ತುಮಕೂರು | ಅನಗತ್ಯ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಚಾಕು ಇರಿತವಾಗಿರುವಂತಹ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದಂಡೀಪುರದಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ದಂಡೀಪುರ ವಾಸಿ ಚಂದ್ರ ಕೊಡಿಗೇನಹಳ್ಳಿ ಗ್ರಾಮದ ನಂದಕುಮಾರ್ ಎನ್ನುವವರ ನಡುವೆ ಬುಧವಾರ ರಾತ್ರಿ ಅನಗತ್ಯ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಚಂದ್ರ ಎಂಬುವವರು ನಂದನ್ ಮೇಲೆ ಗಲಾಟೆ ಮಾಡಿ ಚಾಕುವಿನಿಂದ ಹೊಟ್ಟೆ, ತಲೆ ಮತ್ತು ಕೈ ಭಾಗಗಳಿಗೆ ಇರಿದಿದ್ದಾರೆ.
ಚಾಕುವಿನಿಂದ ಇರಿದ ಆರೋಪಿ ಚಂದ್ರ ಸ್ಥಳದಿಂದ ಪರಾರಿಯಾಗಿದ್ದು, ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಂದ ಕುಮಾರ್ ಗೆಚಿಕಿತ್ಸೆ ನೀಡಲಾಗುತ್ತಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.