Thursday, December 12, 2024
HomeಕೃಷಿModern Sheep/Goat Farming | ಕುರಿ, ಮೇಕೆ ಸಾಕಾಣಿಕೆ ಮೂಲಕ ಆದಾಯ ಗಳಿಸಬೇಕು ಅನ್ನೋ ರೈತರಿಗೆ...

Modern Sheep/Goat Farming | ಕುರಿ, ಮೇಕೆ ಸಾಕಾಣಿಕೆ ಮೂಲಕ ಆದಾಯ ಗಳಿಸಬೇಕು ಅನ್ನೋ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್

ಕೃಷಿ ಮಾಹಿತಿ | ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ (Animal husbandry and veterinary training) ಕೇಂದ್ರದ ವತಿಯಿಂದ ರೈತರಿಗೆ ಆಧುನಿಕ ಕುರಿ/ಮೇಕೆ ಸಾಕಾಣಿಕೆ (Modern Sheep/Goat Farming) ಕುರಿತು ಉಚಿತ ತರಬೇತಿ ನೀಡಲಾಗುವುದು ಎಂದು ಮುಖ್ಯ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ. 

Sprinkler Irrigation Unit | ತುಂತುರು ನೀರಾವರಿ ಘಟಕಗಳಿಗಾಗಿ ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನ – karnataka360.in

ತರಬೇತಿಯು ಆಸಕ್ತ 25 ಮಂದಿ ರೈತರಿಗೆ ಮಾತ್ರ ನೀಡಲಾಗುವುದು. ಆಧುನಿಕ ಕುರಿ/ಮೇಕೆ ಸಾಕಾಣಿಕೆ ತರಬೇತಿಯನ್ನು ನವೆಂಬರ್ 22 ಮತ್ತು 23 ರಂದು ಹಮ್ಮಿಕೊಳ್ಳಲಾಗಿದೆ. ನಿಗಧಿಪಡಿಸಿದ ದಿನಾಂಕದಂದು ಬೆಳಿಗ್ಗೆ 10 ಗಂಟೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಕಾಲ್‌ಟೆಕ್ಸ್ ಸರ್ಕಲ್, ಕುಣಿಗಲ್ ರಸ್ತೆ, ತುಮಕೂರು ಇಲ್ಲಿ ತರಬೇತಿಗೆ ಹಾಜರಾಗಬಹುದಾಗಿದೆ.

ತರಬೇತಿಗೆ ಹಾಜರಾಗಲು ಇಚ್ಛಿಸುವವರು 2 ಪಾಸ್‌ಪೋರ್ಟ್ ಅಳತೆ ಭಾವಚಿತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ)ವನ್ನು ಕಡ್ಡಾಯವಾಗಿ ತರಬೇಕು.    

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆ/ದೂರವಾಣಿ ಸಂಖ್ಯೆ 0816-2251214ನ್ನು ಸಂಪರ್ಕಿಸಬಹುದು  ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments