Thursday, December 12, 2024
Homeಜಿಲ್ಲೆಮಂಡ್ಯMandya Lok Sabha Constituency | ಮಂಡ್ಯದ ಜನರಿಗೆ ಬೇಕಿಲ್ವಾ ಸುಮಲತಾ ಅಂಬರೀಶ್ ; ಟಿಕೆಟ್...

Mandya Lok Sabha Constituency | ಮಂಡ್ಯದ ಜನರಿಗೆ ಬೇಕಿಲ್ವಾ ಸುಮಲತಾ ಅಂಬರೀಶ್ ; ಟಿಕೆಟ್ ನೀಡಿದ್ರೂ ಸೋಲ್ತಾರ ಸಂಸದೆ..?

ಮಂಡ್ಯ | ಮಂಡ್ಯ ಲೋಕಸಭಾ ಕ್ಷೇತ್ರ (Mandya Lok Sabha Constituency) ರಾಜಕೀಯ ರಣರಂಗವಾಗಿ (Political battleground) ಮಾರ್ಪಟ್ಟಿರುವುದು ಇಡೀ ರಾಜ್ಯದ ಜನರಿಗೆ ಗೊತ್ತಿರುವ ವಿಚಾರ. ಅತ್ತ ಮಾಜಿ ಸಿಎಂ ಹೆಚ್‍ ಡಿ ಕುಮಾರಸ್ವಾಮಿ (HD Kumaraswamy) ನಮಗೆ ಟಿಕೆಟ್ ಬೇಕು ಎಂದು ಇತ್ತ ಹಾಲಿ ಸಂಸದೆ ಸುಮಲತಾ ಅಂಬರೀಶ್ (Sumalta Ambarish) ನಮಗೆ ಟಿಕೆಟ್ ಬೇಕು ಎಂದು ಪಕ್ಷದ ಹೈಕಮಾಡಿಗೆ ಒತ್ತಡ ಹಾಕುತ್ತಿರುವುದು ಗೊತ್ತೇ ಇದೆ.

Undocumented money | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿ ಹಣ ವಶಕ್ಕೆ ಪಡೆದ ಪೊಲೀಸರು..! – karnataka360.in

ಕಳೆದ ಬಾರಿ ಪಕ್ಷೇತರವಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ದರು. ಅವರಿಗೆ ಪರೋಕ್ಷವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸಹಕಾರವನ್ನು ಕೂಡ ನೀಡಿದ್ದವು. ಸ್ವಾಭಿಮಾನದ ಮಾತುಗಳನ್ನಾಡಿ ಮಂಡ್ಯ ಲೋಕಸಭೆಯ ಜನರ ಮನಸ್ಸನ್ನು ಗೆದ್ದಿದ್ದರು ಸುಮಲತ ಅಂಬರೀಶ್. ಜೊತೆಗೆ ನಟ ದರ್ಶನ್ ಮತ್ತು ಯಶ್ ಜೊತೆಯಾಗಿ ನಿಂತು ಚುನಾವಣೆಯನ್ನು ಎದುರಿಸಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ದಾಖಲಿಸಿದ್ದರು.

ಕಳೆದ ಬಾರಿ ಏನೋ ಮಂಡ್ಯದ ಜನ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿದ್ದರು. ಆದರೆ ಈಗಲೂ ಕೂಡ ಅದೇ ರೀತಿಯಾದಂತಹ ಬೆಂಬಲ ಮಂಡ್ಯದ ಜನರಲ್ಲಿ ಇದೆಯೇ..? ಎಂಬ ಪ್ರಶ್ನೆಗೆ ಇಲ್ಲ ಎನ್ನುತ್ತಿದ್ದಾರೆ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು. ಅವರ ಅಭಿವೃದ್ಧಿ ಕಾರ್ಯಾಗಳು ಇರಬಹುದು, ಅವರು ಮಂಡ್ಯದ ಜನರಿಗೆ ಸ್ಪಂದಿಸುವ ರೀತಿ ಇರಬಹುದು ಎಲ್ಲಾ ರೀತಿಯಿಂದಲೂ ಸುಮಲತಾ ಅಂಬರೀಶ್ ಅವರಿಗೆ ವಿರೋಧ ವ್ಯಕ್ತವಾಗುತ್ತಿದೆ.

ಇತ್ತೀಚಿಗೆ ಹಲವಾರು ವಾಹಿನಿಗಳು, ಡಿಜಿಟಲ್ ಮಾಧ್ಯಮಗಳು, ಸೇರಿದಂತೆ ಪ್ರತಿಷ್ಠಿತ ಮಾಧ್ಯಮಗಳು ಕೂಡ ಸರ್ವೆಯನ್ನು ನಡೆಸುತ್ತಿವೆ. ಹೈಕಮಾಂಡ್ ಸುಮಲತಾ ಅವರಿಗೆ ಟಿಕೆಟ್ ನೀಡಿದರೆ ಅವರಿಗೆ ಅಲ್ಲಿನ ಜನ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದು ಲೋಕಸಭೆ ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ಭವಿಷ್ಯ ನುಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments