Thursday, December 12, 2024
Homeಜಿಲ್ಲೆಕೋಲಾರಕೆ ಎಸ್ ಆರ್ ಟಿ ಸಿ ಬಸ್ ಹತ್ತಿ ಮಹಿಳೆಯರಿಗೆ ಸಿಹಿ ಕೊಟ್ಟ ಶಾಸಕ..!

ಕೆ ಎಸ್ ಆರ್ ಟಿ ಸಿ ಬಸ್ ಹತ್ತಿ ಮಹಿಳೆಯರಿಗೆ ಸಿಹಿ ಕೊಟ್ಟ ಶಾಸಕ..!

ಕೋಲಾರ | ಚುನಾವಣೆಯಲ್ಲಿ ನೀಡಿದ ಐದು  ಗ್ಯಾರಂಟಿ ಭರವಸೆಗಳನ್ನು  ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಕೋಲಾರ ನಗರದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ನುಡಿದಂತೆ ನಡೆದುಕೊಂಡಿರುವ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿದ್ದ ಐದು ಭರವಸೆಗಳನ್ನು ಶುಕ್ರವಾರ ಜಾರಿ ಮಾಡಿದೆ. ಇನ್ನೂ ಪಂಚ ಯೋಜನೆಗಳನ್ನು ಜಾರಿಗೊಳಿಸಿದ ಹಿನ್ನೆಲೆ  ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಶಾಸಕ ಕೆ. ವೈ ನಂಜೇಗೌಡ ನೇತೃತ್ವದಲ್ಲಿ ಮಾಲೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಅಧಿದೇವತೆ   ಮಾರಿಕಾಂಬಾ ದೇವಾಲಯದಲ್ಲಿ ಪೂಜೆ ಸಲ್ಲಿಸಲ್ಲಾಯಿತು. ಇನ್ನೂ ಶಾಸಕ ನಂಜೇಗೌಡ  ಕೆ ಎಸ್ ಆರ್ ಟಿ ಸಿ ನಿಲ್ದಾಣದಲ್ಲಿ ಬಸ್ ಏರಿ ಮಹಿಳೆಯರಿಗೆ ಸಿಹಿ ಹಂಚಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆ ಯಜಮಾನಿಗೆ ಎರಡು ಸಾವಿರ ಗ್ಯಾರಂಟಿ ಯೋಜನೆ ಜಾರಿ ಮಾಡಿರುವ  ಕುರಿತು ಮಹಿಳೆಯರಿಗೆ ಮಾಹಿತಿ ನೀಡಿದರು.

ಇನ್ನೂ ಕಾಂಗ್ರೆಸ್ ಕಾರ್ಯಕರ್ತರು  ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದಿದೆ, ಕೊಟ್ಟ ಮಾತಿನಂತೆ ಐದು ಭರವಸೆಗಳನ್ನು ಈಡೇರಿಸುತ್ತಿದೆ ಎಂಬ  ಭಿತ್ತಿ ಚಿತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments