ಬೆಂಗಳೂರು | ವಿವಾದಗಳ ಮೂಲಕ ಸದ್ದಾಗಿರುವ ಮಾಜಿ ಸಚಿವ ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ (Muniratna) ಇದೀಗ ತಮ್ಮ ತಲೆಯ ಮೇಲೆ ಮೊಟ್ಟೆ ಹೊಡೆಸಿಕೊಂಡು ಸುದ್ದಿಯಲ್ಲಿದ್ದಾರೆ.
ಹೌದು,,, ವಾಜಪೇಯಿ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದ ಮುನಿರತ್ನ ಕಾರಿನ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದಾರೆ. ನಂತರ ಕಾರಿಂದ ಕೆಳಗೆ ಇಳಿದ ಮೇಲೆ ಮುನಿರತ್ನ ಅವರ ತಲೆಯ ಮೇಲೂ ಮೊಟ್ಟೆ ಹೊಡೆದಿದ್ದಾರೆ. ಇದು ಮುನಿರತ್ನ ಬೆಂಬಲಿಗರನ್ನು ಕೆರಳಿಸಿದ್ದು ಎರಡು ಗುಂಪಿನ ನಡುವೆ ಮಾರಾಮಾರಿಯಾಗಿದೆ.
ಬೆಳಗಾವಿಯಲ್ಲಿ ಸಿ ಟಿ ರವಿ ಕೊಲೆ ಮಾಡೋಕೆ ಪ್ರಯತ್ನ ಮಾಡಿದ್ದು ಆಯ್ತು, ಈಗ ನನ್ನ ಕೊಲೆ ಮಾಡೋಕೆ ಗುಂಪೊಂದು ಪ್ರಯತ್ನ ಮಾಡಿದೆ. 5-10 ಜನ ಪೊಲೀಸರು ಇದ್ದಿದ್ದರೆ ನನ್ನ ಕೊಲೆ ಆಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿರುವ ಮುನಿರತ್ನ, ಗೃಹ ಮಂತ್ರಿಗಳು ಇದಕ್ಕೆ ಉತ್ತರ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಕುಸುಮಾ ಮೇಲೆ ಮುನಿರತ್ನ ಗಂಭೀರ ಆರೋಪ
ಡಿವೈಎಸ್ ಪಿ ಧರ್ಮೆಂದ್ರ ಅವರು ನನ್ನ ಮೇಲೆ ಫೋಕ್ಸೋ ಕೇಸ್ ಹಾಕಲು ತಯಾರಿ ನಡೆಸಿದ್ದಾರೆ. ನಾನು ರಾಜೀನಾಮೆ ಕೊಡಬೇಕು ಕುಸುಮಾ ಮಿನಿಸ್ಟರ್ ಆಗಬೇಕು ಎಂದು ನನಗೆ ಹೆದರಿಸಿದ್ದಾರೆ. ನಾನು ಹೆಣ್ಣಿಂದ ಕೊಲೆ ಆಗುತ್ತೇನೆ. ಅದು ಕುಸುಮಾ ಅವರಿಂದ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುನಿರತ್ನ ಮೇಲೆ ಮೊಟ್ಟೆ ಹೊಡೆದವ ಅರೆಸ್ಟ್
ಮುನಿರತ್ನ ಮೇಲೆ ಮೊಟ್ಟೆ ಎಸೆದು ಹಲ್ಲೆ ಮಾಡಿದ ಆರೋಪದಲ್ಲಿ ವಿಶ್ವಮೂರ್ತಿ ಎಂಬ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೆ ವೇಳೆ ವಿಶ್ವಮೂರ್ತಿ ಮುನಿರತ್ನ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿರುವ ಆರೋಪ ಕೂಡ ಮಾಡಿದ್ದಾರೆ.