ಮನರಂಜನೆ | ಮಲಯಾಳಂ (Malayalam) ಸೂಪರ್ ಸ್ಟಾರ್ ಮೋಹನ್ ಲಾಲ್ (Mohanlal) ಕನ್ನಡದ ವರನಟ ಡಾ. ರಾಜ್ ಕುಮಾರ್ (Dr. Raj Kumar) ಅವರ ಹಳೆಯ ಹಾಡೊಂದನ್ನು ನೋಡುತ್ತಾ ತಾನೂ ಹಾಡುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗಿದೆ.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕನ್ನಡದಲ್ಲೂ ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದಿತ್ಯ ನಾಯಕರಾಗಿದ್ದ ಲವ್, ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದ ಮೈತ್ರಿ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಹೀಗಾಗಿ ಅವರಿಗೂ ಕನ್ನಡ ನಂಟಿದೆ.
ಕೇವಲ ನಟನಾಗಿ ಮಾತ್ರವಲ್ಲ, ಮೋಹನ್ ಲಾಲ್ ಮಲಯಾಳಂನಲ್ಲಿ ಗಾಯಕರಾಗಿಯೂ ಚಿಪರಿಚಿತರಾಗಿದ್ದಾರೆ. ಇದೀಗ ಮೋಹನ್ ಲಾಲ್ ಬಿಡುವಿನ ವೇಳೆಯಲ್ಲಿ ತಮ್ಮ ಐಪ್ಯಾಡ್ ನಲ್ಲಿ ಅಣ್ಣಾವ್ರ ಹಾಡನ್ನು ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕೇವಲ ವಿಡಿಯೋ ವೀಕ್ಷಣೆ ಮಾತ್ರವಲ್ಲ, ಆಕ್ಷನ್ ಸಮೇತ ಹಾಡಿಗೆ ತಾವೂ ಧ್ವನಿಗೂಡಿಸುತ್ತಾರೆ.
ಅಣ್ಣಾವ್ರ ಸೂಪರ್ ಹಿಟ್ ಹಾಡು ‘ಎಂದೆಂದೂ ನಿನ್ನನು ಮರೆತು’ ಹಾಡನ್ನು ಮೋಹನ್ ಲಾಲ್ ವೀಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಾಡಿನ ಜೊತೆಗೆ ಅಣ್ಣಾವ್ರಂತೆ ಅಭಿನಯಿಸುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದು ಕನ್ನಡಿಗರ ಮನ ಸೆಳೆದಿದೆ. ಸರಿಯಾಗಿ ಕನ್ನಡ ಪದಗಳನ್ನು ಹೇಳಲು ಬಾರದೇ ಇದ್ದರೂ ಹಾಡಿನ ದಾಟಿಯನ್ನು ಗುನುಗಿದ್ದಾರೆ. ಅವರ ಈ ವಿಡಿಯೋಗೆ ಸಾವಿರಾರು ಲೈಕ್ಸ್ ಬಂದಿವೆ.