬರ್ 15ಕ್ಕೆ ಆರೇಂಜ್, ಅಕ್ಟೋಬರ್ 16ಕ್ಕೆ ಬಿಳಿ, ಅಕ್ಟೋಬರ್ 17ಕ್ಕೆ ಕೆಂಪು, ಅಕ್ಟೋಬರ್ 18ಕ್ಕೆ ನೀಲಿ, ಅಕ್ಟೋಬರ್ 19ಕ್ಕೆ ಹಳದಿ, ಅಕ್ಟೋಬರ್ 20ಕ್ಕೆ ಹಸಿರು, ಅಕ್ಟೋಬರ್ 21ಕ್ಕೆ ಬೂದು, ಅಕ್ಟೋಬರ್ 22ಕ್ಕೆ ನೇರಳೆ ಅಕ್ಟೋಬರ್ 23ಕ್ಕೆ ಹಸಿರು ಬಣ್ಣವಿದೆ. ಹಾಗೆ ದಸರಾ ದಿನ ಕಪ್ಪು ಬಣ್ಣ ಬಿಟ್ಟು ಯಾವುದೇ ಬಣ್ಣದ ಬಟ್ಟೆಗಳನ್ನು ಧರಿಸಬಹುದು.
ನವರಾತ್ರಿಯಲ್ಲಿ ಬಣ್ಣಕ್ಕೆ ಏಕಿಷ್ಟು ಮಹತ್ವ..?
ನವರಾತ್ರಿಯಲ್ಲಿ ದೇವಿಯನ್ನು ಖುಷಿ ಪಡಿಸಲು ಬೇರೆ-ಬೇರೆ ಬಣ್ಣದ ವಸ್ತ್ರವನ್ನು ಧರಿಸಿ ದೇವಿಯನ್ನು ಆರಾಧಿಸಲಾಗುತ್ತದೆ. ನವದುರ್ಗೆಯರನ್ನು ನವಬಣ್ಣದ ಉಡುಪುಗಳನ್ನು ಧರಿಸಿ ಪೂಜಿಸಲಾಗುತ್ತದೆ.
ಈ ಬಣ್ಣಗಳು ಏನನ್ನು ಸೂಚಿಸುತ್ತದೆ..?
ಪಿಂಕ್ ಅಥವಾ ಆರೇಂಜ್ ಬಣ್ಣ: ದೇವಿ ತನ್ನ ಭಕ್ತರಿಗೆ ಆಹಾರಕ್ಕೆ ಯಾವುದನ್ನೂ ಕೊರತೆ ಮಾಡುವುದಿಲ್ಲ , ಯಾವಾಗ ಅಗತ್ಯ ಬೀಳುವುದೋ ಆವಾಗ ದೇವಿಯ ಸಹಾಯದಿಂದ ಆಹಾರ ಸಿಕ್ಕೇ ಸಿಗುವುದು ಎಂಬರ್ಥವಾಗಿದೆ.
ಬಿಳಿ ಬಣ್ಣ: ಅವಳ ಭಕ್ತರು ಅವಳನ್ನು ಯಾವುದೇ ಸಮಯದಲ್ಲಿ ಭಕ್ತಿಯಿಂದ ಕರೆದರೂ ದೇವಿ ಅವರ ಕಷ್ಟಗಳನ್ನು ನೀಗಿಸಲು ಸಹಾಯ ಮಾಡುತ್ತಾಳೆ ಎಂಬುವುದರ ಸೂಚನೆಯಾಗಿದೆ
ಕೆಂಪು ಬಣ್ಣ: ಕೆಂಪು ಬಣ್ಣ ಶಕ್ತಿಯನ್ನು ಸೂಚಿಸುತ್ತದೆ, ದೇವಿ ಶಕ್ತಿ ಸದಾ ನಮ್ಮನ್ನು ರಕ್ಷಣೆ ಮಾಡುತ್ತಾಳೆ ಎಂಬುದನ್ನು ಸೂಚಿಸುತ್ತದೆ.
ನೀಲಿ ಬಣ್ಣ: ನೀಲಿ ಬಣ್ಣ ದೇವಿ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತಾಳೆ ಎಂಬುವುದರ ಸೂಚನೆ
ಹಳದಿ ಬಣ್ಣ: ಹಳದಿ ಬಣ್ಣ ದೇವಿ ನಿಮ್ಮ ಸಮೃದ್ಧಿಯನ್ನು ಸೂಚಿಸುತ್ತದೆ
ಮೆರೂನ್ ಬಣ್ಣ: ದೇವಿ ಧೈರ್ಯವನ್ನು ನೀಡುತ್ತಾಳೆ ಎಂಬುವುದರ ಸಂಕೇತ
ಹಸಿರು ಬಣ್ಣ: ದೇವಿ ನಿಮ್ಮ ಕ್ರಿಯಾಶೀಲತೆ ಹೆಚ್ಚಿಸುತ್ತಾಳೆ
ಬೂದು ಬಣ್ಣ: ದೇವಿ ನಮ್ಮನ್ನು ಎಲ್ಲಾ ಕಷ್ಟಗಳಿಂದ ಪಾರು ಮಾಡುತ್ತದೆ ಎಂಬುವುದನ್ನು ಸೂಚಿಸುತ್ತದೆ
ನೇರಳೆ ಬಣ್ಣ: ದೇವಿ ನಿಮಗೆ ಸಂತೋಷವನ್ನು ನೀಡುತ್ತಾಳೆ ಎಂಬುವುದರ ಸಂಕೇತ ಯಾವ ದಿನ ನವರಾತ್ರಿ ಬರುತ್ತದೆಯೋ ಅದರ ಮೇಲೆ ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ ಎಂದು ಕೂಡ ಹೇಳಲಾಗುವುದು ಈ ವರ್ಷ ನವರಾತ್ರಿ ಭಾನುವಾರ ಬಂದಿರುವುದರಿಂದ ದುರ್ಗೆ ಆನೇಯ ಮೇಲೆ ಬರುತ್ತಿದ್ದಾಳೆ, ದೇವಿ ಆನೆಯ ಮೇಲೆ ಬರುವುದರಿಂದ ಸಮೃದ್ಧಿ ಹೊತ್ತು ತರುತ್ತಾಳೆ ಎಂದು ಹೇಳಲಾಗುವುದು. ಈ ವರ್ಷ ದುರ್ಗೆ ಆನೇಯ ಮೇಲೇರಿ ಬಂದು ಆನೆಯ ಮೇಲೆಯೇ ಮರಳುತ್ತಾಳೆ. ಇದರಿಂದ ಈ ವರ್ಷ ದೇವಿ ಕೃಪೆಯಿಂದ ನಾಡು ಸಮೃದ್ಧಿಯಿಂದ ಕೂಡಿರುತ್ತದೆ.