ತುಮಕೂರು | ಕೊರಟಗೆರೆ ತಾಲೂಕಿನ ಅಕ್ಕಿ ರಾಂಪುರ ಗ್ರಾಮ ಪಂಚಾಯತಿಯಲ್ಲಿ ಎಸ್ಸಿ ಎಸ್ಟಿ ಹಿತ ದೃಷ್ಟಿಯಿಂದ ಮೀಸಲಿರುವ 25% ಅನುದಾನದಲ್ಲಿ ತರಿಸಲಾದ 50ಕ್ಕೂ ಹೆಚ್ಚು ಚೆಕ್ ಗಳು ಬ್ಯಾಂಕ್ ನಿಂದ ಹಿಂತಿರುಗಿಸಲಾಗಿದ್ದು ಮೂರು ತಿಂಗಳು 90 ದಿನಗಳು ಕಾದ ಸಾರ್ವಜನಿಕರಿಗೆ ತುಂಬಾ ಬೇಸರವಾಗಿದೆ ಹಾಗೂ ಅನಾನುಕೂಲವಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರೇ ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯರ ಸಂಬಂಧಿಕರ ಅಂತ್ಯಕ್ರಿಯೆಗೆಂದು ಎಸ್ ಸಿ ಎಸ್ ಟಿ ನೀಡಲಾದ 25% ಅನುದಾನದಲ್ಲಿ ಕೊಟ್ಟ ಚೆಕ್ ನಿಂದ ಮೂರು ತಿಂಗಳು ಕಾದ ನಂತರ ವಾಪಸ್ ಬಂದಿದ್ದು, ಗ್ರಾಮ ಪಂಚಾಯತಿ ಸದಸ್ಯರ ಬಾಳೆ ಹೀಗಾದರೆ ಸಾರ್ವಜನಿಕರ ಗತಿ ಏನು ಎಂದು ಎಸ್‌ಸಿ-ಎಸ್‌ಟಿ ಸದಸ್ಯರೇ ಗ್ರಾಮ ಪಂಚಾಯತಿ ವಿರುದ್ಧ ಆರೋಪಗಳ ಸುರಿಮಳೆಗೆರೆದರು.
ನಮ್ಮದುವೇ ಅಂತ್ಯಕ್ರಿಯೆ ಗೆಂದು ನೀಡಲಾದ ಚೆಕ್ ಗಳು ಎರಡು ಬೋನ್ಸ್ ಆಗಿ ವಾಪಸ್ ಆಗಿದ್ದು, ಹಲವು ಬಾರಿ ಕೇಳಿಕೊಂಡರು ಪ್ರಯೋಜನವಾಗಿಲ್ಲ, ಎಸ್ಸಿ ಎಸ್ಟಿ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಬೆಲೆಯೇ ಇಲ್ಲ ,,,,ನಮ್ಮ ಮಾತುಗಳನ್ನು ಕೇಳುವುದೇ ಇಲ್ಲ,,, ಗ್ರಾಮ ಪಂಚಾಯತಿ ಮೀಟಿಂಗ್ಗಳಲ್ಲೂ ನಮ್ಮ ಮಾತುಗಳನ್ನ ಪರಿಗಣನೆಗೆ ತೆಗೆದುಕೊಳ್ಳೋದಿಲ್ಲ ನಾವು ಗೆದ್ದು ವೇಸ್ಟ್ ಆಗಿದ್ದೇವೆ..
ಚೆಕ್ ಬೌನ್ಸ್ ಆಗಿರೋದ್ರ ಬಗ್ಗೆ ನಮಗೆ ಮಾಹಿತಿ ಇಲ್ಲ ಆದರೆ ಕೆಲವೊಂದು ಕಾರಣಗಳಿಂದ ಚೆಕ್ ಬೌನ್ಸ್ ಆಗಿದೆ ನಾವೇ ನಮ್ಮ ಕೈಯಿಂದ ದುಡ್ಡು ಕೊಟ್ಟಿದ್ದೇವೆ ಮುಂದಿನ ದಿನಗಳಲ್ಲಿ ಹಾಗೆ ಆಗುವುದಿಲ್ಲ ಎಂದು ಸಬೂಬು ಹೇಳಲಾಗುತ್ತಿದ್ದಾರೆ ಅಕೌಂಟೆನ್ಸ್ ಮತ್ತು ಕಾರ್ಯದರ್ಶಿ ತೇಜಸ್ವಿನಿ.