ಬೆಂಗಳೂರು | 2023 ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ನಟ ಸುದೀಪ್ ಅವರ ನಡೆಯನ್ನು ಖಂಡಿಸಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ ಇದೀಗ ಅನುಭವ ಕಡಿಮೆ ಎಂದು ಸುದೀಪ್ ಅವರಿಗೆ ಟಾಂಗ್ ನೀಡಿದ್ದಾರೆ.
ಹೌದು,, ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ನಟ ಕಿಚ್ಚ ಸುದೀಪ್ ನಮ್ಮ ವಿರುದ್ಧವೇ ಭಾಷಣ ಮಾಡಿದ್ದಾರೆ, ನಮ್ಮವರ ವಿರೋಧವಾಗಿ ಚುನಾವಣಾ ಪ್ರಚಾರವನ್ನು ಮಾಡಿದ್ದಾರೆ ಎಂದು ಸಚಿವ ಕೆ.ಎನ್.ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮವರು ಎರಡು ಕಡೆ ಸ್ಪರ್ಧಿಸಿದಾಗ ಒಬ್ಬರ ಪರವಾಗಿ, ಇನ್ನೊಬ್ಬರ ವಿರುದ್ಧವಾಗಿ ಪ್ರಚಾರ ಮಾಡಿದರು. ಒಂದೇ ಸಮುದಾಯದವರ ಸ್ಪರ್ಧೆ ನಡುವೆ ಒಬ್ಬರ ಪರವಾಗಿ ಪ್ರಚಾರ ಮಾಡುವುದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತದೆ. ಆತನಿಗೆ ಅನುಭವ ಕಡಿಮೆ ಇದೆ. ಅರಿತುಕೊಂಡು ಮುಂದುವರೆಯಲಿ ಎಂದು ನೇರವಾಗಿಯೇ ಟಾಂಗ್ ನೀಡಿದ್ದಾರೆ.