ಮಂಡ್ಯ | ಸಕ್ಕರೆ ನಾಡು ಅಪ್ಪಟ ಕನ್ನಡಿಗರ ಬೀಡು ಆಗಿರುವ ಮಂಡ್ಯ ಜಿಲ್ಲೆಯಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ (Mandya Kannada Sahitya Sammelana) ಅದ್ದೂರಿಯಾಗಿ ಜರುಗಿದೆ. ಈ ವೇಳೆಯಲ್ಲಿ ಬಾಡೂಟ ವಿತರಣೆ ಮಾಡಬೇಕು ಎಂದು ಅನೇಕ ಪ್ರಗತಿಪರ ಸಂಘಟನೆಗಳು ಧ್ವನಿಯೆತ್ತಿದ್ದವು ಇದು ವಿವಾದಕ್ಕೆ ಕಾರಣವಾಗಿತ್ತು.
ಹೌದು… ಬಹುತೇಕ ಎಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು ವಿಚಾರಗಳಿಗೆ ಸದ್ದು ಮಾಡಿದರೆ. ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಮಾತ್ರ ಊಟಕ್ಕೆ ಸದ್ದು ಮಾಡಿದೆ. ಅದರಲ್ಲೂ ಕೂಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟವನ್ನು ನೀಡಬೇಕು ಎಂದು ಪ್ರಗತಿಪರರು ಬೇಡಿಕೆ ಇಟ್ಟಿದ್ದು ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು.
ಸಾಮಾನ್ಯವಾಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರಿ ಊಟವನ್ನು ನೀಡಲಾಗುತ್ತದೆ ಆದರೆ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಬೇಡಿಕೆ ಇದ್ದು. ಕೊನೆಯ ದಿನವಾದ ಇಂದು ಬಾಡೂಟ ಹಂಚಿಕೆ ಮಾಡಲಾಗಿದ್ದು ಬಾರೀ ಆಕ್ರೋಶಕ್ಕೆ ಕೂಡ ಕಾರಣವಾಗಿದೆ.
ಬಾಡೂಟ ಹಂಚಿಕೆಯಲ್ಲಿ ತೀವ್ರ ಜಟಾಪಟಿ ಏರ್ಪಟ್ಟಿದ್ದು ಅನೇಕ ಪ್ರಗತಿಪರು ಒಟ್ಟಾಗಿ ಮೊಟ್ಟೆ, ಚಿಕನ್, ಕಬಾಬ್, ಕೋಳಿ ಸಾಂಬಾರ್, ರಾಗಿ ಮುದ್ದೆ ಹಂಚಿಕೆ ಮಾಡಿದ್ದಾರೆ. ಈ ವೇಳೆಯಲ್ಲಿ ಪೊಲೀಸರು ಇದನ್ನು ವಶಕ್ಕೆ ತೆಗೆದುಕೊಂಡಿದ್ದು, ಕೆಲ ಕಾಲ ಪೊಲೀಸರು ಮತ್ತು ಪ್ರಗತಿಪರರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವಾದ ವಿವಾದಗಳ ನಡುವೆಯೇ ಪ್ರಗತಿಪರರು ಕನ್ನಡ ಸಾಹಿತ್ಯ ಸಮ್ಮೇಳನದ ಊಟದ ಕೌಂಟರ್ ನಲ್ಲಿ ಮಾಂಸಹಾರ ವಿತರಣೆ ಮಾಡಿದ್ದಾರೆ. ಇನ್ನು ಈ ಬಾಡೂಟ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಅನೇಕ ಸಾಹಿತ್ಯ ಆಸಕ್ತರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆ ಬಾಡೂಟಕ್ಕೆ ಫೇಮಸ್ ಹಾಗೆಂದ ಮಾತ್ರಕ್ಕೆ ಸಾಹಿತ್ಯ ಸಮ್ಮೇಳನದಲ್ಲಿ ಈ ರೀತಿಯಾಗಿ ಬಾಡೂಟವನ್ನು ಹಂಚಿಕೆ ಮಾಡುವುದು ಎಷ್ಟು ಸರಿ ಎಂದು ಅನೇಕ ಸಾಹಿತ್ಯ ಆಸಕ್ತರು ಕೂಡ ಪ್ರಶ್ನೆ ಮಾಡಿದ್ದಾರೆ.
ಇಂದು ಸಮ್ಮೇಳನಕ್ಕೆ ಬಂದ ಸಾಹಿತ್ಯ ಆಸಕ್ತರಿಗೆ ಮುದ್ದೆ ಸೊಪ್ಪಿನ ಸಾಂಬಾರ್, ಅನ್ನ, ರಸಂ, ಮಜ್ಜಿಗೆ, ಸಂಡಿಗೆ ಹಾಗೂ ಬಾದುಷಾವನ್ನು ಸಾಹಿತ್ಯ ಸಮ್ಮೇಳನ ಆಯೋಜಕರು ವಿತರಣೆ ಮಾಡಿದ್ದಾರೆ.