Tuesday, January 7, 2025
Homeಜಿಲ್ಲೆಬೆಳಗಾವಿMinister Lakshmi Hebbalkar | ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಸ್ವೀಕರಿಸುತ್ತಾರ ಸಿ ಟಿ ರವಿ..?

Minister Lakshmi Hebbalkar | ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಸ್ವೀಕರಿಸುತ್ತಾರ ಸಿ ಟಿ ರವಿ..?

ಬೆಳಗಾವಿ |  ಬಿಜೆಪಿ ನಾಯಕ ಸಿ.ಟಿ ರವಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ನೇರ ಸವಾಲು ಹಾಕಿದ್ದಾರೆ. ಆಕ್ಷೇಪಾರ್ಹ ಪದ ಬಳಸಿಲ್ಲ ಅಂದ್ರೆ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಾನಕ್ಕೆ ಬನ್ನಿ. ನಾನು ಕುಟುಂಬ ಸಮೇತ ಬರುವೆ, ನೀವೂ ಬನ್ನಿ ಆಣೆ ಪ್ರಮಾಣ ಮಾಡೋಣ ಎಂದು ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ನಾನೂ ದೇವರ ಮೇಲೆ ಭಕ್ತಿ ಇಟ್ಟುಕೊಂಡವಳು, ನಾನು ದೇಶದ ಎಲ್ಲಾ ದೇವಾನುದೇವತೆ ನಂಬಿದಂತವಳು. ನಾನು ಆ ಪದ ಅಂದಿಲ್ಲ ಅಂದಿಲ್ಲ ಅಂತಾ ಹೇಳುತ್ತಿದ್ದಾರಲ್ಲ ಇದು ಸವಾಲು ಅಲ್ಲ ನಾನು ಅವರಿಂದ ಜವಾಬೂ ಬಯಸಲ್ಲ. ದುರ್ಬುದ್ಧಿ ಇದ್ದಂತ ಮನುಷ್ಯನಿಂದ ನಾನು ಜವಾಬು ಬಯಸಲ್ಲ. ಆದ್ರೆ ಜನರ ಕಣ್ಣಿಗೆ ಮಣ್ಣೇರಚಿ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಅವರ ಕಾರ್ಯಕರ್ತರಿಗೆ ನಾಯಕರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದರು.

ನೀವು ದೇವರನ್ನು ಬಹಳಷ್ಟು ನಂಬಿದೀರಾ ಧರ್ಮಸ್ಥಳ ನಿಮ್ಮ ಊರಿಗೆ ಸಾಕಷ್ಟು ಹತ್ತಿರ ಇದೆ. ಇಡೀ ದೇಶದ ಜನ ಧರ್ಮಕ್ಕೆ ಇನ್ನೊಂದು ಹೆಸರು ಧರ್ಮಸ್ಥಳ ಅಂತಾರೆ. ಮಂಜುನಾಥ ದೇವರ ಮೇಲೆ ನೀವು ಪ್ರಮಾಣ ಮಾಡಿ. ನಿಮಗೆ ನೈತಿಕತೆ ಇದ್ರೆ ನೀವು ಬನ್ನಿ ಅಂತಾ ಕರೆ ಕೊಡ್ತೀನಿ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments