Thursday, December 12, 2024
Homeಜಿಲ್ಲೆತುಮಕೂರುಮಧುಗಿರಿ ಹೆಮ್ಮೆ ಏಕಶಿಲಾ ಬೆಟ್ಟಕ್ಕೆ ಬೇಕಿದೆ ಮೂಲಭೂತ ಸೌಕರ್ಯಗಳು..!

ಮಧುಗಿರಿ ಹೆಮ್ಮೆ ಏಕಶಿಲಾ ಬೆಟ್ಟಕ್ಕೆ ಬೇಕಿದೆ ಮೂಲಭೂತ ಸೌಕರ್ಯಗಳು..!

ತುಮಕೂರು | ಮಧುಗಿರಿ ಕ್ಷೇತ್ರದ ಜನರ ಬಹು ದಿನಗಳ ಬೇಡಿಕೆಯಾದ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಕನಸು ನನಸಾಗಿಸುವ ದಿನಗಳು ಸಮೀಪವಾಗುತ್ತಿದ್ದರೂ ಸಹ ಬೆಟ್ಟದ ಸಮೀಪ ಮೂಲಭೂತ ಸೌಕರ್ಯಗಳು ಹಲವು ವರ್ಷಗಳಿಂದ ಪ್ರವಾಸಿಗರಿಗೆ ಮರೀಚಿಕೆಯಾಗಿಯೇ ಉಳಿದಿದೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ವಿಶ್ವ ವಿಖ್ಯಾತಿ ಪಡೆದಿರುವ ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ರಜಾದಿನಗಳಲ್ಲಿ ಸಾವಿರಾರು ಜನರು  ಬಂದು ಹೋಗುತ್ತಿದ್ದು, ಇಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ,  ತಂಗುದಾಣ, ಉದ್ಯಾವನ, ಕ್ರಮಬದ್ಧವಾದ ವಾಹನಗಳ ನಿಲುಗಡೆ ಸಮಸ್ಯೆಗಳನ್ನು ಚಾರಿಣಿಗರಿಗೆ ಇಲ್ಲಿ ಎದುರಾಗಿವೆ.

ಈ ಹಿಂದೆ ಕೆ ಎನ್ ರಾಜಣ್ಣನವರು ಶಾಸಕರಾಗಿದ್ದ ಅವಧಿಯಲ್ಲಿ ಪ್ರವಾಸಿಗರಿಗೆ ಅನೂಕೂಲವಾಗಲೆಂದು, ಅವರೇ ಖುದ್ದಾಗಿ ಮಧುಗಿರಿ ಬೆಟ್ಟವನ್ನು ಅಧಿಕಾರಿಗಳೊಂದಿಗೆ ಹತ್ತಿ ಸಾಧಕ ಭಾದಕಗಳನ್ನು ಅರಿತು , ಮುಂಬಯಿಯ ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ರೋಪ್ ವೇ ಆಳವಡಿಕೆಯ ಬಗ್ಗೆ ಸರ್ವೇಕಾರ್ಯ ನಡೆಸಿದ್ದರು. ಜತೆಯಲ್ಲಿ ಭದ್ರತಾ ವ್ಯವಸ್ಥೆ ಮತ್ತು ಕೆಲ ಸೂಚನಾ ಫಲಕಗಳು, ಶುದ್ಧಕುಡಿಯುವ ನೀರಿನ ಘಟಕ ಆಳವಡಿಕೆಗೆ ಸಂಬಂಧಪಟ್ಟವರಿಗೆ  ಸೂಚಿಸಿದ್ದರು ಆದರೆ ಆ ನೀರಿನ ಘಟಕವು ಇಂದೂ  ದುಸ್ಥಿತಿಗೆ ತಲುಪಿದೆ.

ಅಂದೂ ಮಳೆಗಾಲ ಸಂಧರ್ಭ ಎದುರಾಗಿ ಬೆಟ್ಟದಲ್ಲಿನ ಮಹಾನವಮಿಯ ದಿಬ್ಬ, ಮೆಟ್ಟಿಲುಗಳು ಹಾಳಾಗಿ ಹೋಗಿದ್ದವು,  ಸ್ಥಳೀಯ ಗ್ರಾಮದ ಪುರಾತತ್ವ  ಇಲಾಖೆಯ ಅಧಿಕಾರಿಯೊಬ್ಬರಿಗೆ ಪುರಾತತ್ವ ಇಲಾಖೆಯ ವತಿಯಿಂದ ಅನುದಾನ ಬಿಡುಗಡೆ ಮಾಡಿಸಿ ದುಸ್ಥಿತಿಗೆ ತಲುಪಿದ್ದ ಪಳೆಯುಳಿಕೆಗಳಿಗೆ ಕಾಯಕಲ್ಪ ಕಲ್ಪಿಸಿ, ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದರು.

ನಂತರ ಆ ಅಧಿಕಾರಿ ನಿವೃತ್ತಿ ಹೊಂದಿದ ನಂತರ ಬೆಟ್ಟದ ಬಗ್ಗೆ ಇಲಾಖೆಯು ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಿಲ್ಲ ಬೆಟ್ಟದ ಅಭಿವೃದ್ಧಿಯು ಮರೀಚಿಕೆಯಾಗಿಯೇ ಉಳಿದು ಹೋಯಿತು.

ಬೆಟ್ಟದ ಮುಂಭಾಗ ಶೌಚಾಲಯ ನಿರ್ಮಾಣವಾಗಿ ವರುಷಗಳೇ ಉರುಳಿವೆ ಆದರೆ ಇನ್ನೂ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕವನ್ನು ಗುತ್ತಿಗೆದಾರ  ಕಲ್ಪಿಸಿಲ್ಲ, ಬೃಹತ್ ನೀರಿನ ಸಿಂಟೆಕ್ ಟ್ಯಾಂಕ್ ಗಳನ್ನು ಆಳವಡಿಸಿಲ್ಲದೆ ಹೋಗಿದ್ದು ಪ್ರವಾಸಿಗರು ಶೌಚಕ್ಕಾಗಿ ಒಳಾಂಗಣಾದ ಮೈದಾನವನ್ನೇ ಬಳಸಿ ಕೊಳ್ಳುವಂತಾಗಿದೆ.

ಕೋಟೆಯೊಳಗೆ ಪ್ರತಿ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ, ಕೋಟೆ ಮೇಲೆಲ್ಲಾ ಅನಾವಶ್ಯಕ  ಬೃಹತ್ ಎತ್ತರದ  ಗಿಡಗೆಂಟೆಗಳು ಬೆಳೆದು ನಿಂತಿದ್ದು ಸೊಳ್ಳೆಗಳ, ವಿಷ ಜಂತುಗಳ ಅವಾಸ  ಸ್ಥಾನವಾಗಿ ಬಿಟ್ಟಿದೆ. ಪುರಾತನ ಕಟ್ಟಡ ಗಳು ಹಾಳಾಗುತ್ತಿವೆ , ಬೃಹತ್ ಕಲ್ಯಾಣಿಯು ಸಹ ಕೊಳಕಿನಿಂದ ಕೂಡಿ ಗಬ್ಬೇದು ನಾರುತ್ತಿದೆ, ಒಳ ಭಾಗದಲ್ಲಿರುವ

ದೊಡ್ಡ ದೊಡ್ಡ ಮೋರಿಗಳು ಕಟ್ಟಿಕೊಂಡಿವೆ. ಮಳೆಗಾಲ ಹತ್ತಿರ ವಾಗುತ್ತಿರುವುದರಿಂದ ಮೋರಿಯ ನೀರು ಸರಿಯಾಗಿ ಹೋಗದಂತಹ ಪರಿಸ್ಥಿತಿ ಎದುರಾಗಿದೆ.

ಪ್ರವಾಸಿಗರಾದ ನಗೀನ್ ತಾಜ್ ಮಾತನಾಡಿ, ನನ್ನದು ತವರು ಮನೆ  ಮಧುಗಿರಿ ಯಾಗಿದೆ ಈಗ ನಾನು ಬೆಂಗಳೂರಿನಲ್ಲಿ ವಾಸವಿದ್ದು ಇಲ್ಲಿ ಕುಡಿಯಲು ನೀರಿಲ್ಲ ಹಾಗೂ ಶೌಚಾಲಯದ  ವ್ಯವಸ್ಥೆ ಇಲ್ಲವಾಗಿದ್ದು ಶೌಚಕ್ಕಾಗಿ ಎಲ್ಲಿಂದರೆಲ್ಲಿ ಹೋಗಲು ಆಗುವುದಿಲ್ಲ ಎಂದು ತಿಳಿಸಿದರು.

ಇತ್ತೀಚಿನ ಚುನಾವಣಾ ಪ್ರಚಾರದಲ್ಲಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮತ್ತು ಅಭಿವೃದ್ಧಿ ಮಂತ್ರ ಪಠಿಸಿ ನುಡಿದಂತೆ ನಡೆಯುವವರಾದ ಕೆ.ಎನ್.ರಾಜಣ್ಣ ನವರು ಸಚಿವರಾಗಿದ್ದು ಬೆಟ್ಟಕ್ಕೆ ಅಗತ್ಯ ಮೂಲಭೂತ ಸೌಕರ್ಯ ದೊರೆಯುವಂತೇ ಕೆಲ ತಿಂಗಳುಗಳಲ್ಲಿಯೇ ಮಾಡಿಯೇ ತೀರುತ್ತಾರೆಂಬುದು ಕ್ಷೇತ್ರದ ಜನರು ಆಶಯ ವ್ಯಕ್ತ ಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments