Thursday, December 12, 2024
Homeತಂತ್ರಜ್ಞಾನMaruti Suzuki | ಹೊಸ ವರ್ಷದ ಬೆನ್ನಲ್ಲೆ ತನ್ನ ಗ್ರಾಹಕರಿಗೆ ಶಾಕ್ ಕೊಟ್ಟ ಮಾರುತಿ ಸುಜುಕಿ..?

Maruti Suzuki | ಹೊಸ ವರ್ಷದ ಬೆನ್ನಲ್ಲೆ ತನ್ನ ಗ್ರಾಹಕರಿಗೆ ಶಾಕ್ ಕೊಟ್ಟ ಮಾರುತಿ ಸುಜುಕಿ..?

ತಂತ್ರಜ್ಞಾನ | ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ (Maruti Suzuki) ಹೊಸ ವರ್ಷದ ಆರಂಭಕ್ಕೂ ಮುನ್ನ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ವಾಹನಗಳ ಬೆಲೆಯನ್ನು ಜನವರಿ 2025 ರಿಂದ ಹೆಚ್ಚಿಸುವುದಾಗಿ ಘೋಷಿಸಿದೆ. ಮುಂದಿನ ವರ್ಷ ಜನವರಿಯಿಂದ ಕಾರುಗಳ ಬೆಲೆಯನ್ನು ಸುಮಾರು 4% ರಷ್ಟು ಹೆಚ್ಚಿಸಲಾಗುವುದು ಎಂದು ಕಂಪನಿ ಹೇತಿಳಿಸಿದೆ.

ಬೆಲೆ ಏರಿಕೆ ಏಕೆ..?

ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು, ವಿನಿಮಯ ದರಗಳು ಮತ್ತು ಹೆಚ್ಚಿದ ಲಾಜಿಸ್ಟಿಕ್ಸ್ ವೆಚ್ಚಗಳಿಂದಾಗಿ, ಕಂಪನಿಯು ಕಾರುಗಳ ಬೆಲೆಗಳನ್ನು ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ. ಈ ಹೆಚ್ಚುವರಿ ವೆಚ್ಚಗಳನ್ನು ಭರಿಸುವ ಕಂಪನಿಯ ಪ್ರಯತ್ನಗಳು ಅಸಮರ್ಪಕವೆಂದು ಸಾಬೀತಾದಾಗ ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದೆ.

ಯಾವ ಕಾರುಗಳ ಬೆಲೆ ಹೆಚ್ಚಾಗುತ್ತದೆ..?

ಜನವರಿ 1 ರಿಂದ ಎಲ್ಲಾ ಹ್ಯುಂಡೈ ಮಾದರಿಗಳ ಬೆಲೆಗಳನ್ನು ಹೆಚ್ಚಿಸಲಾಗುವುದು ಎಂದು ಕಂಪನಿಯು ತಿಳಿಸಿದೆ. ಇದು ವಿಭಿನ್ನ ಮಾದರಿಗಳನ್ನು ಅವಲಂಬಿಸಿರುತ್ತದೆ. ಆದರೆ ಈ ಹೆಚ್ಚಳವು ಕಾರುಗಳ ಎಕ್ಸ್ ಶೋ ರೂಂ ಬೆಲೆಗೆ ಅನ್ವಯವಾಗಲಿದೆ. ಆದರೆ, ಯಾವ ಕಾರುಗಳ ಮೇಲೆ ಎಷ್ಟು ಹೆಚ್ಚಳವಾಗಲಿದೆ ಎಂಬ ಮಾಹಿತಿ ಇನ್ನೂ ನೀಡಿಲ್ಲ.

ಇತ್ತೀಚೆಗೆ ಮಾರುತಿ ಸುಜುಕಿ ತನ್ನ ಪ್ರಸಿದ್ಧ ಸೆಡಾನ್ ಕಾರು ಡಿಜೈರ್‌ನ ಹೊಸ ನಾಲ್ಕನೇ ತಲೆಮಾರಿನ ಮಾದರಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇವರ ಆರಂಭಿಕ ಬೆಲೆ 6.79 ಲಕ್ಷ ರೂ. ಇದಲ್ಲದೆ, ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಪರಿಚಯಿಸಲು ತಯಾರಿ ನಡೆಸುತ್ತಿದೆ. ಜನವರಿ 17 ರಿಂದ ಪ್ರಾರಂಭವಾಗುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಇದನ್ನು ಜಗತ್ತಿಗೆ ಪ್ರಸ್ತುತಪಡಿಸಲಾಗುತ್ತದೆ.

ಹುಂಡೈ ಕಾರುಗಳು ಸಹ ದುಬಾರಿಯಾಗಲಿವೆ

ನಿನ್ನೆ, ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ವಾಹನಗಳ ಬೆಲೆಯನ್ನು ಜನವರಿ 1, 2025 ರಿಂದ ಹೆಚ್ಚಿಸುವುದಾಗಿ ಘೋಷಿಸಿತ್ತು. ಕಂಪನಿ ನೀಡಿರುವ ಮಾಹಿತಿ ಪ್ರಕಾರ ಹುಂಡೈ ಕಾರುಗಳ ಬೆಲೆ ಅಂದಾಜು 25,000 ರೂ. ಹೆಚ್ಚುತ್ತಿರುವ ಕಾರುಗಳ ಬೆಲೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತರುಣ್ ಗಾರ್ಗ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments