ತುಮಕೂರು | ಮಹಾನಗರ ಪಾಲಿಕೆ (Mahanagara Corporation) ವ್ಯಾಪ್ತಿಯಲ್ಲಿ ಡಾ: ಬಿ.ಆರ್.ಅಂಬೇಡ್ಕರ್ (Dr. BR Ambedkar) ಜಯಂತಿ, ಶ್ರೀರಾಮನವಮಿ (Sri Ram Navami), ಮಹಾವೀರ ಜಯಂತಿ ಪ್ರಯುಕ್ತ “ಮಾಂಸ ಮಾರಾಟ ನಿಷೇಧಿತ (Meat sale ban) ದಿನವೆಂದು” ಘೋಷಿಸಲಾಗಿದೆ.
ಡಾ: ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಏಪ್ರಿಲ್ 13ರ ಸಂಜೆ 5 ರಿಂದ 14ರ ಮಧ್ಯರಾತ್ರಿ 12 ಗಂಟೆಯವರೆಗೆ, ಶ್ರೀರಾಮ ನವಮಿ ಅಂಗವಾಗಿ ಏಪ್ರಿಲ್ 16ರ ಸಂಜೆ 5 ಗಂಟೆಯಿಂದ 17ರ ಮಧ್ಯರಾತ್ರಿ 12 ಗಂಟೆಯವರೆಗೆ, ಮಹಾವೀರ ಜಯಂತಿ ಪ್ರಯುಕ್ತ ಏಪ್ರಿಲ್ 20ರ ಸಂಜೆ 5 ರಿಂದ 21ರ ಮಧ್ಯರಾತ್ರಿ 12 ಗಂಟೆಯವರೆಗೆ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿಖಾನೆ ಮುಚ್ಚಲು ಆದೇಶಿಸಿಸಲಾಗಿದೆ.
ಮಾಂಸ ಮಾರಾಟ ಮಾಡುವುದಾಗಲಿ, ಸಂಗ್ರಹಣೆ ಮಾಡುವುದಾಗಲಿ ನಿಷೇಧಿಸಿದೆ. ಈ ಅವಧಿಯಲ್ಲಿ ಕಸಾಯಿ ಖಾನೆ ತೆರೆಯಕೂಡದು ಹಾಗೂ ಮಾಂಸ ಮಾರಾಟ ಮಾಡಕೂಡದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.