Tuesday, February 4, 2025
HomeಕೃಷಿMillet Purchasing Center | ತುಮಕೂರು ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

Millet Purchasing Center | ತುಮಕೂರು ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಕೃಷಿ ಮಾಹಿತಿ | ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಂಗಳವಾರ ನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ (Millet Purchasing Center) ಭೇಟಿ ನೀಡಿ ಪರಿಶೀಲಿಸಿದರು.

ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ

ನಂತರ ರೈತರೊಂದಿಗೆ ಮಾತನಾಡಿದ ಅವರು, ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು (Millet Purchasing Center) ಈಗಾಗಲೇ ಜಿಲ್ಲೆಯಲ್ಲಿ ತೆರೆದಿರುವ 10 ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ರೈತರು ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ನಿಯೋಜಿತ ಅಧಿಕಾರಿಗಳನ್ನೇ ಸಂಪರ್ಕಿಸಬೇಕೆಂದು ಮನವಿ ಮಾಡಿದರು.

ನೋಂದಣಿಗೆ ಮಾರ್ಚ್ ಅಂತ್ಯದವರೆಗೂ ಅವಕಾಶ

ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿಗಾಗಿ (Millet Purchasing Center) ಮಾರ್ಚ್ 31 ರವರೆಗೆ ಮಾತ್ರ ಅವಕಾಶವಿದ್ದು, ರೈತರು ತಡ ಮಾಡದೇ ಅಗತ್ಯ ದಾಖಲೆಗಳೊಂದಿಗೆ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆಯಬೇಕೆಂದರು.

ಇದನ್ನು ಓದಿ : Dr. G. Parameshwar | ವಿಕಲಚೇತನ ವ್ಯಕ್ತಿಗೆ ತಕ್ಷಣವೇ ನಿವೇಶನ ಭಾಗ್ಯ : ಪರಮೇಶ್ವರ ಕಾರ್ಯಕ್ಕೆ ಶ್ಲಾಘನೆ

ರಾಗಿ ಮಾರಾಟಕ್ಕೆ (Millet Purchasing Center) ಫ್ರೂಟ್ಸ್ ಐಡಿ ಕಡ್ಡಾಯ

ಖರೀದಿ ಕೇಂದ್ರದಲ್ಲಿ ರೈತರು ರಾಗಿ (Millet Purchasing Center) ಮಾರಾಟ ಮಾಡಲು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು.   ಫ್ರೂಟ್ಸ್ ಐಡಿಗೆ ಸೇರ್ಪಡೆಗೊಂಡಿರುವ ಸರ್ವೆ ನಂಬರ್‌ಗಳಲ್ಲಿ ಬೆಳೆದ ರಾಗಿಯನ್ನು   ಮಾತ್ರ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವುದು.  ಸರ್ವೆ ನಂಬರ್‌ಗಳಲ್ಲಿ ರಾಗಿ   ಬೆಳೆದಿರುವ ಬಗ್ಗೆ  ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವುದು ಕಡ್ಡಾಯವೆಂದು ತಿಳಿಸಿದರು.    

ಸರ್ವೆ ನಂಬರ್‌ಗಳನ್ನು ಫ್ರೂಟ್ಸ್ ಐಡಿಗೆ ಸೇರ್ಪಡೆ ಮಾಡಿ

ರೈತರು ತಮ್ಮ ಹೆಸರಿನಲ್ಲಿರುವ ಜಮೀನಿನ ಎಲ್ಲ ಸರ್ವೆ ನಂಬರ್‌ಗಳನ್ನು ತಮ್ಮ ವ್ಯಾಪ್ತಿಯ ಕಂದಾಯ/ಕೃಷಿ/ತೋಟಗಾರಿಕೆ/ರೇಷ್ಮೆ/ಪಶುಸಂಗೋಪನೆ ಇಲಾಖೆಯನ್ನು ಸಂಪರ್ಕಿಸಿ ಫ್ರೂಟ್ಸ್ ಐಡಿಗೆ ಸೇರ್ಪಡೆ ಮಾಡಬೇಕೆಂದು ಹೇಳಿದರು.

ತಾಂತ್ರಿಕ ಸಮಸ್ಯೆಗಳಿಗೆ ಸಹಾಯವಾಣಿ ಸಂಪರ್ಕಿಸಿ

ಜಿಲ್ಲೆಯಲ್ಲಿ ತೆರೆಯಲಾಗಿರುವ ಎಲ್ಲ 10 ಖರೀದಿ ಕೇಂದ್ರಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ನಿಯೋಜಿತ ಅಧಿಕಾರಿಗಳು ರಾಗಿಯನ್ನು ಮಧ್ಯವರ್ತಿಗಳಿಂದ ಖರೀದಿಸದೆ ರೈತರಿಂದ ಮಾತ್ರ ಖರೀದಿಸಬೇಕು. ರಾಗಿ ಖರೀದಿ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಬೇಕು. ರೈತರ ಫ್ರೂಟ್ಸ್ ಐಡಿ ಬಗ್ಗೆ ತಾಂತ್ರಿಕ ಸಮಸ್ಯೆಗಳುಂಟಾದಲ್ಲಿ   ಕೃಷಿ ಇಲಾಖೆಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆ 8884006306/ 8884006308ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

50617 ರೈತರ ನೋಂದಣಿ

ಜಿಲ್ಲೆಯಲ್ಲಿ  ಖರೀದಿ ಕೇಂದ್ರಗಳಲ್ಲಿ ಈವರೆಗೆ 749973 ಕ್ವಿಂಟಾಲ್ ರಾಗಿ ಖರೀದಿಗಾಗಿ (Millet Purchasing Center) 50617 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಶೀಘ್ರವಾಗಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ

ಖರೀದಿಸಿದ ರಾಗಿಯನ್ನು ರಾಜ್ಯ ಉಗ್ರಾಣ ನಿಗಮಗಳಿಗೆ ಸಾಗಾಣಿಕೆ ಮಾಡಲು ಗುತ್ತಿಗೆದಾರರನ್ನು ನೇಮಕ ಮಾಡಲಾಗಿದ್ದು, ಸಾಗಾಣಿಕೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕೆಂದು ಸೂಚನೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments